ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆಲವರ ಮನೆಯ ಲೈಬ್ರರಿಗಳು..

b m basheer

ಬಿ ಎಂ ಬಷೀರ್ 


ಕೆಲವರ ಮನೆಯ
ಲೈಬ್ರರಿಗಳು
ಅವರ ಡೈನಿಂಗ್ ಟೇಬಲ್
ಮೇಲಿರುವ ಪ್ಲಾಸ್ಟಿಕ್
ಬಾಳೆಹಣ್ಣುಗಳಂತೆ
ಆಕರ್ಷಿಸುತ್ತವೆ
books
ಮನೆಗೊಂದು ಲೈಬ್ರರಿ ಬೇಕು
ಎಂದು ಕಪಾಟು ತುಂಬಾ
ಪುಸ್ತಕಗಳ ತಂದು ಸುರಿದೆ
ಇದೀಗ ಜಿರಳೆಗಳೆಲ್ಲ
ಪಂಡಿತರಂತೆ ಮನೆ ತುಂಬಾ
ಓಡಾಡುತ್ತಿವೆ

ಶ್ರೀಮಂತನ ಮನೆಯ
ಕಪಾಟಿನಲ್ಲಿ ಆರಾಧಿಸಲ್ಪಡುವ
ಗೋಕಾಕರ ಮಹಾ ಕಾವ್ಯದ
ದರದಲ್ಲಿ
ಬಡ ಓದುಗನೊಬ್ಬ ದೇವನೂರರ
ಎಲ್ಲ ಕೃತಿಗಳನ್ನು ಕೊಂಡು ಓದಬಹುದಿತ್ತು

ಬಡ ಓದುಗನ ಮುಂದೆ
ಇದು ನನ್ನ ಲೈಬ್ರರಿ ಎಂದು ಕೊಚ್ಚಿಕೊಳ್ಳುವ
ಶ್ರೀಮಂತನಿಗೆ ಗೊತ್ತಿಲ್ಲ
ಆ ಕಪಾಟು ಲೇಖಕರ ಗೋರಿ
ಎನ್ನೋದು

ನನ್ನ ಲೈಬ್ರರಿಯಲ್ಲಿ
ಅವಳಿಗಿಷ್ಟವಾದುದು
ಅಡುಗೆ ಪುಸ್ತಕ ಮಾತ್ರ!
ಸಾಹಿತ್ಯಕ್ಕೆ ಅನ್ನದ ಪರಿಮಳವಿದೆ
ಎನ್ನೋದನ್ನು ಸಾಬೀತು
ಮಾಡಿದ್ದಾಳೆ ಅವಳು

ಮನೆಯಲ್ಲಿ ಅಡುಗೆ ಅನಿಲ
ಮುಗಿದಾಗೆಲ್ಲ
ಅವಳು ನನ್ನ ಲೈಬ್ರರಿ ಮುಂದೆ
ಅನುಮಾನಾಸ್ಪದವಾಗಿ ಓಡಾಡುವಾಗ
ನನಗೆ ಭಯವಾಗುತ್ತದೆ

‍ಲೇಖಕರು admin

26 April, 2016

5 Comments

  1. Sangeeta Kalmane

    ಚೆನ್ನಾಗಿದೆ ವಿಡಂಬನೆ☺

  2. ಕಾವ್ಯಾ ಕಡಮೆ ನಾಗರಕಟ್ಟೆ

    ಬಷೀರ್ ಸರ್, ವಾಹ್! ಎಷ್ಟು ಫ್ರೆಶ್ ಆಗಿವೆ ಪದ್ಯಗಳು. ಪುಟ್ಟ ಪುಟ್ಟ ಬಿಡಿ ಪದ್ಯಗಳಂತೆಯೂ, ಇಡಿಯಾದ ಪೂರ್ಣ ಕವಿತೆಯಂತೆಯೂ ಏಕಕಾಲದಲ್ಲಿ ಓದಿಸಿಕೊಳ್ಳುತ್ತದೆ. ಮತ್ತೆ ಮನಸ್ಸಿನೊಳಗೂ, ನಾಲಿಗೆಯ ಮೇಲೂ ಸುಲಭವಾಗಿ ನೆನಪುಳಿಯುತ್ತವೆ.. ಆಧುನಿಕ ಜನಪದದಂಥ ಕವಿತೆ ಓದಿಸಿದ್ದಕ್ಕೆ ಒಂದು ಹೃತ್ಪೂರ್ವಕ ಥ್ಯಾಂಕ್ಸ್ ನಿಮಗೆ:)

  3. smitha

    Thattuva kavithegalu–smitha Amrithraj.

  4. Shama, Nandibetta

    “ಮನೆಯಲ್ಲಿ ಅಡುಗೆ ಅನಿಲ
    ಮುಗಿದಾಗೆಲ್ಲ
    ಅವಳು ನನ್ನ ಲೈಬ್ರರಿ ಮುಂದೆ
    ಅನುಮಾನಾಸ್ಪದವಾಗಿ ಓಡಾಡುವಾಗ
    ನನಗೆ ಭಯವಾಗುತ್ತದೆ”

    ಇಡಿಯಾಗಿ ಬಿಡಿಯಾಗಿ ಹೇಗೆ ಓದಿದರೂ ಚೆಂದ
    Top..

  5. ಹಜರತ್ ಅಲಿ ದೇಗಿನಾಳ

    ಬಶೀರ ಸರ್ ಜೀ ಕ್ಯಾ ಬಾತ್ ಹೈ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading