ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆಲವರಿಗೆ ದಾಹ ಕಡಿಮೆ ಸಖೀ..

ಬಿ ಎಂ ಹನೀಫ್

ಮೊನ್ನೆ ರಾಯಚೂರಿನ ಲೋಹಿಯಾ ಪ್ರತಿಷ್ಠಾನ ಮತ್ತು ಘಾಲಿಬ್ ಟ್ರಸ್ಟ್ ಗೆಳೆಯರು ಸೇರಿ ನಡೆಸಿದ ಘಾಲಿಬ್ ಸ್ಮರಣೆ ಕಾರ್ಯಕ್ರಮ ಅನನ್ಯ ಅನ್ನಿಸಿತು. ಅಲ್ಲಿಗೆ ಹೋಗಿ ಬಂದ ಬಳಿಕ ನನಗೆ ೨-೩ ದಿನ ಘಾಲಿಬ್ ಗುಂಗು. ಘಾಲಿಬ್ ರ ಉರ್ದು, ಪರ್ಷಿಯನ್, ಟರ್ಕಿಷ್ ಭ಼ಾಷೆಗಳ ಬನಿಯನ್ನು ಕನ್ನಡದಲ್ಲಿ ಹಿಡಿದಿಡುವುದು ಕಷ್ಟ. ಹಾಗಿದ್ದೂ ನನ್ನ ಕೈಲಾದ ಒಂದೆರಡು ಅನುವಾದಗಳು ಇಲ್ಲಿವೆ

 

 


ಪ್ರೇಮದ ನೋವು ಅದೆಷ್ಟೇ ಮಾರಣಾಂತಿಕವಾಗಿರಲಿ
ಪುರುಷರಿಗೆ ಅದು ಬಿಟ್ಟು ಬೇರೆ ದಾರಿಯೇ ಇಲ್ಲ
ಪ್ರೀತಿಯಿಲ್ಲದಿದ್ದರೂ ಅವನ ಹ್ರದಯ ನರಳುವುದು
ನರಳಲೆಂದೇ ಇರುವ ವಸ್ತುಗಳ ಬಯಸಿ.


ಕೆಲವರಿಗೆ ದಾಹ ಕಡಿಮೆ ಸಖೀ
ಇನ್ನು ಹಲವರಿಗೆ ಸಾಕಷ್ಟು ಕುಡಿಯಲು ಸಿಗದು
ನೀನು ಮದ್ಯದ ಭೋರ್ಗರೆವ ಕಡಲಾದರೆ
ನಾನು ದಾಹ ತುಂಬಿ ನಿಂತ ತೀರ
ಇನ್ನಷ್ಟು ಅಗಲವಾಗುತ್ತಲೇ ಕೇಳುತ್ತೇನೆ
ಮತ್ತಷ್ಟು ನೀರಾ ನೀರಾ …
…..

‍ಲೇಖಕರು admin

31 December, 2015

3 Comments

  1. ಲಕ್ಷ್ಮೀಕಾಂತ ಇಟ್ನಾಳ

    ಸುಂದರ ಅನುವಾದಗಳು ಹನೀಫ ಅವರೇ….

  2. Vijaya lakshmi S.P.

    ಸರ್ , ಅನುವಾದ ಬಹಳ ಸುಂದರವಾಗಿದೆ . ತೀವ್ರತೆಗೆ ಚೂರೂ ಮೋಸವಾಗಿಲ್ಲ . ಇನ್ನಷ್ಟು ಅನುವಾದಿಸಿ. ನಾವೂ ನಿಮ್ಮಂತೆ ಗುಂಗಿನಲ್ಲಿ ಸಿಕ್ಕಬೇಕು .

  3. ವೀರಣ್ಣ ಮಂಠಾಳಕರ್

    ಘಾಲಿಬ್‍ರ ಬರಹಕ್ಕೆ ನಿಮ್ಮ ಅನುವಾದ ಚೆನ್ನಾಗಿದೆ ಸರ್. ಕನ್ನಡಿಗರಿಗೆ ಅವರ ಬರಹಗಳರಿನ್ನಷ್ಟು ಪರಿಚಯಿಸುವುದಕ್ಕೆ ಪ್ರಯತ್ನಿಸಿ. ನೇರ ನಿಷ್ಠುರತೆಯಿಂದ ಕೂಡಿರುವ ಘಾಲಿಬ್‍ರ ಪ್ರೀತಿಯ ಕುರಿತ ಬರಹಗಳಲ್ಲಿ ವಾಸ್ತವಾಂಶ ಅಡಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading