ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆಡುವುತ್ತಾ ಹೋಗಬೇಕು …

ಶಿವಕುಮಾರ ಮಾವಲಿ 

ಗಾಂಧಿಯೇಕೆ ಗ್ರೇಟ್ ಬ್ರಿಟನ್ನಿ‌ನಲಿ ?
ಬುದ್ದನೇಕೆ ಭಾರತದಲಿ ?
ಮಂಡೇಲನೇಕೆ ಮುಂಬೈನಲಿ ?
ಬಸವನೇಕೆ ಲಂಡನ್ನಿನಲಿ ?
ನರೇಂದ್ರನೇಕೆ ಚಿಕಾಗೋದಲಿ ?
ಕ್ರಿಸ್ತನೇಕೆ ಕೋಲ್ಕತಾದಲಿ ?
ಮಹಮದನೇಕೆ ಅರೇಬಿಯಾದಲಿ ?

ಇವರೇನು ದೇವರುಗಳೇ ?
ಮೂರ್ತಿಗಳಾಗಿ
ಮೂಕರಾಗಿ
ಜಗದ ಮೂಕವೇದನೆಯ ನೋಡುತ್ತ ನಿಂತಿರಲು

ಕಂಡಕಂಡಲ್ಲಿ ಇವರ ಪುತ್ಥಳಿಗಳನ್ನು
ಕೆಡುವುತ್ತಾ ಹೋಗಬೇಕು
ಮಾನವ ಮಹಾತ್ಮನಾಗಬಲ್ಲ
ದೇವರು ಎಂದುಕೊಂಡವರಷ್ಟೇ
ಕೇವಲ ಮೂರ್ತಿಗಳಾಗಿ
ಮೂಕರಾಗಿಯೇ ಇರಬಲ್ಲರು

ಆದರೂ
ಅಯೋಧ್ಯೆಗೆ ರಾಮನದೊಂದು
ರಹೀಮನದೊಂದು ತುರ್ತು ಪುತ್ಥಳಿ ಬೇಕಿದೆ
ಸರಕಿಗೇನು ಬರ್ಕಾತ್ತಿಲ್ಲ
ಮೇಲಿನ ಮಹಾತ್ಮರ ಪುತ್ಥಳಿಗಳನ್ನು ಕೆಡವುತ್ತಾ ಹೋದರಾಯ್ತು

‍ಲೇಖಕರು avadhi

7 March, 2018

1 Comment

  1. Nasrin

    Very nice….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading