– ಜಾನ್ ಸುಂಟಿಕೊಪ್ಪ
ಅಲ್ಲೊಂದು ಇಲ್ಲೊಂದು
ಎಲ್ಲೆಲ್ಲೂ ಕಾಣುತ್ತವೆ
ನಾಯಿ ಮರಿಗಳ಼ಂತೆ,,..
ಸಿಂಬಳ ಸುರಿವ ಮೂಗು
ಕುಂಡಿ ಕಾಣೋ ಚಡ್ಡಿ …
ಕಣ್ಣು ಮಾತ್ರ –
ಪ್ರಖರ ಕೆಂಡ…!?

ಕೂಸಿಗೊಂದು ಕೂಸು
ನಗಲು ಅಳಲು ಆಟವಾಡಲು
ಮತ್ತೊಂದು ಮಾಡಲು ,…
ಜಿನುಗುವ ಕಣ್ಣ ಹನಿಗಳು ಹೇಳುತ್ತವೆ
ಹೇಳಬಾರದ ಕತೆಗಳನ್ನು,
ರೋಬಸ್ಟಾ ಗಿಡದ ನೆರಳಿನ
ಅಸಹ್ಯ ಕಹಿಯನ್ನು ,,,
ಕಾಫಿ ಗೋದಾಮಿನಡಿಯಲಿ
ನೀಟಾಗಿ ಮಲಗಿದ-
ಸದ್ದಿಲ್ಲದ ಸತ್ಯವನ್ನು …!?
ಮೇಲೆ ಗರಿ ಗರಿ ನೋಟು,
ಜತೆಗೊಂದಿಷ್ಟು ನಿರ್ಲಕ್ಷ್ಯ,,.
ಅಸ್ಸಾಮೋ!? ಬಾಂಗ್ಲಾವೋ!?
ಪಾಕಿಸ್ತಾನವೂ ಆದೀತು ,..!?
ಮನುಷ್ಯತ್ವ ತೋರಬೇಕಾದುದು-
ಮಾನವರಿಗೆ,…
ನಮ್ಮವರಿಗಲ್ಲ,…!?






Excellent