ಕುಸುಮಬಾಲೆ ಕಾಲಂ : ಹೋಗಿ ಬರುತ್ತೇನೆ..ನಮಸ್ಕಾರ

ಇಷ್ಟೊಂದು ಯಾಕೆ ಭಾವುಕಳಾಗಿದ್ದೇನೆ? ತಿಳಿಯುತ್ತಿಲ್ಲ, ಆದರೆ ಹೊರಟು ನಿಂತಿದ್ದೇನೆ. ಹೊಸಿಲಲ್ಲಿ ಕೂತು ನಾಕು ಮಾತು ಹೇಳಬೇಕಿದೆ.ಕೇಳಿಬಿಡಿ.
ಏನೂ ಇಲ್ಲದೆ ಈ ಊರಿಗೆ ಬಂದೆ.ಅಲ್ಲೀಇಲ್ಲೀಇದ್ದೆ.ಕಾಸಿಲ್ಲದೇ ಕಷ್ಟ ಪಟ್ಟೆ.ಸಿಕ್ಕ ಸಿಕ್ಕಲ್ಲಿ ಅಲೆದೆ.ಈಗ ಹೀಗಿದ್ದೇನೆ.ಎಲ್ಲೆಲ್ಲಿಂದಲೋ ಬದುಕು ಅರಸಿ ಮಹಾನಗರಗಳಿಗೆ ಬರುವ ಎಷ್ಟೋ ಜನರಕಥೆಯಿದು.ಸಾಮಾನ್ಯವಾಗಿಇಂತಾ ಕಥೆಗಳನು ಹುಡುಗರು ಹೆಚ್ಚು ಹೇಳುತ್ತಾರೆ.ಮತ್ತುಅನುಭವಿಸುತ್ತಾರೆ.ಅಲ್ಲೀಇಲ್ಲೀಇಂತಹ ಹೆಣ್ಣುಮಕ್ಕಳೂ ಇರುತ್ತಾರೆ. ಆ ಲಿಸ್ಟಿನಲಿ ನಾನೂ ಇದ್ದೇನೆಅನ್ನುವುದು ನನ್ನ ಹೆಮ್ಮೆ!
ಎಲ್ಎಲ್ ಬಿ ಓದಿ, ಒಂದೇ ವಾರಕೋರ್ಟಿಗೆ ಹೋಗಿ, ನಮಸ್ಕಾರ ಹೊಡೆದುಬಿಟ್ಟೆ.ಮೈಸೂರುಆಕಾಶವಾಣಿಯಉದ್ಘೋಷಕೀ ಕೆಲಸ, ಕೃಷಿವಿಭಾಗದ ಕಾರ್ಯಕ್ರಮಗಳ ಮಾಡುತ್ತಿದ್ದೆ.ಆಗೀಗ ಪತ್ರಿಕಾ ಬರಹ.ಜೊತೆಗೆಗ್ರಾಮಭಾರತದ ಏಳ್ಗೆ, ಮನೆ ಕೈಗಾರಿಕೆ, ಕೃಷಿಯ ವಿವಿಧ ಸಾಧ್ಯತೆಗಳು. ತಲೆಯಲ್ಲಿಎಷ್ಟೆಲ್ಲಾತುಂಬಿಕೊಂಡಿತ್ತು.ಜಮೀನಿನಲ್ಲಿ ಗುಲಾಬಿ ಗಿಡ ಹಾಕಲು ಯೋಚಿಸಿದ್ದೆ. ಮನೆಯಲ್ಲಿ ಪ್ರಾಯೋಗಿಕವಾಗಿ ಹುತ್ತದ ಮಣ್ಣಿನಿಂದ ಸೋಪನ್ನೂ ತಯಾರಿಸಿದ್ದೆ.ಶೇಪ್ಗೀಪ್ಎಲ್ಲ ಬಂತು.ಆದರೆಅದಕ್ಕೆ ಪಿಯರ್ಸ್ ಸೋಪಿನಂತಗ್ಲಾಸ್ ಫಿಸಿಷಿಂಗ್ ಕೊಡದಿದ್ದರೆ ವಕರ್್ಔಟ್ಆಗಲ್ಲ .ಬೇಗ ಕರಗುತ್ತದೆ.ಅದಕೇನುಟೆಕ್ನಾಲಜಿ ಬಳಸುತ್ತಾರೆ?ಅನ್ನುವ ಹುಡುಕಾಟದಲ್ಲಿದ್ದೆ.ವಿವಿಧ ಸೊಪ್ಪುಗಳ ಹಾಕಿ ನೋವಿನೆಣ್ಣೆ ತಯಾರಿಸಿಯಾಗಿತ್ತು.ಇದೆಲ್ಲ ಪ್ರಯೋಗಗಳು ಜಾರಿಯಲ್ಲಿರುವಾಗಲೇಆವತ್ತೊಂದು ಫೋನ್ಕರೆ ಬಂದಿತ್ತು.
2006 ಅಕ್ಟೋಬರ್ ಹದಿನಾಲ್ಕರ ನಡು ಮಧ್ಯಾಹ್ನ ಹೊಲದಲ್ಲಿ ಉಳುತ್ತಿದ್ದ ಅಪ್ಪನಿಗೆ ಊಟ ಕೊಟ್ಟು ಬರುತ್ತಿದ್ದೆ. ಊರೊಳಗೆ ಎಂಟ್ರೀಕೊಡುವಾಗಲೇತಲೆಮೇಲೆಯಾರೋಅಕ್ಷತೆ ಹಾಕಿದಂತಾಯ್ತು.ತಲೆಎತ್ತಿನೋಡಿದರೆ, ಮರದ ಮೇಲಿಂದಯಾವುದೋ ಹಕ್ಕಿ ಕಕ್ಕ ಮಾಡಿತ್ತು.ಇಶ್ಯೀ ಹಿಚಿಕಿ ಪಿಚಿಕಿ..ಮನೆಗೆ ಬಂದು ಬೀಗ ತೆಗೆವವಳಿಗೆ ಒಳಗಿನ ಲ್ಯಾಂಡ್ ಲೈನ್ರಿಂಗ್ ಕೇಳಿಸಿತ್ತು.ಊಟದ ಬುಟ್ಟಿಇಟ್ಟು ಫೋನೆತ್ತಿಕೊಂಡೆ.ಕುಸುಮಾನಾ ಮಾತಾಡೋದು?ನಾನಮ್ಮದೇವಾನಂದ್ ಮಾತಾಡ್ತಿದೀನಿ ಎಷ್ಟೋ ವರ್ಷದ ಪರಿಚಯದಂತೆ ಹೇಳಿದರು.ನಿತ್ಯ ಮುಕ್ತ ಧಾರಾವಾಹಿ ನೋಡುತ್ತಿದ್ದ ನನಗೂ ಅವರಧನಿ ಗೊತ್ತಾಯಿತು. ನೀವು ಬರೆದದ್ದನ್ನ ಸೀತಾರಾಮ್ ಸಾರ್ಓದಿದಾರೆ. ನೀವು ಆಯ್ಕೆಯಾಗಿದ್ದೀರಿ.ನಮ್ ಸೀರಿಯಲ್ ಟೀಂಜೊತೆ ಕೆಲಸ ಮಾಡಲು ಆಸಕ್ತಿ ಇದ್ರೆ ಸೋಮವಾರ ಬಂದುಬಿಡಿ ಇತರ ವಿವರಗಳ ಹೇಳಿ ಫೋನಿಟ್ಟರು.
ಮುಕ್ತದಾರಾವಾಹಿ ಮುಗಿವಾಗ,ಕನರ್ಾಟಕದಯುವಬರಹಗಾರರಲ್ಲಿಯಾರಾದರೂ ಟಿವಿ ದಾರಾವಾಹಿಗೆ ಬರೆಯಲು ಆಸಕ್ತಿ ಇದ್ದರೆಯಾವುದಾದರೂದೃಶ್ಯ ಬರೆದು ಕಳಿಸಿಅಂತಸೀತಾರಾಮ್ ಸರ್ಟಿವಿಯಲಿ ಹೇಳಿದ್ದರು, ಎಷ್ಟೋ ದಿನಗಳಾದ ಮೇಲೆ , ಇದ್ದಕ್ಕಿದ್ದಂತೆಯಾವತ್ತೋ ನೆನಪಾಗಿ ಬರೆದುಹಾಕಿದ್ದೆ. ಕರೆ ಬಂತು.ಆದರೆ ಬೆಂಗಳೂರಿಗೆ, ಪರಿಚಯವಿರದಊರಿಗೆ, ಒಬ್ಬಳೇ ಹಳ್ಳಿಹುಡುಗಿ ಹೋಗಬೇಕಾ?ಅದೂ ಸೀರಿಯಲ್, ಸಿನೆಮಾದವರ ಸಹವಾಸ.?? ಈಗಾಗಲೇ ಮದುವೆಯಾಗಿಲ್ಲಅಂತ ಆಡಿಕೊಳ್ತಿರೋರು ಈಗ ಬೆಂಗಳೂರಿಗೆ ಕಳಿಸಿದರೆ ಏನಂತಾರೋ.?ಹೆಣ್ಣು ನೋಡೋಕೆ ಬರೋರಿಗೇನು ಹೇಳೋದು? ಎಷ್ಟೆಲ್ಲಪ್ರಶ್ನೆಗಳು.ಎಲ್ಲದಕ್ಕೂಉತ್ತರ ಕಂಡುಕೊಳ್ಳಬೇಕಿತ್ತು.ಬದುಕಿನಅತಿಮುಖ್ಯ ನಿಧರ್ಾರವನ್ನುಎರಡು ದಿನದಲಿ ಮಾಡಬೇಕಿತ್ತು.ಹೋಗಿ ನೋಡ್ತೀನಿ.ಅಲ್ಲಿ ಹೇಗಿರತ್ತೋ ಏನೋ, ಸರಿಹೋಗಲಿಲ್ಲ ಅಂದರೆ ವಾಪಾಸು ಬರ್ತೀನಿ.ಟಿ.ಎನ್ ಸೀತಾರಾಮ್ ಅವರಜೊತೆ ಕೆಲಸ ಮಾಡೋಒಂದುಅನುಭವ ಸಿಗತ್ತಲ್ಲ ಸ್ವಲ್ಪ ದಿನ ನೋಡುವ.ಅಷ್ಟೊತ್ತಿಗೆ ಮಿಡಲ್ಕ್ಲಾಸ್ ಮನೆಗಳೊಳಗೆ ಹೀರೋಆಗಿದ್ದ ಸಿ ಎಸ್ಪಿ ಹೆಸರುಚೂರುಅವರ ಮನಸು ಕರಗಿಸಿತು.ಆದರೂ, ಹದಿನಾರಕ್ಕೇ ಹೆಣ್ಣುಮಕ್ಕಳನು ಮದುವೆ ಮಾಡಿ, ಮೀಸೆ ತಿರುವುವಊರಲ್ಲಿ, 23ರ ನನ್ನನ್ನು ಒಬ್ಬಳನ್ನೇ ಬೆಂಗಳೂರಿಗೆ ಆತಂಕದಿಂದಲೇಕಳಿಸಿದ ಅಪ್ಪಅಮ್ಮನನ್ನ ಮೆಚ್ಚಲೇಬೇಕು.
ಅಮ್ಮನ ಕಸಿನ್ ಒಬ್ಬರಿಗೆ ಫೋನು ಮಾಡಿ, ಸ್ವಲ್ಪ ದಿನ ಉಳಿದುಕೊಳ್ಳೋ ವ್ಯವಸ್ಥೆ ಮಾಡಿದರು.ಮರುದಿನ ಸಂಜೆ ಬಸವೇಶ್ವನಗರದ ಪವಿತ್ರ ಪ್ಯಾರಡೈಸ್ ಮುಂದೆ ನಿಂತೆ.16ರ ಬೆಳಿಗ್ಗೆ ಊರುಗೊತ್ತಿರದ ನನ್ನನ್ನು ಆ ಮನೆಯವರೇಜಯನಗರದಭೂಮಿಕಾಕಛೇರಿ ತಲುಪಿಸಿದರು.ನನ್ನನ್ನೂ ಸೇರಿಆರುಜನರಿದ್ದೆವು.(ಸಾವಿರಾರುಜನ ಸೀನ್ ಬರೆದು ಕಳಿಸಿದ್ದರಂತೆ.ಅವನೆಲ್ಲ ಬೇಜಾರಾದಾಗಓದುತ್ತಿದ್ದೆವು ನಾವು)ಅವತ್ತು ಸೀತಾರಾಮ್ ಸರ್ಕಪ್ಪು ಬಣ್ಣದ ಶರಟು ಹಾಕಿದ್ದರು.ನಾವು ಬಾಗಿಲ ಕಡೆ ನೋಡುತ್ತಿದ್ದರೆಅವರು ವಾಶ್ರೂಂ ನಿಂದ ಹೊರಬಂದು, ನನ್ನ ಸೀರಿಯಸ್ನೆಸ್ ಹಾಳುಮಾಡಿಬಿಟ್ಟರು.ಒಳಗೇ ಕಿಸಕ್ ಅಂದಿದ್ದೆ.

ಅಲ್ಲಿಂದ ಶುರುವಾಯಿತು ಹೊಸದಾರಿ.ಸೀರಿಯಲ್ ಬರವಣಿಗೆಅದು ಹೇಗೋ ನನಗೆ ಕುದುರಿಬಿಟ್ಟಿತ್ತು.ಒಂದೇ ಸೀನ್ ನ ಆರೂಜನ ಬರೆಯುತ್ತಿದ್ದೆವು.ಆದರೂ, ಆ ದಾರಾವಾಹಿಯ ಮೊದಲ ಎಪಿಸೋಡಿನಲ್ಲಿ ಸೀತಾರಾಮ್ ಸರ್ ಮತ್ತು ನಾನು ಬರೆದ ಸೀನ್ಗಳೇ ಶೂಟ್ಆಗಿದ್ದು,ಒಂದು ವಿಚಿತ್ರಕಾನ್ಫಿಡೆನ್ಸ್ಕೊಟ್ಟಿತ್ತು.(ಆ ಮೊದಲ ಸೀನ್ ಪೇಪರ್, ಸೀತಾರಾಮ್ ಸರ್ಅದನ್ನುತಿದ್ದಿದ್ದು, ಈಗಲೂ ಹಾಗೇ ಇಟ್ಟುಕೊಂಡಿದ್ದೇನೆ. ) ನಂತರದ ದಿನಗಳಲಿ ಅವರ ಕೋಪ, ಮಿಲಿಟರಿ ವರ್ತನೆ ಸಹಿಸಲಾರದೇ ,ಒಂದೆರಡೇ ತಿಂಗಳಲಿ ನಾಕು ಜನ ಕಳಚಿಕೊಂಡು, ಉಳಿದ ಒಬ್ಬಿಬ್ಬರು ಡೈರೆಕ್ಷನ್ ಡಿಪಾರ್ಟ್‌ಮೆಂಟ್ ಸೇರಿ. ಬರೆಯಲು ನಾನೊಬ್ಬಳೇ ಉಳಿದೆ.ವರುಷಗಳುರುಳಿ ನಾನೂ ಕಳಚಿಕೊಂಡೆ.ವೈಶಾಲಿ ಕಾಸರವಳ್ಳಿ ಮೇಡಂ, ನಾಗೇಂದ್ರ ಷಾ. ಆದಿಯಾಗಿ ಬಿ.ಸುರೇಶ್ವರೆಗೆ ಹಲವು ನಿರ್ದೇಶಕರಿಗೆ ಬರೆಯುತ್ತಾ, ಈಟಿವಿಯ ನಂತರ ಬಂದ ಹೊಸ ಚಾನೆಲ್ಗಳು ರಾಶಿ ಸೀರಿಯಲ್ಗಳು.ಬದಲಾದ ಅವುಗಳ ವರಸೆ ಎಲ್ಲ ನೋಡುತ್ತಾ.ವರುಷಗಳಾದವು 8.
ಈ ಸೀರಿಯಲ್ ಪಯಣದ ಕತೆಯೇಒಂದು ಪುಸ್ತಕವಾದೀತು, ಅದಿಲ್ಲಿ ಬೇಡ. ನೆಂಟರ ಮನೆಯ ಮುಜುಗರದಿಂದತಪ್ಪಿಸಿಕೊಂಡು ,ಮಲ್ಲೇಶ್ವರಂನ ಪಿಜಿಯಲ್ಲಿ ಉಳಿದು, ಬನಶಂಕರಿಗೆಓಡಾಡುತ್ತಾ. ಮೊದಲ ನಾಕು ತಿಂಗಳಲಿ, ತಿಂಗಳಿಗೆ ಎರಡು ಸಾವಿರದಲಿ (ಪಿಜಿಗೇ 1800) ಬದುಕಿದ್ದುಘನಘೋರ ದಿನಗಳು. ಜೊತೆಯಲಿ ಅನಾಥಭಾವಕಿತ್ತುತಿನ್ನುತ್ತಿತ್ತು. ಆಮೇಲೆ ಚುರುಕಾದೆ.ಇಗ್ನೋ(ಇಂದಿರಾಗಾಂಧಿ ಮುಕ್ತವಿ.ವಿ) ಅವರು ನಡೆಸುತ್ತಿದ್ದಎಫ್, ಎಂ ಜಯನಗರದಲೇಇತ್ತು.ಅಲ್ಲಿ ಸೇರಿದೆ.ಬೆಂಗಳೂರ ಆಕಾಶವಾಣಿಯ ವಿವಿಧಭಾರತೀ ಸೇರಿದೆ. ಬೆಳಗ್ಗೆ ನಾಲ್ಕಕ್ಕೆ ಎದ್ದುಎರಡು ಸೀನ್ ಬರೆದುವಿಧಾನಸೌಧದ ಬಳಿಯ ಆಕಾಶವಣಿಗೆ ಹೊರಟುಆರಕ್ಕೆ ಕೇಳುಗರಿಗೆ ಗುಡ್ಮಾರ್ನಿಂಗ್ ಹೇಳಿ,ಮಾತು ಮುಗಿಸಿ, ಹತ್ತಕೆಅಲ್ಲಿ ಹೊರಟು, ಆಫಿಸಿಗೆ ಬಂದು, ಉಳಿದ ಸೀನ್ಗಳ ಬರೆದು, ಸಂಜೆಇಗ್ನೋಗೆ ಹೋಗಿ ಅಲ್ಲಿಕಾರ್ಯಕ್ರಮ, ಸಂದರ್ಶನಗಳ ಮಾಡಿ, ಒಂದು ನರಪಿಳ್ಳೆಯೂ ಇರದ ಆ ಆಫಿಸಿನಲಿ ಜನರೇಟರ್ ಸಹ ಆಫ್ ಮಾಡಿ. ಬರುವ ವೇಳೆಗೆ ಹನ್ನೊಂದೂವರೆ.ಬಸ್ಸಿನ ಓಡಾಟ ಹೈರಾಣು ಮಾಡುತ್ತಿತ್ತು.ಮಲಗುವಂತಿಲ್ಲ. ಮತ್ತೆ ನಾಳೆಯ ಸೀನ್ಗಳ ಯೋಚನೆ. ಮಧ್ಯಾಹ್ನ ಮಾತ್ರ ಊಟ ಮಾಡಲು ಪುರುಸೊತ್ತಾಗುತ್ತಿತ್ತು.ಮಲ್ಲೇಶ್ವರಂನಿಂದಆಕಾಶವಾಣಿ, ಜಯನಗರ, ಮತ್ತೆ ಮ್ಲಲೇಶ್ವರಂ, ಆ ದಿನಗಳಕತೆಒಂದೆರಡಲ್ಲ.
ಆ ನಂತರಅವಕಾಶಗಳು ಹೆಚ್ಚಿದವು, ಮದುವೆಯಾಯಿತು, ನಮ್ದೇ ಮನೆಯಾಯಿತು.ಮಗುವಾಯಿತು, ಸಂಸಾರವಾಯಿತು.ನೆಂಟರಾದರು.ಸೀರಿಯಲ್ ಬಿಟ್ಟು ನ್ಯೂಸ್ಚಾನೆಲ್ ಸೇರಿದೆ.ಮತ್ತೇನೋ ಮಾಡಿದೆ.ಮತ್ತೆ ಸೀರಿಯಲ್ಗೇ ಮರಳಿದೆ.ಈಗ ಬದುಕಿನಎಲ್ಲದರಗ್ರೇಡ್ ಬದಲಾಗಿದೆ, ಪರಿಸ್ಥಿತಿ ಬದಲಾಗಿದೆಆದರೆಯುಧ್ದಇನ್ನೂಮುಂದುವರೆದಿದೆ.!
ಹಾಲಿದ್ದುದಾ? ಅಂತ ಕೇಳಿಕೊಂಡು ಬರೋರಿಗೆ ನಾವು ಪ್ರೀಯಾಗಿಕೊಟ್ಟುಬಿಡುತ್ತೇವೆ ಊರುಗಳಲಿ. ಇಲ್ಲಿಒಂದುಚೋಟಾ ಲೋಟಾ ಹಾಲಿಗೇ ಆರುರೂಪಾಯಿಕೊಟ್ಟದ್ದು.ಮೊದಲು ಬೆಚ್ಚಿಬಿದ್ದ ಸಂಗತಿ.ಆಮೆಲೆಲ್ಲ ಪರಿಚಿತವೂ, ಮಾಮುಲೂಆಯಿತು.ಸ್ಲಂ ಬದುಕಿನಿಂದ ಹಿಡಿದು, ಅತ್ಯಂತ ಶ್ರೀಮಂತ ಬದುಕಿನವರೆಗೆಎಲ್ಲವನ್ನೂ ನೋಡಿದೆ.ಒಡನಾಡಿದೆ.ಅದೆಲ್ಲೋ ಹಳ್ಳಿಮೂಲೆಯಲಿ ಕೂತು ನೋಡುತ್ತಿದ್ದ, ಪೇಪರಿನಲಿ ಓದಿ, ಗ್ರೇಟ್ಗ್ರೇಟ್ಅಂದುಕೊಂಡಿದ್ದ,ದೂರದ ನಕ್ಷತ್ರದಂತ ಮನುಷ್ಯರುಇಲ್ಲಿಎದುರೇ ಸಿಕ್ಕರು.ಒಡನಾಟಕೂ ಸಿಕ್ಕರು.ಬಹುತೇಕರು ಹತ್ತಿರದಲಿ ಕಂಡಷ್ಟೂಅಸಹ್ಯ ಅನಿಸಿದರು.ದೊಡ್ಡರಳೀಮರ ಉರುಳಿದಂತೆ, ದೊಡ್ಡ ವ್ಯಕ್ತಿಗಳ ದೊಡ್ಡತನ ಕಳಚಿಬಿದ್ದಿತ್ತು.ಭ್ರಮನಿರಸನ, ಸತ್ಯದರ್ಶನ!
ಚಾನೆಲ್ಗಳು ಹೆಚ್ಚಿದವು , ಮಾಲ್ಗಳು ಹೆಚ್ಚಿದವು. ಮೆಟ್ರೋ ಬರುತಿದೆ.ಈ ಊರುಎಷ್ಟೊಂದುಬದಲಾಗುತಿದೆ.ಜೊತೆಗೆನಮ್ಮೂರೂ.. ಇಲ್ಲಿನ ಬದಲಾಣೆಗೂಅಲ್ಲಿನ ಬದಲಾವಣೆಗೂಯಾವುದೋಅಗೋಚರ ಲಿಂಕ್ಇದೆ.ಅದೆಂತದೋಐಸ್ ಪೈಸ್ ಆಟ ನಡೆಯುತ್ತಿದೆ.ಈ ಆಟದಲಿ ನಾನು ಅವಿತಿದ್ದೇನೋ.ಕಣ್ಣಿಗೆ ಬಟ್ಟೆಕಟ್ಟಿದ್ದೇನೋ, ಆದರೆಖಂಡಿತವಾಗಿ ಭಾಗಿಯಾಗಿದ್ದೇನೆ. ಆ ಭಾಗವಹಿಸುವಿಕೆಕೂಡಅಗೋಚರ. ‘ದೂರದಿಂದಲೇಜೀವ ಹಿಂಡುತಿದೆಕಾಣದೊಂದು ಹಸ್ತಾ ಹೆಚ್, ಎಸ್, ವೆಂಕಟೇಶಮೂತರ್ಿಗಳ ಈ ಸಾಲನ್ನು ನಡುರಾತ್ರಿಯಲಿ ಯಾರೋಕಿವಿಯಲಿ ಜೋರಾಗಿ ಊದಿಹೋಗುತ್ತಾರೆ.ನಾನಿಲ್ಲಿ ಯಾಕಿದ್ದೇನೆ?ಏನು ಮಾಡುತ್ತಿದ್ದೇನೆ?ಯಾಕೆ ಮಾಡುತ್ತಿದ್ದೇನೆ? ಪ್ರಶ್ನೆಗಳು ನಿಲ್ಲಲಿಲ್ಲ. ಆ ಹುತ್ತದ ಮಣ್ಣಿನ ಸೋಪಿಗೆ ಗ್ಲಾಸ್ ಫಿನಿಶಿಂಗ್ ಕೊಡಬೇಕಿದೆ. ಪ್ರಶ್ನೆಗಳ ಉತ್ತರಅಲ್ಲಿ ಸಿಗಬಹುದು.ಸಿಗದಿರಲೂಬಹುದು.ಗೊತ್ತಿಲ್ಲ.
ಈಗ ಹೊರಟು ನಿಂತಿದ್ದೇನೆ ಮತ್ತೆ.ಹೊಸ್ತಿಲಲಿ ಕೂತು ಅಳುತ್ತಿದ್ದೇನೆ. ಯಾಕೆ ಅಳುತ್ತಿದ್ದೇನೆ? ಬತ್ತಿದ ಕಣ್ಣಿನವಳು ನಾನು,ಯಾರಿಗಾಗಿಇಷ್ಟೊಂದುಅಳುತ್ತಿದ್ದೇನೆ?ಈಗ ಊರತುಂಬ ಇರುವ ಗೆಳೆಯ-ಗೆಳತಿಯರಿಗಾಗಿಯೇ?ಜೊತೆಯಲಿ ಹುಟ್ಟದೆಯೂಆದಅಕ್ಕಂದಿರು? ತಮ್ಮಂದಿರು?ಬೇಸರವಾಗುತ್ತದೆ.ಆದರೆಕಣ್ಣೀರುಅವರ ಹೆಸರು ಹೇಳುತ್ತಿಲ್ಲ. ಮತ್ತೆಯಾಕೆ? ಈ ಊರಿಗಾಗಿ.!!
ಹೌದು. ಇಷ್ಟೆಲ್ಲಬಡಿದಾಟಗಳ ನಡುವೆ ನನ್ನೊಂದಿಗೆಇದ್ದದ್ದು ಮನುಷ್ಯರಲ್ಲ. ಈ ಊರು. ಈ ಅಪರಿಚಿತಊರು , ಪರಿಚಿತವಾಗಿ, ಆತ್ಮೀಯವಾಗಿ, ಕಡೆಗೆ ನನ್ನದೇಆಗಿಹೋದದ್ದುಒಂದುಆಪ್ತನಡೆ. ಮನುಷ್ಯರನ್ನು ಪ್ರೀತಿಸುವಂತೆಯೇ ನಾನು ಈಊರನ್ನು,ಜಯನಗರ, ಮಲ್ಲೇಶ್ವರಂ, ಗಾಂಧೀಬಝಾರುಗಳನು ಪ್ರೀತಿಸುತ್ತೇನೆ. ರಂಗಶಂಕರ, ಹೆಚ್ಎನ್,ಕಲಾಕ್ಷೇತ್ರ. ಸುಚಿತ್ರಾ.ಕನಕಪುರ ರಸ್ತೆ. ಕೆ.ವಿ. ಸುಬ್ಬಣ್ಣಆಪ್ತರಂಗಮಂದಿರ.ಜಯನಗರ ಫೋರ್ತ ಬ್ಲಾಕು.ಕೆ.ಎಚ್ಕಲಾಸೌದ. ರಾಗೀಗುಡ್ಡ. ಬನಶಂಕರಿ ಬಿ, ಡಿ,ಎಕಾಂಪ್ಲೆಕ್ಸೂ. ಬೆರಗು ಮೂಡಿಸಿದ ಮಾಲ್ಗಳು.ಲಾಂಗ್ಡ್ರೈವ್ನ ನೈಸ್ರೋಡು.ಹೋಟೆಲುಗಳು,ಪಾರ್ಕ್ ಗಳು.ಅಂಕಿತಾ ಪುಸ್ತಕ.ಮೆಟ್ರೋಟ್ರೇನು.ಶೂಟಿಂಗ್ ಸ್ಪಾಟುಗಳು.ರವಿಕಿರಣ್ ಹೌಸು. ಈ ಊರಿನಟ್ರಾಫಿಕ್ಕನ್ನುಕೂಡ ನಾನು ಪ್ರೀತಿಸುತ್ತೇನೆ. ನಗರಕ್ಕೂಒಂದು ಸೊಗಸಿದೆ.ಜೀವನೋತ್ಸಾಹವಿದೆ.ಚೆಲುವಿದೆ. ಹೃದಯವೂಇದೆ. ಅದುಕೂಡ ಮನುಷ್ಯರಂತೆಯೇ ನಮಗೆ ಸ್ಪಂದಿಸುತ್ತದೆ.ನಾವು ಪ್ರತಿಸ್ಪಂದಿಸಬೇಕಷ್ಟೆ.
ಯಾವ ಪರಿಚಿತಮನುಷ್ಯಮುಖವಿರದೆಯೂ ಬಸವನಗುಡಿ, ಗಾಂಧೀಬಝಾರು, ಜಯನಗರ ಫೋತರ್್ ಬ್ಲಾಕ್ಗಳು ನನ್ನದೇ ಅನಿಸುವಾಗ ,ಊರಿಗೂಒಂದು ಅಸ್ತಿತ್ವವಿದೆ. ಜೀವಂತಿಕೆಇದೆ ಅನಿಸುತ್ತದೆ. ಜಡರಸ್ತೆಯೂ ನಮ್ಮೊಂದಿಗೆಮಾತಾಡುತ್ತದೆ ಅನಿಸುತ್ತದೆ. ಬಿಲ್ಡಿಂಗೂ ಆತ್ಮೀಯವಾಗಿ ನಕ್ಕಂತೆನಿಸುತ್ತದೆ.ರಾತ್ರಿಯ ಹೊಳೆವ ದೀಪಗಳು ಎದೆಯೊಳಗೆ ಸಂಭ್ರಮ ಹುಟ್ಟಿಸಿದ್ದದೆ..ಬೆಳಗಿನ ಐದಕ್ಕೆ, ಮತ್ತು ನಡುರಾತ್ರಿಗಳಲಿ, ವಿಧಾನಸೌದದ ಮುಂದೆ ಹಾದು,ಜಯನಗರತಲುಪುವಾಗ ನನ್ನೊಂದಿಗೆ ಮಾತಾಡಿದ್ದುಯಾರುಅಂದುಕೊಂಡಿರಿ?ಈ ಮಹಾನಗರದ ಮುಖ್ಯರಸ್ತೆಗಳ ನಿರ್ಜನ ಮುಂಜಾವುಗಳು.ಮತ್ತು ನಿರ್ಜನ ದಟ್ಟರಾತ್ರಿಗಳ ಮೌನ, ಮತ್ತುಧ್ಯಾನ. ಮರೆಯಲಾದೀತೇ?ಈಗ ಹೊರಟು ನಿಂತ ಹೊತ್ತಲ್ಲಿ, ಹುಚ್ಚಿಯಂತೆ ಈ ಊರನ್ನು ಸುಮ್ಮನೇ ಸುತ್ತಿ, ಸುತ್ತಿ ಸುತ್ತಿ ಬರುತ್ತಿದ್ದೇನೆ. ಅಲ್ಲಲ್ಲಿ ನಿಂತು, ನಿಂತು ವಿದಾಯ ಹೇಳುತ್ತಿದ್ದೇನೆ.
ಈ ಅಪರಿಚಿತಊರೇ ನನಗೆ ಗೆಳೆಯ, ಗೆಳತಿ, ಗುರು, ಬಂಧುಎಲ್ಲವೂಆಗಿದೆ.ಕಡೆಗೆಅಮ್ಮನೂ.ಬೆಂಗಳೂರಮ್ಮ ನನ್ನಅಮ್ಮನಂತೆಯೇ ರಕ್ಷಿಸಿದ್ದಾಳೆ. ಸಾಕಿದ್ದಾಳೆ. ಸಲುಹಿದ್ದಾಳೆ.ತಿದ್ದಿ ತೀಡಿದ್ದಾಳೆ, ಹಿಡಿದಿದ್ದ ಭ್ರಮೆಗಳ ಬಿಡಿಸಿದ್ದಾಳೆ. ಗಟ್ಟಿಗೊಳಿಸಿದ್ದಾಳೆ. ಮೊದಲೇದೊಡ್ಡದಿದ್ದಧನಿಗೆ ಮತ್ತಷ್ಟು ಶಕ್ತಿ ತುಂಬಿದ್ದಾಳೆ.ಶೃತಿಗೆ ಹಚ್ಚಿದ್ದಾಳೆ.ಬದುಕು ಕೊಟ್ಟಿದ್ದಾಳೆ.ಬದುಕು ಕಟ್ಟಿದ್ದಾಳೆ. ನಾಕು ಜೊತೆ ಬಟ್ಟೆಯೊಂದಿಗೆ ಬಂದವಳಿಗೆ ಲಾರಿಗಟ್ಟಲೆ ಸಾಮಾನುಕೊಟ್ಟು ಕಳಿಸುತ್ತಿದ್ದಾಳೆ.ಎಂಟು ವರುಷದ ಹಿಂದೆ ಎದೆಗಪ್ಪಿಕೊಂಡವಳ, ಬಿಗಿದಪ್ಪಿಕೊಂಡವಳ ಬಿಡಿಸಿಕೊಂಡೀಗ ಕೈ ಬೆರಳ ತುದಿಹಿಡಿದು ನಿಂತಿದ್ದೇನೆ. ಇದೋ ಬಿಟ್ಟೆ.
ಹೋಗಿ ಬರುತ್ತೇನೆ. ನಮಸ್ಕಾರ !!
 

‍ಲೇಖಕರು G

March 31, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

36 ಪ್ರತಿಕ್ರಿಯೆಗಳು

  1. Triveni

    ಸುಂದರ ಬರಹ. ನಮ್ಮದೇ ಅನ್ನಿಸುವ ಆಪ್ತ ಅನಿಸಿಕೆಗಳು!
    ಎಲ್ಲಾದರೂ ಹೋಗಿ! ಸುಖವಾಗಿರಿ.
    ಶುಭವಾಗಲಿ!

    ಪ್ರತಿಕ್ರಿಯೆ
  2. ಮಮತ

    ಬಹಳ ಬಹಳ ಸೆಂಟಿಮೆಂಟಲ್ ಪರ್ಸನಾಲಿಟಿ ತಾವು ಮಾರಾಯ್ತಿ. ಏನು ಹೇಳಲಿ ಎಲ್ಲವೂ ಈ ಬರಹವೇ ಹೇಳಿದೆ.ಏನೇ ಬರೆದರೂ ಸೊಗಸು , ಸೊಗಡು ಕಾಣೆಯಾಗಿ ಮೀನಿಂಗ್ ಲೆಸ್ ಅನ್ಸುತ್ತೆ. ಬದುಕು ಜಟಕಾ ಬಂಡಿಯಷ್ಟೆ. ಯಾವುದೂ ಹೊಸದಲ್ಲ. ಹಳೆಯದೂ ಅಲ್ಲ. ದಾರಿ ತಂಬಾ ಗುಲ್ಮೊಹರ್ ಚೆಲ್ಲಿರಲಿ. ಟೇಕ್ ಕೇರ್

    ಪ್ರತಿಕ್ರಿಯೆ
  3. ನಾಗೇಂದ್ರ ಶಾ

    ಹೇಳಿ ಹೋಗು ಕಾರಣ….ಹೋಗುವ ಮೊದಲು.
    ಎಂದಿಗಾದರು ಬಾ ಬೆಂಗ್ಳೂರಮ್ಮ ಕರ್ಕೊತಳೆ.

    ಪ್ರತಿಕ್ರಿಯೆ
  4. sindhu

    ಪ್ರೀತಿಯ ಕುಸುಂ
    ಈ ಸಲ ಇದು ದೊಡ್ಡ ವ್ಯಾಕ್ಸಿನೇಷನ್ನೇ!
    ಫಸ್ಟ್ ಅಂಡ್ ಫೋರ್ ಮೋಸ್ಟ್.. ಈ ಊರು ಇರೋದೇ ತಾವು ಆಗಾಗ ಬರ್ತಾ ಇರಕ್ಕೆ. ಸೋ… ಈಗ ಅತ್ತುಕರೆದಿದ್ದು ಭಾಳ ಒಳ್ಳೇದೆ. ಕಣ್ಣೊರೆಸಿಕೊಂಡು ನಗ್ ನಗ್ತಾ ಇಲ್ಲಿಗೆ ಬರ್ತಾ ಇರಿ. ನಾವಿದೀವಿ. ಮತ್ತು ಸಾಕಷ್ಟು ಕೆಲ್ಸ ಇರತ್ತೆ.
    ಮಹಾನಗರಗಳು ಒಂದ್ರೀತಿ ಊರದೇವತೆಗಳ ಹಾಗೆ. ಯಾವ ಸ್ಪರ್ಶದ ಹಂಗಿಲ್ಲದೇ ಎಲ್ಲರೂ ಬಂದು ಕೂತು ಹೋಗಬಹುದಾದ ಜಾಗ. ಸ್ಪೆಷಲೀ ನಿಮ್ ಹಾಗಿನ ಕಿನ್ನರರಿಗೆ ಇದು ಹೇಳಿ ಮಾಡಿಸಿದ ಜಾಗ.
    ಹಾಗಂತ ನಿಮ್ನ ಇಲ್ಲೇ ಇಟ್ಕೊಳಾಕಾಗುತ್ತಾ. ಅಲ್ಲಿ ಕಾಯುವ ಆಕಾಶಕ್ಕೆ ಭೂಮಿಯ ಲಿಂಕು ಹಚ್ಚಬೇಕಾಗಿರೋದೇ ನೀವು.
    ಸ್ವಲ್ಪ ಬೋರಾದಾಗೆಲ್ಲ ಬರ್ತಿರಿ. ವಿಕ್ಶಿಪ್ತ ಕತೆ ಬರೀಬೇಕಾದ್ರೆ ಇಲ್ಲಿಗೇ ಬರ್ಬೇಕು. ಆ ತರ ಎಲ್ಲ ಸುರ್ಕೊಂಡು ಬಿದ್ದಿರೋದು ಇಲ್ಲೆ.
    ಹಿಂದಿನ್ ಸಲ ಎಲ್ಲ ಓದಿದ್ಕಿಂತನೂ ಇದು ನಿಮ್ಮನ್ನ ಇನ್ನೂ ನನಗೆ ಆಪ್ತವಾಗಿಸಿದೆ. ನೀವು ಅಲ್ಲಿ ಇಲ್ಲಿ ಎಲ್ಲೇ ಇರಿ. ನನ್ ಜೊತೆಗೇ ಇರ್ತೀರಿ.
    ಪ್ರೀತಿಯಿಂದ,
    ಸಿಂಧು

    ಪ್ರತಿಕ್ರಿಯೆ
  5. Chandra Kodi

    ‘ಅದೆಲ್ಲೋ ಹಳ್ಳಿಮೂಲೆಯಲಿ ಕೂತು ನೋಡುತ್ತಿದ್ದ, ಪೇಪರಿನಲಿ ಓದಿ, ಗ್ರೇಟ್ಗ್ರೇಟ್ಅಂದುಕೊಂಡಿದ್ದ,ದೂರದ ನಕ್ಷತ್ರದಂತ ಮನುಷ್ಯರುಇಲ್ಲಿಎದುರೇ ಸಿಕ್ಕರು.ಒಡನಾಟಕೂ ಸಿಕ್ಕರು.ಬಹುತೇಕರು ಹತ್ತಿರದಲಿ ಕಂಡಷ್ಟೂಅಸಹ್ಯ ಅನಿಸಿದರು.ದೊಡ್ಡರಳೀಮರ ಉರುಳಿದಂತೆ, ದೊಡ್ಡ ವ್ಯಕ್ತಿಗಳ ದೊಡ್ಡತನ ಕಳಚಿಬಿದ್ದಿತ್ತು.ಭ್ರಮನಿರಸನ, ಸತ್ಯದರ್ಶನ!’ Yesttu chanda nimma bharavanige! hogi baa gelati subhavagali (-:

    ಪ್ರತಿಕ್ರಿಯೆ
  6. shashikala M

    ಎಲೈ ಕುಸುಮಬಾಲೆಯೇ
    ನಿನ್ನನ್ನು ಅವಧಿ ಮೂಲಕ ಬೆಟ್ಟಿಯಾಗಿದ್ದೀನಿ. ಎಲ್ಲಾದರೂ ಇರು ಎಂತಾದರೂ ಇರು ಬರೀತಾ ಇರು
    ಇಲ್ಲದಿದ್ದಲ್ಲಿ ನಿನ್ನ/ನಮ್ಮ ತಲೆ ಸಾವಿರ ಹೋಳುಗಳಾದಾವು ಎಚ್ಚರ
    ಶಶಿಕಲಾ

    ಪ್ರತಿಕ್ರಿಯೆ
  7. samyuktha

    🙂 ನೀ ತುಂಬಾ ಜಾಣೆ ಕಣೆ! ನೀನೆಲ್ಲಿ ಹೋದರೂ ಬೆಳಕು ನಿನ್ನ ಹಿಂದೆ ಬರುತ್ತೆ… ನೀನಿಷ್ಟು ಭಾವುಕಳಾಗಿ ನಮ್ಮೆಲ್ಲರನ್ನೂ ಭಾವುಕಗೊಳಿಸೋದು ಬೇಡ…. ಹೋಗಿ ಬೇಗ ಬಂದುಬಿಡು… ನೀ ಎಲ್ಲೇ ಇದ್ರೂ ಒಂದು “ಕ್ಲಿಕ್” ದೂರ ಅಷ್ಟೇ! Just a click away! 🙂

    ಪ್ರತಿಕ್ರಿಯೆ
  8. mallikarjun talwar

    hogi banni madam. shubavagali….. namaste… adre agaga baritiri saku.

    ಪ್ರತಿಕ್ರಿಯೆ
  9. M.S.Krishna murthy

    ನೀನು ಎಲ್ಲೇ ಇದ್ದರೂ ನಿನ್ನಲ್ಲಿನ ಆತ್ಮ ವಿಶ್ವಾಸ ನಿನ್ನ ಕೈ ಹಿಡಿಯುತ್ತದೆ ಮಗಳೆ… ನನ್ನ ಮನದಲ್ಲಿ ಎಂದೆಂದಿಗೂ ಇರುವೆ..

    ಪ್ರತಿಕ್ರಿಯೆ
  10. Swarna

    ಶುಭವಾಗಲಿ ಕುಸುಮಾ . ಬೇಗ ಸೋಪ್ ಮಾಡಿ , ಅಂದುಕೊಂಡ ಎಲ್ಲವನ್ನೂ ಮಾಡಿ, ನಮಗೆ ಹೇಳಿ .

    ಪ್ರತಿಕ್ರಿಯೆ
  11. Rukmini Nagannavar

    ತುಂಬ ಆಪ್ತವಾದ ಬರಹ.
    ನೆಲದ ನಂಟೇ ಹಾಗೆ. ಅಪರಿಚಿತರೆಂದಾಗ ಅಪ್ಪಿಕೊಳ್ಳುತ್ತವೆ. ಆ ಆಪ್ತ ಭಾವವೇ ಬಿಟ್ಟುಹೋಗುತ್ತಿರುವ ನಿಮ್ಮನ್ನು ಇಷ್ಟೊಂದು ಕಾಡುತ್ತಿದೆ.. ಆಗಾಗ ಬರ್ತಾ ಇರಿ.

    ಪ್ರತಿಕ್ರಿಯೆ
  12. Anonymous

    Sogasagide nimma baraha …ishtella bareyodu kalisi kotta bengalurammanna bittu hogthayirodu tappu….aadre bareyod bidbedi….innu mahattaravadadannu sadhisuva chala,aatmaviswasa nimmallide…adannu sariyagi balsikolli….anyways avaravara bhavakke….

    ಪ್ರತಿಕ್ರಿಯೆ
  13. CHAITHRA

    ಬೆಂಗಳೂರಮ್ಮ ನನ್ನಅಮ್ಮನಂತೆಯೇ ರಕ್ಷಿಸಿದ್ದಾಳೆ. ಸಾಕಿದ್ದಾಳೆ. ಸಲುಹಿದ್ದಾಳೆ.ತಿದ್ದಿ ತೀಡಿದ್ದಾಳೆ, ಹಿಡಿದಿದ್ದ ಭ್ರಮೆಗಳ ಬಿಡಿಸಿದ್ದಾಳೆ. ಗಟ್ಟಿಗೊಳಿಸಿದ್ದಾಳೆ.
    YOU ARE IN RIGHT PATH AKKA. LONG WAY TO GO. “ಹಿಡಿದಿದ್ದ ಭ್ರಮೆಗಳ ಬಿಡಿಸಿದ್ದಾಳೆ” ISHTU SAKE EE JEEVAKKE !
    ನಾಕು ಜೊತೆ ಬಟ್ಟೆಯೊಂದಿಗೆ ಬಂದವಳಿಗೆ ಲಾರಿಗಟ್ಟಲೆ ಸಾಮಾನುಕೊಟ್ಟು ಕಳಿಸುತ್ತಿದ್ದಾಳೆ.

    ಪ್ರತಿಕ್ರಿಯೆ
  14. Sushma Moodbidri


    ಇಂತದ್ದೇ
    ​ ಹೊಸ್ತಿಲಲ್ಲಿ ನಾವೂ ಒಮ್ಮೆ ನಿಲ್ಲುವವರೆ ಅನಿಸದಾಗ ಮೈಜುಮ್‌ ಅನ್ನುತ್ತಿದೆ.
    ಏನೂ ಇಲ್ಲದೇ ಬಂದವರು ಇಷ್ಟೇಲ್ಲಾ ಆಗಿ ಹೋಗುವುದು ತಮಾಷೆಯ ಮಾತಲ್ಲಾ..
    ನಮ್ಮೊಳಗೊಂದು ಪ್ರೀತಿಯ ಸೆಲೆ ನಿಮಗಾಗಿ ಇದ್ದೇ ಇದೆ..​
    ಹೋಗಿ
    ​ ಬನ್ನಿ…
    ನಿಮ್ಮ ದಾರಿಯುದ್ದಕ್ಕೂ ಹೂಹಾಸಿಗೆಯೇ ಚಾಚಿರಲಿ…

    ಪ್ರತಿಕ್ರಿಯೆ
  15. udaya marakini

    ಈಗ ಹೊರಟು ನಿಂತಿದ್ದೇನೆ ಮತ್ತೆ.ಹೊಸ್ತಿಲಲಿ ಕೂತು ಅಳುತ್ತಿದ್ದೇನೆ. ಯಾಕೆ ಅಳುತ್ತಿದ್ದೇನೆ? ಬತ್ತಿದ ಕಣ್ಣಿನವಳು ನಾನು,ಯಾರಿಗಾಗಿಇಷ್ಟೊಂದುಅಳುತ್ತಿದ್ದೇನೆ?ಈಗ ಊರತುಂಬ ಇರುವ ಗೆಳೆಯ-ಗೆಳತಿಯರಿಗಾಗಿಯೇ?ಜೊತೆಯಲಿ ಹುಟ್ಟದೆಯೂಆದಅಕ್ಕಂದಿರು? ತಮ್ಮಂದಿರು?ಬೇಸರವಾಗುತ್ತದೆ.ಆದರೆಕಣ್ಣೀರುಅವರ ಹೆಸರು ಹೇಳುತ್ತಿಲ್ಲ. ಮತ್ತೆಯಾಕೆ? ಈ ಊರಿಗಾಗಿ.!! touching. ನಾನೂ ಈ ಊರಿಗೆ ಬಂದು ಇಪ್ಪತ್ತೆಂಟು ವರ್ಷಗಳಾದವು. ಹದಿನಾರು ಮನೆ ಮತ್ತು ಅಷ್ಟೇ ನೌಕರಿಗಳನ್ನು ಬದಲಾಯಿಸಿದ್ದೇನೆ. ಆದರೆ ನಿಮ್ಮಷ್ಟು ಈ ಊರು ನನ್ನನ್ನು ಕಾಡಿದ ಹಾಗಿಲ್ಲ. ಬಹುಶಃ ಊರು ಬಿಟ್ಟು ಹೋಗುವ ಅವಕಾಶ ಸಿಕ್ಕಿದ್ದರೆ ಹೀಗೇ ಅನಿಸುತ್ತಿತ್ತೋ ಏನೋ. ಒಳ್ಳೇ ನಿರ್ಧಾರ ತೆಗೆದುಕೊಂಡಿದ್ದೀರಿ. ಮೈಸೂರು ಇನ್ನೂ ಬೆಂಗಳೂರಿನಷ್ಟು ಹದಗೆಟ್ಟಿಲ್ಲ. ಹೋಗಿ ಬನ್ನಿ ಎಂದು ನಾನು ಅನ್ನುವುದಿಲ್ಲ.

    ಪ್ರತಿಕ್ರಿಯೆ
  16. Gn Nagaraj

    ಈ ಸಣ್ಣ ವಯಸ್ಸಿಗೇ ಪಡೆದ ನಿಮ್ಮ ಅನುಭವ ಸಾಗರದ ಕೆಲ ಅಲೆಗಳ – ವಿವಿಧ ರೂಪದ-ಕುರೂಪದ, ವಿವಿಧ ರಭಸದ ಅಲೆಗಳ ಪರಿಚಯವಾಯಿತು. ನಿಮ್ಮ ಮನಸ್ಸಿನಲ್ಲಿ ಕಾವು ಪಡೆಯುತ್ತಿರುವ ಅವೆಲ್ಲವೂ ಮುಂದೆ ಒಂದೊಂದು ರೂಪ ತಳೆದು ಕನ್ನಡದ ಮನಸ್ಸುಗಳಲ್ಲಿ ಅಚ್ಚಾಗಲಿದೆ ಎಂಬ ಭರವಸೆ ನನಗಿದೆ.
    ಬೆಂಗಳೂರೆ ಎಂದು ಬಾಯಾರೆ ಕರೆಯೋರ
    ಮೈ ತುಂಬ ಒಡವೆಗಳಿರಬಹುದು ಅಲ್ಲಿ
    ನನ್ನ ಮೇಲಿರಬಹುದು ಎಲ್ಲ ಚೆಲುವರ ಕಣ್ಣು
    ರಥ ಕುದುರೆ ಕಾಲಾಳು ಆನೆಗಳು ಸುತ್ತ
    ನನ್ನ ಮದುವೆಗೆ ಮೊದಲು ಗಂಡ ಕೆಂಪೇಗೌಡ
    ಹಾರುವರ ಮನೆಯಾಗೆ ಜೀತಕಿದ್ದ
    ಚಿಂದಿ ದುಪಟಿಯ ಚೆಲುವ ತಂಗಳಿನ ಸರದಾರ
    ದನದ ಕೊಟ್ಟಿಗೆಯಲ್ಲಿ ಮಲಗುತಿದ್ದ
    ೇಳು ಲೋಕದ ನೋವು ಮೂಡುವಾಗೆದ್ದವನು
    ದುಡಿಯುತಿದ್ದನು ಹೊತ್ತು ಇಳಿವ ತನಕ
    ……………………
    ನನ್ನ ಸೀರೆಯ ಸೆರಗು ಮರೆಮಾಡಿಕೊಂಡಿರುವ
    ಜೋಪಡಿಯ ಲೋಕವನು ತೋರಲೇನು
    ಹೊಟ್ಟೆಯೊಳಗಿನ ಬೆಂಕಿಯುಂಡೆಯೆಲ್ಲವನೆತ್ತಿ
    ಮೆರೆವ ಜನಗಳ ಮೇಲೆ ಚೆಲ್ಲಲೇನು
    ನಿಮ್ಮ ಸೋಪಿಗೆ ಪಿಯರ್ಸ್ ಸೋಪಿನ ಪಾರದರ್ಶಕತೆಯನ್ನು ತರುವಂತಹ ಅನೇಕ ಕನಸುಗಳು ಈಡೇರಲಿ . ಆದರೆ ಕನಸುಗಳು ವಾಸ್ತವದ ಮಣ್ಣಿನಲ್ಲಿ ಬೇರಿಳಿಸಿ ಆಗಸಕ್ಕೆ ಚಿಮ್ಮಲಿ.

    ಪ್ರತಿಕ್ರಿಯೆ
  17. ಲಲಿತಾ ಸಿದ್ಧಬಸವಯ್ಯ

    ಯಾಕಮ್ಮ ಕುಸುಮಾ, ನಿಮ್ಮ ಕಾಲಂ ಕಾಯ್ದು ಓದುತ್ತಿದ್ದೆ, ಇನ್ನು ಖಾಲಿಖಾಲೀ. ಹೊಸ ಪಾತ್ರದಲ್ಲಿ ಯಶಸ್ವಿಯಾಗಿ ಹೀಗೇ ಆ ಅನುಭವಗಳನ್ನೂ ಅಕ್ಷರದಲ್ಲಿ ಕಟ್ಟಿಕೊಡುವ ದಿನ ಬೇಗ ಬರಲಿ.

    ಪ್ರತಿಕ್ರಿಯೆ
  18. Palahalli Vishwanath

    ಊರಿನ ತು೦ಬ ಅಪರಿಚತರೇ ಇದ್ದರೂ ಊರು ನಮ್ಮನ್ನು ಹತ್ತಿರ ಕರೆದು ತನ್ನದಾಗಿ ಮಾಡಿಕೊಳ್ಳುತ್ತದೆ.ಇದೇ ಮಹಾನಗರಗಳ ಸೆಳೆತ.
    ಲೇಖನ ಬಹಳ ಇಷ್ಟವಾಯಿತು

    ಪ್ರತಿಕ್ರಿಯೆ
  19. pushpa

    ಕುಸುಮ …. ನಾನು ನಿಮ್ ಮನೆಗೆ ಬಂದಿದೆನೆ, ಮೇಲೆ ಬರೆದವರಿಗೆ ಈ ಬರಹದಿಂದ ನೀವು ಪರಿಚಯ, ಅದಕ್ಕೂ ಮೊದಲು ನಂಗೆ ನಿಮ್ಮ ಪರಿಚಯ. ನಿಮ್ ಊರಲ್ಲಿ nss camp ಮಾಡಿದ್ವಿ …ಸರಿತಾನೇ…? ಮತ್ತೆ…..ನಿಮ್ಮ ಕೊನೆಯ ಬರಹದಲ್ಲಿ ಸಿಕ್ಕುತ್ತಿರುವುದು ನನ್ನ ದುರಾದೃಷ್ಟ. any way ಬದುಕಿನ ಮತ್ತೊಂದು ಮಜಲಿಗೆ ಅಡಿ ಇಡುತ್ತಿದ್ದಿರಿ, ಶುಭವಾಗಲಿ. ಒಮ್ಮೆ ಪ್ರಕಶಣ್ಣ ನ್ನ ಕೇಳಿದಾಗ,’ಅವ್ಳು ಬೆಂಗಳುರಿನಲ್ಲಿದ್ದಾಳೆ’ ಅಂದಿದ್ದ್ರು. ಮತ್ತೊಮ್ಮೆ ಆಕಾಶವಾಣಿಯಲ್ಲಿ ನಿಮ್ ದ್ವನಿ ಕೇಳಿದ್ದು ….. ನಿಜ ರೀ ನೀವೇನೇ….ನಿಮ್ ಫೋಟೋನಾ ಮತ್ತೆ ಮತ್ತೆ ನೋಡಿದೇ. ಹೌದು … ಮತ್ತೆ ಸಿಗಿಪ್ಪಾ…. ಒಂದ್ರಸಪ್ರಶ್ನೆ ಕಾರ್ಯಕ್ರಮ ಮಾಡೋಣ…….! -ಪುಷ್ಪಕುದೇರು

    ಪ್ರತಿಕ್ರಿಯೆ
  20. pushpa

    ಹೌದು ರೀ ನೀವ್ ಆಯ್ರಳ್ಳಿ ಕುಸುಮಾನೇ ….ಶುಭಾವಾಗ್ಲಿಪ್ಪ ಮತ್ತೆ ಸಿಗೋಣ

    ಪ್ರತಿಕ್ರಿಯೆ
  21. ಲಕ್ಷ್ಮೀಕಾಂತ ಇಟ್ನಾಳ

    ಕುಸುಮಾ ಜಿ, ನಿಮ್ಮ ಮನದಾಳವನ್ನು ವರ್ಣಸಲು ಮಾತುಗಳಿಗೆ ಶಕ್ತಿ ಸಾಲದು, ಇವುಗಳನ್ನು ಅರ್ಥಮಾಡಿಕೊಳ್ಳಲು ಬಹುದೊಡ್ಡ ಮೌನವೇ ಬೇಕು. ಅದಕ್ಕೆ ಮಾತ್ರ ಅರ್ಥವಾಗುವ ಒಳತೋಟಿಗಳು ಇವು. ಮನಸ್ಸಿನ ಒಳಸೆಲೆಯಲ್ಲಿ ಇರುವುದನ್ನೆಲ್ಲಾ ಕಾರಿಕೊಂಡು ಬಿಟ್ಟಿದ್ದಿರಿ. ಸುಮಧುರವಾದುವುಗಳನ್ನು ಆಸ್ವಾದಿಸಿದ್ದೀರಿ. ಬೆಂದು ಚಂದವಾಗಿದ್ದಿರಿ,ಆದರೆ ಬಿಟ್ಟು ಹೋಗುವ ಮುನ್ನ ಒಂದೇ ಮಾತು, ನಡೆಸಿಕೊಡುವುದಾದರೆ, ಕೇಳುತ್ತೇನೆ, ‘ಬರೆಯುವುದನ್ನು ನಿಲ್ಲಿಸುವುದು ಬೇಡ, ಬಹುಶ: ಅದು ನಿಮಗೂ ಸಾಧ್ಯವಾಗದು, ‘ನಾಮ್ ಗೂಮ್ ಜಾಯೇಗಾ, ಚೆಹರಾ ಯೆ ಬದಲ್ ಜಾಯೇಗಾ , ಮೇರೀ ಆವಾಜ್ ಹೀ ಪೆಹಚಾನ್ ಹೈ, ಗರ್ ಯಾದ ರಹೇ’ ಹೌದು ಇಲ್ಲಿ ನಿಮ್ಮ ಬರವಣಿಗೆಯೇ ನಿಮ್ಮ ‘ಆವಾಜ್’, ಅದೆ ನಿಮ್ಮ ಗುರುತು.ಅದನ್ನು ಮರೆತು ಅನಾಮಿಕರಾಗಬಾರದು ನೀವು. ಮರೆಯಬೇಡಿ, ಭೂಮಿ ಗುಂಡಗಿದೆ. ನಮಸ್ಕಾರ ಕೂಸಿನಂತಹ ಕುಸು.

    ಪ್ರತಿಕ್ರಿಯೆ
  22. ಮಾಲಿನಿ

    ಎಲ್ಲಿಗೆ ಹೋದರೇನು ಹತ್ತಿರ ಇದ್ದೇ ಇರುತ್ತೀಯಲ್ಲ ನಿನ್ನ ಲೇಖನಗಳ ಮೂಲಕ. ಒಳ್ಳೆಯದಾಗಲಿ. ಬದುಕು ಹಸನಾಗಲಿ. ಹೋಗಿ ಬಾ

    ಪ್ರತಿಕ್ರಿಯೆ
  23. ಜೋಗಿ

    ಕುಸುಮಾ,
    ನಿಮ್ಮ ಆತ್ಮಚರಿತ್ರೆಯ ಈ ಸುದೀರ್ಘ ಅಧ್ಯಾಯದಲ್ಲಿ ಅನೇಕರ, ನನ್ನದೂ ಕೂಡ, ಆತ್ಮಕತೆಯ ಸಾಲುಗಳಿವೆ. ಬೆಂಗಳೂರಿನಂಥ ನಗರಕ್ಕೆ ಗಂಡು ಹೆಣ್ಣೆಂಬ ಭೇದವಿಲ್ಲ. ಅದು ಎಲ್ಲರನ್ನೂ ರುಬ್ಬುತ್ತದೆ. ಹಾಗೆ ರುಬ್ಬಿಸಿಕೊಂಡವರು ಹಿಟ್ಟಾಗುತ್ತಾರೆ. ಜಾಸ್ತಿ ರುಬ್ಬಿಸಿಕೊಂಡರೆ ಸೂಪರ್ ಹಿಟ್ ಆಗುತ್ತಾರೆ. ನಿಮ್ಮಂತೆ.
    ನಿಮ್ಮ ಭಾಷೆ, ಗ್ರಹಿಕೆ ಮತ್ತು ಕಣ್ಣು ಮುಟ್ಟಿದರೆ ಮುನಿವ ಗಿಡದಂತೆ ಸೂಕ್ಷ್ಮವಾಗಿದೆ. ಒಂದು ಕಾದಂಬರಿ ನಿಮ್ಮೊಳಗೆ ಹುಟ್ಟಿರಬಹುದು. ಅದನ್ನು ನಿರುಮ್ಮಳವಾಗಿ ಬರೆಯಿರಿ. ನಿಮ್ಮನ್ನು ಅದು ಒಂದ್ ಹತ್ತು ವರುಷಗಳ ಕಾಲ ಪೊರೆಯಲಿದೆ.

    ಪ್ರತಿಕ್ರಿಯೆ
  24. N Krishnamurthy

    ಮುಂದಿನ ಬದುಕು ಸುಂದರವಾಗಿರಲಿ…ಎದೆಯೊಳಗೊಂದು ನೆನಪಿರಲಿ…ನಗುವಿರಲಿ….

    ಪ್ರತಿಕ್ರಿಯೆ
  25. Thilakraj

    ನಿಮ್ಮ ಬರಹಗಳನ್ನು ಓದಿ ಶುರು ಮಾಡಿ ಖುಷಿ ಪಡುತ್ತಿದ್ದ ಕಾಲದಲ್ಲೇ ಹೀಗೊಂದು ಅಚಾನಕ್ ವಾರ್ತೆಯನ್ನು ಕೊಟ್ಟು ಬೇಸರ ಪಟ್ಟುಕೊಳ್ಳಬೇಕೋ ಅಥವಾ ಏನೋ ಹೊಸತು ಮಾಡಲು ಹೊರಟಿದ್ದೀರೆಂದು ಖುಷಿ ಪಟ್ಟುಕೊಳ್ಳಬೇಕೋ ಎಂಬ ಸಂಧಿಗ್ಧಕ್ಕೆ ನೂಕಿದ್ದಿರ ಕುಸುಮ ಅವರೇ. ಏನೇ ಆಗಲಿ ನಮ್ಮೆಲ್ಲರ ಶುಭ ಹಾರೈಕೆ ನಿಮ್ಮೊಂದಿಗೆ ಸದಾ ಇರುತ್ತದೆಂದು ಹೇಳುತ್ತಾ, ಮುಂದೆ ಕೂಡ ನಿಮ್ಮ ಬರಹಗಳನ್ನ ಓದುವ ಸಾಧ್ಯತೆಯ ಚಿಕ್ಕ ಸ್ವಾರ್ಥದ ಆಸೆಯೊಂದಿಗೆ ನಿಮಗೊಂದು ಗುಡ್ ಬೈ .

    ಪ್ರತಿಕ್ರಿಯೆ
  26. ವೈಶಾಲಿ ಹೆಗಡೆ

    ಕುಸುಮಾ, ಊರೇನು ದೇಶವನ್ನೇ ಬಿಟ್ಟುಬಂದ ನನಗೆ ನಿಮ್ಮ ಸಂಕಟ ನನನ್ದೆಯೇನೋ ಎನಿಸಿತು. ನಿಮ್ಮ ಬರಹಗಳ ಮೂಲಕ ತುಂಬಾ ಆಪ್ತವಾಗಿರುವಿರಿ. ಹೀಗೆಯೇ ಇರಿ. ಆ ಹೊಸ ಉಉರಿನ ಅದೃಷ ನಿಮ್ಮನು ಒಳಗೊಲ್ಲಲಿದೆಯಲ್ಲ. ಮತ್ತೆ ಬೇರುಬಿಡುವ ಕಥನವನ್ನು ನಮಗೂ ತಿಳಿಸಿ. ಶುಭವಾಗಲಿ.

    ಪ್ರತಿಕ್ರಿಯೆ
  27. kusumabaale

    ಓದಿದ,ಪ್ರತಿಕ್ರಿಯಿಸಿದ,ಪ್ರತಿಯೊಬ್ಬರಿಗೂ ಧನ್ಯವಾದಗಳು.

    ಪ್ರತಿಕ್ರಿಯೆ
  28. ashok shettar

    ಬಾಲೆ, ಸುಮ್ಮನೇ ಒಂದು ಕವಿತೆಯಂತೆ ಓದಿಕೊಂಡು ಹೋದೆ ಈ ಬರಹವ. ಸಾಹಸಿ ನೀನು,ಪ್ರಯತ್ನಶೀಲೆ.ಬೆಂಗಳೂರಿಗೆ ಬಂದಾಗ ಒಮ್ಮೆ ಭೇಟಿಯಾಗಬೇಕೆಂದುಕೊಂಡಿದ್ದೆ.ಅದು ಯಾವಾಗಲಾದರೂ ಎಲ್ಲಾದರೂ ಸಾಧ್ಯವಾದೀತು ಬಿಡು. ನಿನಗೆ ಬರಹವಂತೂ ಸಿದ್ಧಿಸಿದೆ.ಅನುಭವವೂ ಬೇಕಾದದ್ದು, ಬೇಡವಾದದ್ದು ಎಲ್ಲವೂ ದಕ್ಕ
    ದಕ್ಕಿದೆ. ಬರೆಯುತ್ತಿರು.. ಶುಭವಾಗಲಿ.

    ಪ್ರತಿಕ್ರಿಯೆ
  29. ಶ್ರೀಧರ್ ತಾಳ್ಯ

    ಅನುಭವಿಸಿದ, ತೊಳಲಾಡಿದ, ಸಂಭ್ರಮಿಸಿದ ಆತ್ಮ ನಿಮ್ಮದೇ ಆಗಿರಬಹುದು.
    ಆದರೆ ಕಥೆ ನನ್ನದೂ ಹೌದು, ನನಗನ್ನಿಸಿದಂತೆ ತುಂಬಾ ಜನರದ್ದೂ ಆಗಿರಬಹುದು…
    ಹಿಗೆಲ್ಲಾ ತೊಳಲಾಡಿ ಬಂದವನಿಗೆ ಈ ಕ್ಷಣಕ್ಕನ್ನಿಸುವುದು ಹಳ್ಳಿಯಲ್ಲಿ ಹುತ್ತಗಳಿದ್ದಾವೆ ನಿಜ ಆದರೆ ಹುತ್ತದ ಮಣ್ಣಿನ ಸೊಗಡಿಲ್ಲ..
    ಹತ್ತಿರವಾದಂತೆ ನಗರ ಹೇಗೆ ನಗ್ನ ದರ್ಶನ ಮಾಡಿಸಿತ್ತೋ ಆ ತೆರನಾದ ಅನುಭವಗಳು ಹಳ್ಳಿಯಲ್ಲಿ ಈಗೀಗ ಮಿರಿಸುತ್ತಿವೆ…

    ಪ್ರತಿಕ್ರಿಯೆ
  30. renuka prakash s

    ondQu uru namma baduku rupisa balladu niza. Haganta adu nimmoligana kusamalannu huttuhakilla badalagi ,kusamabaleyannu ee yettarakke belaside. pratisala bangolurige bandagalu kushiyaguttene. aadare estu bega idanna toredu hoguttene nannuru durgakke anisutte. MAYANGANE BENGALURIGE MATTE MATTE BANNI ‘MUNGARINA SOGASADA MODAGALANTE’ HOGI BANNI

    ಪ್ರತಿಕ್ರಿಯೆ
  31. ಬಸ ವರಾಜ

    ಎಕ್ಕಾ ಸೂಪರಕಣಕ್ಕ ನಮಗೂ ಹಿಂಗೆ ಹಳ್ಳಿಂದ ಬೆಂಗ್ಳೂರ ಅಲ್ಲಿಂದ ಖತಾರ್ ಅಂತ ಬರಿಯೊವಾಸೆ ಆಯಿತು ನೋಡವಾ ಬರದ ಕಳಸ್ತನಿ ನೀಮಗ……

    ಪ್ರತಿಕ್ರಿಯೆ
  32. Anonymous

    nimma ee barahakke mounave utthara………………..yaak ee nirdaara madam……… enoo olleyadaagali… ee serial prapanchadalli parichayavaada modala barahagaarthi neevu….. barahagaararannu kandre eno.. onthara preeti .. nimma baravanigeya shakthi anthaddu nammannella marulaagisutthave……… nimma baravanigege nanna salaam.. haage yaavagalu khushiyinda iri…….. all the best… bendhakaaalur will always missing you

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: