ಕುಶ್ವಂತ್ ಪ್ರಕಟಿಸಿದ ಪುಸ್ತಕಗಳು ಆತನಷ್ಟೇ ಚಂದವಿದೆ…

ಕುಶ್ವಂತ್ ಎಂಬ ಮುದ್ದು ಹುಡುಗ ಖುಷಿ ಖುಷಿಯಾಗಿ ಪೋಣಿಸಿದ ಮುತ್ತಿನ ಹಾರ.!!!

ಅನಿಲ್ ಎಚ್ ಟಿ

ಕೂಗ್೯ ರೆಜಿಮೆಂಟ್ ಎಂಬ ವಿನೂತನ ಹೆಡ್ಡಿಂಗ್, ಕಥಾ ಸಂಕಲನದ ಮೂಲಕ ಕನ್ನಡದ ಓದುಗರ ಗಮನ ಸೆಳೆದ ಕಾವೇರಿ ತೀರದ ಭಾಗಮಂಡಲದ ಡಾ.ಕುಶ್ ವಂತ್ ಕೋಳಿಬೈಲು ಇದೀಗ ಮತ್ತೆರಡು ಕೖತಿಗಳನ್ನು ಮುತ್ತಿನ ಹಾರದಂತೆ ಪೋಣಿಸಿದ್ದಾರೆ.
ಕಾವೇರಿ ತೀರದ ಕಥೆಗಳು ಮತ್ತು ಮುತ್ತಿನ ಹಾರ – ಹೆಸರೇ ಆಕಷ೯ಕವಾಗಿದೆ. ಕೖತಿಗಳಿಗೆ ಹೆಸರೇ ಇಡದಿದ್ದರೂ ಕುಶ್ವಂತ್ ಬರೆದಿದ್ದಾರೆ ಎಂದರೆ ಖಂಡಿತಾ ಖರೀದಿಸಿ ಆ ಓದುವಷ್ಟು ನಂಬಿಕೆ, ವಿಶ್ವಾಸ ಹುಟ್ಟಿಸಿರುವ ಲೇಖಕನೀತ.

ಭಾರತೀಯ ಸೈನ್ಯದಲ್ಲಿದ್ದು ನಂತರ ಪೂನಾಕ್ಕೆ ಮಕ್ಕಳ ವೈದ್ಯನಾಗಿ ಬಂದು ಕಳೆದ ಎರಡು ವಷ೯ಗಳ ಹಿಂದೆ ಕೊಡಗಿನ ಮೇಲಿನ ಪ್ರೀತಿಯಿಂದ ಬಂದ ಕುಶ್ವಂತ್ ಇದೀಗ ಮಡಿಕೇರಿಯ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ. ಮಡಿಕೇರಿ ನಗರಸಭೆ ಸಂಕೀಣ೯ದಲ್ಲಿ ತನ್ನದೇ ಮಕ್ಕಳ ಕ್ಲಿನಿಕ್ ಇಟ್ಟುಕೊಂಡಿದ್ದಾರೆ. ಮಕ್ಕಳ ಜತೆಗೆ ದೊಡ್ಡವರಿಗೂ ಚಿಕಿತ್ಸೆ ನೀಡುವಷ್ಟು ದೊಡ್ಡ ಮನಸ್ಸುಳ್ಳವರಾಗಿದ್ದಾರೆ.

ಡಾ.ಕುಶ್ವಂತ್ ಕಥೆ, ಲೇಖನಗಳಲ್ಲಿ ಹೊಸತನವಿದೆ. ಅಚ್ಚುಕಟ್ಟುತನವಿದೆ. ಓದುಗರ ನಿರೀಕ್ಷೆ ಹುಸಿಯಾಗದಂತೆ ಓದಿಸಿಕೊಂಡು ಹೋಗುವ ಗುಣವಿದೆ. ಎಲ್ಲಿಯೋ ನಮ್ಮ ನಡುವೇ ನಡೆದ ಘಟನೆ ಇದು ಎಂಬಷ್ಟು ನೈಜವಾಗಿ ಅಥವಾ ನಡೆದಿರಬಹುದಾದ, ನಡೆದ ಘಟನೆಯನ್ನೇ ಸುಂದರ ಪದಗಳಾಗಿ ವಿವರಿಸುವ ಚಾಕಚಕ್ಯತೆ ಕುಶ್ವಂತ್ ಗೆ ಸಿದ್ದಿಸಿದೆ.

ಕುಶ್ವಂತ್ ಎಲ್ಲಿಯೂ ಕನ್ನಡದ ಅಕ್ಷರಗಳನ್ನೇ ಹೇರಿ ಬೋರ್ ಮಾಡುವುದಿಲ್ಲ. ಸರಳವಾಗಿಯೇ ಕಥಾ ಪಾತ್ರಗಳನ್ನು ಹೇಳಿಕೊಂಡು ಹೋಗುತ್ತಾರೆ. ಪಾತ್ರಗಳಲ್ಲಿ ನಾವೇ ಇದ್ದೆವೇ ಅಥವಾ ನಮ್ಮ ಪರಿಚಿತರೇ ಇದ್ದಾರೇನೋ ಎಂಬಂತೆ ಬರೆಯುತ್ತಾರೆ. ಹೀಗಾಗಿ ಇದು ನಮ್ಮದೇ ನೆಲದ ಕಥೆಗಳಾಗಿ ಗುರುತಿಸಿಕೊಳ್ಳುತ್ತವೆ. ಕುಶ್ವಂತ್ ಕಣ್ಣಿಗೆ ಕಂಡ ಕೆಲವರು ಕಥಾ ಪಾತ್ರಗಳಾಗಿದ್ದಾರೆ. ಕಂಡು ಕೇಳಿದ ಘಟನೆಗಳು ಕಥೆಯಲ್ಲಿ ಮೆರೆದಿದ್ದಾರೆ.

ಹೀಗಾಗಿಯೇ ಕೂಗ್೯ ರೆಜಿಮೆಂಟ್ ಓದುಗರಿಗೆ ಆಪ್ತವಾಯಿತು. ಗಮನ ಸೆಳೆಯಿತು. ಬರೆಯಬೇಕೆಂದು ಬರೆಯದೇ, ಹೇಳಬೇಕೆಂದು ಹೇಳದೇ ಮನಸ್ಸಿನಲ್ಲಿ ಕುಷಿ ಕುಶಿಯಾಗಿಯೇ ಪಾತ್ರಗಳನ್ನು ಸೖಷ್ಟಿಸಿಕೊಂಡು ಹೋಗುವ ಗುಣ ಸಿದ್ದಿಸಿರುವುದರಿಂದಲೇ ಕುಶ್ವಂತ್ ಇಷ್ಟು ಚೆನ್ನಾಗಿ ಬರೆಯುತ್ತಾರೆ.

ಪೂನಾದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿ ನೈಟ್ ಡ್ಯೂಟಿ ಮಾಡುತ್ತಿದ್ದ ಸಂದಭ೯ ಆಪರೇಷನ್ ಥಿಯೇಟರ್ ನಲ್ಲಿ ಸಿಕ್ಕ ಸಮಯದಲ್ಲಿ ಕಾಗದ ಮೇಲೆ ಕುಶ್ವಂತ್ ಗೀಚುತ್ತಿದ್ದ ಬರಹಗಳೇ ಮುಂದೆ ಅವರನ್ನು ಲೇಖಕರಾಗಲು ಪ್ರೇರೇಪಿಸಿತಂತೆ. ಒಂದು ರೀತಿಯಲ್ಲಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ನಲ್ಲಿ ಹುಟ್ಟಿದ ಬರಹಗಾರ…!!

ಇದೀಗ ಬೆಂಗಳೂರಿನಲ್ಲಿ ಅನಾವರಣಗೊಂಡ ಕಾವೇರಿ ತೀರದ ಕಥೆಗಳು ಮತ್ತು ಮುತ್ತಿನ ಹಾರ ಹೊಸದ್ದೊಂದು ನಿರೀಕ್ಷೆಗೂ ಕಾರಣವಾಗಿದೆ.
ಕುಶ್ವಂತ್ ಪ್ರಕಟಿಸಿದ ಪುಸ್ತಕಗಳು ಆತನಷ್ಟೇ ಚಂದವಿದೆ…. ನೋ ಡೌಟ್…!!!!

ಕಾವೇರಿ ತೀರದ ಕಥೆಗಳು, ಮತ್ತಿನ ಹಾರ, ಕೂಗ್೯ ರೆಜಿಮೆಂಟ್ ನಂಥ ಮುದ್ದಾದ ಕಥೆ ಹೆಣೆದ ಮುದ್ದು ಹುಡುಗನಿಗೆ ಈ ಸಂದಭ೯ದಲ್ಲಿ ಶುಭಾಶಯದೊಂದಿಗೆ..

ಕುಶಿಯಾಗಿರು ಕುಶ್ವಂತ್.

‍ಲೇಖಕರು Admin

April 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: