ಕುಪ್ಪಳಿಯಲ್ಲೇ ಮಳೆ ಇಲ್ಲ..!!

ನಾನು ಕುಪ್ಪಳಿಗೆ ­ಬಂದದ್ದು ­ಜೂನ್ ­22, 2009ರ ಸೋಮವಾರ. ­ಆ ­ಹೊತ್ತಿಗೆ ಕರಾ­ವಳಿ ­ಮತ್ತು ಮಲೆ­ನಾ­ಡಿ­ನಲ್ಲಿ ­ಧಾರಾಕಾರ ­ಮಳೆ ಸುರಿಯುತ್ತಿರಬೇ­ಕಿತ್ತು. ­ಆದರೆ ­ವಾಡಿಕೆಯ ­ಮಳೆ ­ಇಲ್ಲದೆ ­ಬಿಸಿಲ ­ಬೇಗೆ ತೀವ್ರತರ­ವಾ­ಗಿತ್ತು. ­ಮುಖಕ್ಕೆ ರಾಚುತ್ತಿದ್ದ ಬಿಸಿ­ಲಿನ ­ಝಳ ಎಷ್ಟಿತ್ತೆಂದರೆ ­ಹಂಪಿಯ ಸುಡುಬಿ­ಸಿಲನ್ನು ಮೀರಿಸುವಂ­ತಿತ್ತು. 

ಇಡೀ ದೇಶದಲ್ಲಿಯೇ ­ಮಳೆ ­ಇಲ್ಲವೆಂಬ ಆಹಾಕಾರ ­ಎದ್ದಿತ್ತು. ­ಉತ್ತರ ­ಭಾರತ ­ಬಿಸಿಲ ಝಳ­ದಿಂದ ­ತತ್ತರಿಸಿತ್ತು. ­ದಕ್ಷಿಣ ­ಭಾರತ ಮಳೆಗಾಗಿ ಕಾತ­ರಿಸುತ್ತಿತ್ತು. ­ನಮ್ಮ ಹವಾ­ಮಾನ ­ತಜ್ಞರ ­ಪ್ರಕಾರ ­ಆ ­ವರ್ಷದ ­ನೈರುತ್ಯ ­ಮುಂಗಾರು ­ಹದಿನೈದು ­ದಿನ ­ಮೊದಲೇ ಕೇರಳದ ­ಮೂಲಕ ಬರಬೇಕಾ­ಗಿತ್ತು. ­ಹದಿನೈದು ­ದಿನ ಮೊದ­ಲಿರಲಿ, ­ಜೂನ್ ­ಮೊದಲ ವಾರದಲ್ಲಿ ಬರಬೇಕಾದ ­ವಾಡಿಕೆಯ ­ಮಳೆಯೇ ­ಜೂನ್ ­20 ­ಆದರೂ ಮಾಯವಾ­ಗಿತ್ತು. 

­ಯಾಕೆ ­ಹೀಗೆ? ­ಇದಕ್ಕೆ ಹವಾ­ಮಾನ ­ತಜ್ಞರು ­ಕೊಟ್ಟ ­ಮತ್ತೊಂದು ಕಾರ­ಣ­ವೆಂದರೆ, ­ಮೇ ಹದಿನೈದಕ್ಕಷ್ಚೇ ­ಹಿಂದೂ ಮಹಾ­ಸಾಗರದಲ್ಲಿ ­ಮುಂಗಾರು ಮಾರುತಗಳು ರೂಪುಗೊಂ­ಡಿದ್ದ­ವಂತೆ. ­ಆದರೆ ­ಅರಬ್ಬೀ ಸಮುದ್ರದಲ್ಲಿ ­ಎದ್ದ ­ಒಂದು ­‘ಸೈಕ್ಲೋನ್‌’ ­ದಕ್ಷಿಣ ಭಾರತದಾದ್ಯಂತ ­ಏಕಾಏಕಿ ­ನುಗ್ಗಿ ­ನೈರುತ್ಯ ­ದಿಕ್ಕಿಗೂ ಚಲಿ­ಸಿದ್ದ­ರಿಂದ ­ಮಾಮೂಲು ­ಮುಂಗಾರು ಮಾರುತದ ­ತೇವಾಂಶವನ್ನು ಹೀರಿ­ಬಿಟ್ಟ­ವಂತೆ! ­

ಹೀಗಾಗಿ ಸಿದ್ಧ­ವಾಗಿ ಹೊರ­ಟಿದ್ದ ­ಮುಂಗಾರು ­ಹಿಂದೆ ­ಸರಿಯಿತು. ­ಮತ್ತೊಂದು ­ವರದಿಯ ­ಪ್ರಕಾರ ಸಮುದ್ರದ ­ನೀರು ಅಗತ್ಯಕ್ಕಿಂತ ಬಿಸಿ­ಯಾಗುತ್ತಿದೆ. ಆದ್ದ­ರಿಂದ ­ಮಳೆ ­ಪ್ರಮಾಣ ಕಡಿಮೆಯಾಗುತ್ತಿದೆ ಎಂಬುದಾ­ಗಿತ್ತು. ­ಇಷ್ಟಾಗಿಯೂ ಸದ್ಯದಲ್ಲಿಯೇ ­ಮಳೆ ಬರ­ಲಿದೆ ­ಎಂಬುದು ಹವಾ­ಮಾನ ­ಇಲಾಖೆಯ ನೀರೀ­ಕ್ಷೆ­ಯಾ­ಗಿತ್ತು.

ಈ ­ನಡುವೆ ­ಇಡೀ ವೃತ್ತಪತ್ರಿ­ಕೆಗಳಲ್ಲಿ ­ಮಳೆ ­ಇಲ್ಲದ್ದೇ ­ಸುದ್ದಿ. ­ವಿದ್ಯುತ್ ­ಬರ, ­ದಿನಕ್ಕೆ ­ಹನ್ನೆರಡು ­ಗಂಟೆ ಕರೆಂ­ಟಿಲ್ಲ. ಕೆಲವೊಮ್ಮೆ ­24 ­ಗಂಟೆಯೂ ಇಲ್ಲ. ­ವಿದ್ಯುತ್ ­ಮಂತ್ರಿಗಳು ­ದೇವರೇ ­ಗತಿ ­ಎಂದು ­ಹಣೆಗೆ ­ಕೈ ಹಚ್ಚಿ ­ಕೂತರು! ­ಮುಜರಾಯಿ ­ಮಂತ್ರಿ ­ರಾಜ್ಯದ ­ಸಾವಿರಾರು ದೇವಸ್ಥಾ­ನಗಳಲ್ಲಿ ­ಪೂಜೆ ಹೋಮಗಳನ್ನು ನಡೆ­ಸಬೇಕೆಂದು ಪೂಜಾ­ರಿಗ­ಳಿಗೆ ­ತಾಕೀತು ­ಮಾಡಿದ ­ಸುದ್ದಿಯೂ ಪತ್ರಿ­ಕೆಯಲ್ಲಿ ­ಬಂತು. ಮುಖ್ಯಮಂತ್ರಿಗಳೂ ­ಹೋಮ-ಹವ­ನಕ್ಕೆ ಸಿದ್ಧರಾಗುತ್ತಿದ್ದು, ­ಇದುವರೆಗೆ ­ಯಾರೂ ಮಾಡಿರದ ­ಹೋಮವನ್ನು ­ಅವರು ಸಂಘ­ಟಿಸುತ್ತಾರೆ ­ಎಂಬ ­ಸುದ್ದಿ ಭರ್ಜ­ರಿ­ಯಾಗಿ ರಾರಾ­ಜಿಸಿತು.

ಈ ­ನಡುವೆ ­ಮುಂದಿನ ­24 ಗಂಟೆಗಳಲ್ಲಿ ­ಮುಂಗಾರು ಕಾಲಿಡುವುದು ­ಖಚಿತ ­ಎಂದು ಹವಾ­ಮಾನ ­ತಜ್ಞರು ಪ್ರಕ­ಟಿ­ಸಿದರು. ­ಮಾನ್ಯ ­ಕಂದಾಯ ­ಮಂತ್ರಿಗಳು ­ತಾವೇ ವರುಣನ ಪ್ರತಿ­ನಿಧಿ ­ಎಂಬಂತೆ ­ಟಿ.ವಿ ಮಾಧ್ಯಮಗಳಲ್ಲಿ ಕಾಣಿ­ಸಿಕೊಂಡು ­ನಾಳೆಯೇ ­ಮಳೆ ಸುರಿಯಲಿದೆ ­ಎಂದೂ ಬಿತ್ತ­ರಿ­ಸಿ ­ಬಿಟ್ಟರು! ­ಅಷ್ಟೇ ­ಅಲ್ಲ, ­‘ಬಂದೇ ಬರುತ್ತದೆ, ­ಬರಲೇ ­ಬೇಕು’ ­ಎಂದು ಮಳೆರಾಯನಿಗೇ ­ಹುಕುಂ ಕೊಡುವಂತೆ ಮಾತ­ನಾ­ಡಿದರು. 

­ನಿನ್ನೆ ಗೆಳೆಯರೊಬ್ಬರು, ‘­ಬಳ್ಳಾರಿಯ ಗಣಿಧ­ಣಿಗಳ ಈ ­ಮಾತನ್ನು ಮುಖ್ಯಮಂತ್ರಿ­ಯಾ­ದಿ­ಯಾಗಿ ­ಎಲ್ಲರೂ ಕೇಳುತ್ತಿರುವಾಗ, ­ಮಳೆರಾಯ ಕೇಳ­ದಿರಲು ­ಸಾಧ್ಯವೇ’ ­ಎಂಬ ­ವ್ಯಂಗ್ಯದ ­ಮಾತನ್ನೂ ­ಹೇಳಿದರು. ­ನಾಳೆ ­ಆಯಿತು, ­ನಾಡಿದ್ದಾಯಿತು, ­24 ಗಂಟೆಗಳಲ್ಲ, ­48 ­ಗಂಟೆಯೂ ­ಕಳೆಯಿತು. ವರುಣನ ಆರ್ಭ­ಟ­ವಿರಲಿ, ವರುಣನ ­ಪಿಸು ­ಮಾತೂ ­ಇಲ್ಲದಂತೆ ಆಕಾ­ಶದಲ್ಲಿ ನೀರ­ವಂತೆ ಮಡುಗಟ್ಟಿತ್ತು. 

­ರೈತರ ಮುಖದಲ್ಲಿ ­ದುಗುಡ ಹೆಚ್ಚಾ­ಗಿತ್ತು. ವೃತ್ತಪತ್ರಿ­ಕೆಗಳು ಬರಿದಾದ ಅಣೆಕಟ್ಟೆಗಳ ಚಿತ್ರಗಳನ್ನು ಪ್ರಕ­ಟಿಸುತ್ತಾ ‘­ಬರ’­ದ ಮುನ್ಸೂಚನೆ ನೀಡತೊಡ­ಗಿದವು. ­ಅಲ್ಲಿ ­ಇಲ್ಲಿ ­ಮೋಡಗಳು ಕಾಣಿಸಿ ಕೊಳ್ಳುತ್ತಿದ್ದ­ವಾದರೂ ­ಮಳೆಯ ­ಸಿಂಚನ ­ಆಗಲೇ ­ಇಲ್ಲ.

ತತ್ಕಾಲಕ್ಕೆ ­ಕುಪ್ಪಳಿಯ ಶತ­ಮಾನೋತ್ಸವ ಭವ­ನದ ­ಅತಿಥಿ ಗೃಹದಲ್ಲಿಯೇ ­ಉಳಿದಿದ್ದ ­ನಾನು ಪ್ರತಿ­ದಿನ ­ಬೆಳಗ್ಗೆ ಕವಿಶೈಲ, ಕವಿಮನೆ, ­ಬೆಕ್ಕನೂರು, ಗಡಿ­ಕಲ್ಲು ­ಹೀಗೆ ­ಒಂದೆರಡು ­ಕಿ.ಮೀ. ಪಾಸಲೆಯಲ್ಲಿ ವಾಯುವಿ­ಹಾರ ಮಾಡುತ್ತಿದ್ದೆ. ­ಮೊದಲೇ ­ಕಪ್ಪು ­ಬಣ್ಣದ ­ನನ್ನ ­ಮುಖ ಮಲೆ­ನಾ­ಡಿನ ಹವಾ­ಮಾ­ನಕ್ಕೆ ಎಣ್ಣೆಕೆಂಪಾದರೂ ­ಆಗಬಹುದು ­ಎಂಬ ­ಒತ್ತಾಸೆ ­ಇಟ್ಟುಕೊಂಡು ­ಬಂದಿದ್ದ ­ನಾನು ­ಬಳ್ಳಾರಿಯನ್ನೂ ಮೀರಿಸುವ ­ಈ ಬಿಸಿ­ಲಿಗೆ ­ಇನ್ನಷ್ಟು ಕರಿಯನಾಗಿ ಕಂಗೊ­ಳಿ­ಸತೊಡ­ಗಿದ್ದೆ. ­

ಅಲ್ಲಲ್ಲಿ ­ದಟ್ಟ ­ಮೋಡಗಳು ಕಾಣಿ­ಸಿಕೊಳ್ಳುತ್ತಿದ್ದರೂ ­ಚಳ್ಳೆ ­ಹಣ್ಣು ತಿನ್ನಿಸುತ್ತಾ ಎಲ್ಲರಿಗೂ ­ಟೋಪಿ ಹಾಕುತ್ತಿದ್ದ ­ಅವುಗಳನ್ನು ­ಕಂಡು ‘­ಎಲ್ಲಿ ಓಡುವಿರಿ ­ನಿಲ್ಲಿ ಮೋಡಗಳೆ ­ನಾಲ್ಕು ­ಹನಿಯ ­ಚೆಲ್ಲಿ’ ­ಎಂಬ ­ಕವಿ ಶಿವರುದ್ರ‍ಪ್ಪನ­ವರ ­ಕವಿತೆ ಗನುಗುತ್ತಾ ಇರಬೇಕಾದ ಪರಿ­ಸ್ಥಿತಿ ­ಉಂಟಾಗಿತ್ತು. ­ಅಷ್ಟೇ ­ಅಲ್ಲದೆ ­ನಮ್ಮ ತತ್ವಪದಕಾರರು ­ಹಾಡಿದ ‘­ಯಾತಕ್ಕೆ ­ಮಳೆ ­ಹೋದವೋ ­ಶಿವಾ ­ಶಿವಾ ­ಲೋಕ ತಲ್ಲಣಿಸುತಾವೋ’ ­ಎಂಬ ­ಹಾಡು ­ಮತ್ತೆ ­ಮತ್ತೆ ­ನನ್ನ ­ಎದೆಯಲ್ಲಿ ಅನುರ­ಣಿಸುತ್ತಿತ್ತು. 

­ಒಬ್ಬನೇ ­ಅಲೆದಾಡುವಾಗ ­ಸ್ವಲ್ಪ ಜೋರಾ­ಗಿಯೇ ­ಈ ಹಾಡುಗಳನ್ನು ಗುನುಗುತ್ತಿದ್ದೆ. ­ಯಾರು ­ಸಿಕ್ಕರೂ ­ಮಳೆ ­ಇಲ್ಲದ್ದೇ ­ಮಾತು. ­ಇದರ ­ನಡುವೆ ­ನಮ್ಮ ­ಅಧ್ಯಯನ ­ಕೇಂದ್ರದ ಕಾವಲುಗಾರ, ­ತೇಜಸ್ವಿ ಕಾದಂ­ಬ­ರಿಯಲ್ಲಿನ ಮಂದ­ಣ್ಣ­ನಂಥ ­ಸುಪ್ತ ­ಪ್ರತಿಭೆ ‘­ಗುಂಡ’ ­ಮಾತ್ರ ­ಮಳೆ ­ಬಂದೇ ­ಬರ್ತದೆ ­ನೋಡಿ ­ಸಾ’ ­ಎಂದು ದಾರ್ಶನಿ­ಕ­ನಂತೆ ಹೇಳುವಾಗ ­ನನ್ನಲ್ಲಿ ­ಮಳೆಯ ­ನೀರೀಕ್ಷೆ ಹೆಚ್ಚಾಗುತ್ತಿತ್ತು. ­ನನ್ನ ­ಕಣ್ಣಲ್ಲಿ ­ಆಸೆಯ ­ಮೋಡಗಳು ಕಟ್ಟುತ್ತಿದ್ದವು.

August 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: