ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಪ್ಪಳಿಯಲ್ಲಿ ‘ಸಾಂಗತ್ಯ’ ಸಿನಿಮಾ ಶಿಬಿರ

ಸಾಂಗತ್ಯ (ರಿ) ಫೆಬ್ರವರಿ 24-25 ರಂದು 17 ನೇ ಸಿನಿಮಾ ಶಿಬಿರವನ್ನು ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ ಏರ್ಪಡಿಸಿದೆ

ಪ್ರಸಿದ್ಧ ಕಥೆಗಾರ ವಸುಧೇಂದ್ರ  ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಸಿನಿಮಾ ಪರಿಣಿತ ಪರಮೇಶ್ ಗುರುಸ್ವಾಮಿ ಅಧ್ಯಕ್ಷತೆ ವಹಿಸುವರು.

ಸಾಂಗತ್ಯವು ಏಳು ವರ್ಷಗಳಿಂದ ನಿರಂತರವಾಗಿ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ. ಕನ್ನಡವೂ ಸೇರಿದಂತೆ ವಿವಿಧ ಭಾಷೆಯ ಚಿತ್ರಗಳ ಪ್ರದರ್ಶನ ಹಾಗೂ ಸಂವಾದವಿರಲಿದೆ. ಸಿನಿಮಾ ತಜ್ಞರು ಸಿನಿಮಾ ಮಾಧ್ಯಮವನ್ನು ಅರ್ಥ ಮಾಡಿಕೊಳ್ಳುವ ಬಗೆ ಕುರಿತು ವಿವರಿಸುವರು.

ಇದುವರೆಗೆ ಚಿತ್ರ ತಜ್ಞರಾದ ಪವನ್ ಕುಮಾರ್, ಗುರುಪ್ರಸಾದ್, ಲಿಂಗದೇವರು, ಉಮಾಶಂಕರ ಸ್ವಾಮಿ, ಸುದರ್ಶನ್, ಪಿ ಶೇಷಾದ್ರಿ, ಅಶೋಕ್ ಕಶ್ಯಪ್, ರೇಖಾ ರಾಣಿ, ಮಂಸೋರೆ, ಸಂಚಾರಿ ವಿಜಯ್, ಗುಣ, ಎಸ್. ದಿವಾಕರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಇದ್ದವರು 94805 82027, 9448348517 ಗೆ ಸಂಪರ್ಕಿಸಬಹುದು.

‍ಲೇಖಕರು Avadhi GK

18 February, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading