ಕುದಿಯೆಸರು ನನ್ನವ್ವ

ಮಂಜುಳಾ ಸಿ ಎಸ್

ಬಡವರೆದೆಯ ಕುದಿಯೆಸರು ನನ್ನವ್ವ
ಒಲೆಯಾರಲು ಬಿಡದೆ ಕಣ್ಣ ಕನಸ ಹಿಂಗದಂತೆ ಕಾಯ್ದ
ತುಂಬಿ ಬಂದ ಕಣ್ಣಾಲಿಗಳ ಕಂಡ ಕಂದನೆದುರು ಕಸ ಬಿತ್ತೆಂದು
ಮರೆಮಾಡಿ ಸೆರಗ ತುದಿಯಲಿ ಬತ್ತಿಹೋದ ಭರವಸೆಯ ಸಂಜೆ
ಸೊಡರನೊತ್ತಿಸಿ ಬದುಕ ಕಲಿಸಿದವಳು ನನ್ನವ್ವ

ಅದಾವ ಚಳಿ ಮಳೆ ಬಿರುಗಾಳಿಗಂಜದೆ
ನಡುಗುವ ಮಕ್ಕಳ ಎದೆಗವುಚಿ ತನಗಾದ ಭಯವನೆಂದು ತೋರದೆ
ನಡುರಾತ್ರೆಯಲಿ ನಿಶ್ಚಿಂತೆಯಿಂದ ಮಲಗಿಹ
ತಾಪತ್ರಯಗಳ ಅರಿವಿಲ್ಲದ ದಣಿದ ಗಂಡನೆಡೆಗೊಂದು
ಕನಿಕರದ ನಗೆಯಿಕ್ಕಿ ಎದೆಗಟ್ಟಿ ಮಾಡಿ ಅಲ್ಲಲ್ಲಿ ಸೋರುತಿಹ ಮನೆ ಒರೆಸಿ
ಮಕ್ಕಳ ಮರಿಗಳ ಬೆಚ್ಚಗಿಟ್ಟವಳು ನನ್ನವ್ವ

ಕಾಡುವ ಹಸಿವನಾದರೂ ಸಹಿಸಿ.. ಕಾಡುವ ಹಸಿದ ಕಂಗಳ
ನೋಟಕೆ ಕುಸಿದೊಮ್ಮೆ ಕುಂತರು ಮರಳಿ ಕೂರದೆ
ಭಯದ ಜತೆಗೆ ಧರ‍್ಯ ಕಡ ತಂದು
ಸೆgಗ ಮೈ ತುಂಬ ಹೊದ್ದು ಕೆಲಸಕೆ ನಿಂತವಳು
ಹಡೆದ ಮರುಘಳಿಗೆ ತನ್ನೊಟ್ಟೆ ಕಟ್ಟಿ ತಾನಸಿದರು
ಮಕ್ಕಳ ತುತ್ತ ಚೀಲವ ತುಸುವು ಕಮ್ಮಿಯಾಗದಂತೆ ಪೊರೆದವಳು ನನ್ನವ್ವ

ಸವಾಲೆಸದವರಿಂದು ಕರುಬುವ ಹಾಗೆ
ತಿದ್ದಿ ತೀಡಿ ವಿದ್ಯೆ ಬುದ್ದಿಯನಿಕ್ಕಿ
ನಾಲ್ಕು ಜನರ ನಡುವೆ ಎದೆಯೆತ್ತಿ ನಡೆವ
ಹೀಗಳೆದು ಹಿಂದೆ ದಬ್ಬುವ ಜನರೆದುರು
ಬದುಕುವ ಛಲವನುಟ್ಟಿಸಿ ನಡೆದ ದಾರಿಯಲ್ಲೆಲ್ಲ
ದಾರಿ ದೀವಿಗೆಯಾದವಳು ಮನೆದೇವತೆಯಾದವಳು ನನ್ನವ್ವ….

‍ಲೇಖಕರು Avadhi

May 10, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: