’ಕಿ ರಂ ಎನ್ನುವ ಜೋಗಿ’ – ಎಂ ಎಸ್ ರುದ್ರೇಶ್ವರ ಸ್ವಾಮಿ

UD-M16-RUDRESHWARA-SWAMI
 

ಎಂ ಎಸ್ ರುದ್ರೇಶ್ವರ ಸ್ವಾಮಿ

ಜೋಗಿ…

೨ಕಲೆ : ಹಾದಿಮನಿ

ಅದು ಆಷಾಡ ಶನಿವಾರ ಸಂಜೆ
ಶ್ರಾವಣ ಕಾಲಿಡಲು ನಾಲ್ಕೇದಿನ ಬಾಕಿ…
ಕಾಯುವುದೇ ಶ್ರಾವಣಕ್ಕೆ ಮಾತಿನ ಮಳೆಗೆ ಅಂಬಿಕಾತನಯದತ್ತನ
ಸ್ಮರಣೆಗೆ? ಕೊಂಚ ದಣಿವು ಮಾತಿನ ಹಕ್ಕಿಗೆ
ಯಾಕೋ ಗೂಡಿನ ಸೆಳೆತ ತಳಮಳ ಎದೆಯೊಳಗೆ;
ಆದರೂ, ಮಾತಿನ ಗುಂಗು ಗುಂಗಿಯಾಗಿ
ರಂಗೇರುತ್ತಿದ್ದಂತೆ, ಕಾಲನನ್ನು ತಡೆದು
ಬದಿಗೆ ನಿಲ್ಲಿಸಿ ಮಾತೇ-ಮಾತು…

ಇಡಿಯಾಗಿ ಹಿಡಿದಿಡುವುದು ಹೇಗೆ ಜೋಗಿಯನ್ನು
ನಾನು-ನೀನು ಇರುವತನಕ? ಪ್ರಶ್ನೆ ಕೇಳುತ್ತ
ಮತ್ತೆ ಮಾತು ಮಾತಿನರ್ಥದ ಹುಡುಕಾಟ
ದ್ವಂದ್ವವಿಲ್ಲದ ಜಗದಲ್ಲಿ ಭಾಷೆಗೆಲ್ಲಿದೆ ಅರ್ಥ ಎನ್ನುವ ತರ್ಕ,
ಅರ್ಥಕ್ಕೊಂದು ಅರ್ಥವಿದೆಯೇ, ಎಂಬುವ ಜಿಜ್ಞಾಸೆ
ನಾಳೆಯ ಹಂಗೇ ಇಲ್ಲದ ಜೋಗಿ ಜಂಗಮಗೆ.
ಎಲ್ಲವೂ ಮುಂಚೆಯೇ ಗೊತ್ತಿದ್ದಂತೆ ಮಾತು
ಒಮ್ಮೊಮ್ಮೆ ಅವಧೂತನಂತೆ ಎಲ್ಲವನ್ನು ಮುಟ್ಟಿ
ಅನುಭವಿಸಿದಂತೆ. ಕ್ಷಣ-ಕ್ಷಣವೂ ಅನುಸಂಧಾನ,
ಬದುಕಿನ ಕೊನೆ ತಲುಪಿದಂತ ಧಾವಂತ.
ಈ ಕ್ಷಣದ ಸತ್ಯ ಈಗಲೇ ಹೇಳಿ ಹೋಗುವ ತವಕ
ಏನು ಕಾದಿದೆಯೋ ನಾಳೆ ಯಾರಿಗೆ ಗೊತ್ತು?
ಎಲ್ಲೋ ಕೋಗಿಲೆ ಹಾಡುತ್ತಿದೆ ಕೇಳಿಸುತ್ತಿದೆಯೇ?
ಮೂರು ಬಾರಿ ಅದೇ ಪ್ರಶ್ನೆ. ಗೂಬೆಯೂ
ದನಿಗೂಡಿಸಬಹುದು ತಾಳಿ ಎಂದು ಹೇಳಿ,
ಮಗುವಿನಂತೆ ನಕ್ಕು ಎದೆ ಒತ್ತಿಕೊಳ್ಳುತ್ತ, ಸಾವನ್ನು
ಮಾತಿನಿಂದಲೇ ಗೆದ್ದು, ಖೆಡ್ಡಕ್ಕೆ ಕೆಡವಿ ಮರೆಯಲ್ಲಿ ನಿಂತು-
ನೋಡಿ ನಕ್ಕು, ನಗುನಗುತ್ತ ನೇಪಥ್ಯಕ್ಕೆ ಸರಿದುಹೋದ
ಆ ಮಾತಿನ ಮಾಯಕಾರ. ಸುರಿಯುತ್ತಿದೆ
ಈಗ ನೆನೆಯುತ್ತ ಅವನನ್ನು ಶ್ರಾವಣದ ಮಳೆ.
( 7.08.10 ರಂದು, ಕೀರಂ ಅವರ ಕಟ್ಟಕಡೆಯ ಉಪನ್ಯಾಸ ಕೇಳಿ…)

‍ಲೇಖಕರು G

August 17, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. janaki srinivas

    very nice. i have seen him very colsely, he was d daily visiter to my father’s house. 1965-67. i was in school. i he was full of live, he was di M.A. we always use to like his smile and his way og laughing stayle. after i completed my kannada Hons, i met him some time. 1972. after that i never met him. when my father was there i use to meet him 365 in our his. he use to share Rava dosa with my father daily at night if he did’t come that day we use to get his share. we school going children those days, we use to pray, Oh God, please dont send Nagaraja today. so that we will get Rawa dosa from our father’s plate!

    ಪ್ರತಿಕ್ರಿಯೆ
  2. mahesh kalal

    gurugale thumba chennagide ದ್ವಂದ್ವವಿಲ್ಲದ ಜಗದಲ್ಲಿ ಭಾಷೆಗೆಲ್ಲಿದೆ ಅರ್ಥ ಎನ್ನುವ ತರ್ಕ,
    ಅರ್ಥಕ್ಕೊಂದು ಅರ್ಥವಿದೆಯೇ, ಎಂಬುವ ಜಿಜ್ಞಾಸೆ
    ನಾಳೆಯ ಹಂಗೇ ಇಲ್ಲದ ಜೋಗಿ ಜಂಗಮಗೆ. nannage hidisida salugalu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: