ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಿರುನಗೆಯ ಧಿಮಾಕಿನವನು ನೀನು..

ನಿನ್ನ ನದಿಯಾಗುವೆ..

ಅಕ್ಷತಾ ಕೃಷ್ಣಮೂರ್ತಿ

ಮನಸು ಕುಣಿಯಿತು
ಹಠಾತ್ತನೆ ನನ್ನೆದುರಿಗೆ ಬಂದು ನಿಂತೆ
ಬಹಳ ಪರಿಚಯ ಎಂಬಂತೆ ನಗೆ ಬರೆದೆ
ಇಂಚಿಂಚು ಮಾತಾಡಿ ಅಳೆದೆ
ನಾನೂ…….
ಎತ್ತರ ದಪ್ಪ ತೂಕ ನೀಳಕಾಯ
ಎಲ್ಲ ಬರೊಬ್ಬರಿ ಇದೆ

ಬಹಳಷ್ಟು ಜನ ಬಂದು ಹೋಗಿದ್ದರು ಬಿಡು
ಚೀಟಿ ಕೊಟ್ಟವರು ಮಿಸ್ ಕಾಲ್‌ನವರು
ಗುಲಾಬಿ ಕೊಟ್ಟವರು ಕಳ್ಳ ನೋಟದವರು
ಕಣ್ಣು ಹೊಡೆದು ಬರುತ್ತೀಯಾ ಎಂದವರು

ಯೋಚಿಸುತ್ತಿದ್ದೇನೆ, ನಿನ್ನಂತಿರಲಿಲ್ಲ ಅವರೆಲ್ಲರೂ.

ಕೆನ್ನೆಯಲಿ ಗುಳಿ ಬಿದ್ದು ಕಿರುನಗೆಯ
ಧಿಮಾಕಿನವನು ನೀನು
ನೀಲಿ ಕಣ್ಣಿನ ತೆಳು ತುಟಿ
ಗುಂಗುರು ಕೂದಲು ಆಗಾಗ ಮೇಲೆ ಸರಿಸುತ್ತ
ಕುತ್ತಿಗೆಯ ಚೂರು ಅಲ್ಲಾಡಿಸಿದರೆ ಸಾಕು
ಗಾಳಿಯೂ ನಿಂತು ಮೋಹಿಸಿಬಿಡುವ ತಾಕತ್ತು
ಉದ್ದ ತೋಳಿನ ಅಂಗಿಯ ಕೈ ಮೊಣಕೈವರೆಗೆ
ಅರ್ಧ ಮಡಚಿ ಹೊಂದಿಸುವ ನಿನ್ನ ರೀತಿ
ಮನಸ್ಸನ್ನೆ ಬೇಟೆಯಾಡಿತ್ತು ಕಪ್ಪಗೆ ದಪ್ಪಗೆ
ಇರುವ ನಿನ್ನ ಕೈ
ಬೆನ್ನು ಎದೆ ಮೇಲಿನ ರೋಮದಲ್ಲೆಲ್ಲ
ಒಲವಿನವತಾರಗಳು ಕಾಣುತ್ತಿತ್ತು

ನನಗನಿಸುತ್ತದೆ ಬಹುಬಾರಿ
ನಿನ್ನ ಕೂಡಿದ ಹುಬ್ಬುಗಳ ದಟ್ಟ ಕೂದಲ
ಮೇಲೆಲ್ಲ ನನ್ನ ಹೆಸರಿದೆ
ಉದ್ದ ಉಗುರಿನ ಕೋಲು ಬೆರಳಲ್ಲಿ
ಕನಸಿನುಂಗುರವಿದೆ

ಬಯಸುತ್ತದೆ
ನಿನ್ನ ಮೀಸೆಯ ಕೂದಲಿಂದಲೇ
ಚುಚ್ಚಿಸಿಕೊಂಡು ಮೈ ಪೂರಾ
ಮುತ್ತಿನ ಹಚ್ಚೆ ಹಾಕಿಸಿಕೊಳ್ಳಬೇಕೆಂದು
ಈ ಮೌನ ಕಾನನದ ಹಾದಿಯಲ್ಲಿ ನಿನ್ನ
ಉದ್ದ ಬಾರೀಕು ಕಾಲಿನ
ಹೆಜ್ಜೆಯೊಡನೆ ನಡೆಯಬೇಕೆಂದು

ಅಂತಾದರೆ
ನೀನೀಗ ನನ್ನೆದೆಯ ಉತ್ತಮ ಪುರುಷ

 

‍ಲೇಖಕರು avadhi

9 March, 2020

5 Comments

  1. Chandru

    ತುಂಬಾ ಚನ್ನಾಗಿದೆ. ಸೂಪರ್!!

    • Akshata krishnmurthy

      ಧನ್ಯವಾದಗಳು

  2. Sudha Hegde

    ಚಂದವೋ ಚಂದ

  3. Sudha Hegde

    ಚಂದವೋ ಚಂದ…

  4. Lata

    ತುಂಬಾ ಚೆಂದದ ಕವಿತೆ, “ನನ್ನೆದೆಯ ಉತ್ತಮ ಪುರುಷ” ನನಗಿಷ್ಟವಾದ ಸಾಲುಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading