ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ – ಊಟ, ತಿಂಡಿ ಇತ್ಯಾದಿ.. 

ಇವರು ರಂಗ ‘ಕಿರಣ’-

ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. ‘ಅವಧಿ’ ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!.

ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು ‘ರಂಗ ಕೈರಳಿ’ ಹಿಡಿದು ಬಂದರು. ಆ ರಂಗ ಕೈರಳಿ ಎಲ್ಲರೂ ಕೇರಳದ ರಂಗಭೂಮಿಯ ಕುರಿತ ದಾಖಲೆ ಎಂದುಕೊಂಡಿದ್ದರೆ. ಅದು ನಿಜವೇ ಹೌದಾದರೂ ಅದು ಅದಕ್ಕಿಂತ ಹೆಚ್ಚಾಗಿ ಕಿರಣ್ ಭಟ್ ಅವರ ರಂಗ ಪ್ರೀತಿಯ ಬಗೆಗಿನ ದಾಖಲೆ.

ನಾನು ಕಿರಣ ಭಟ್ ಅವರ ಹೆಸರು ಕೇಳಿದ್ದು ರಂಗಭೂಮಿಗೆ ಥಳಕು ಹಾಕಿಕೊಂಡೇ. ಅಷ್ಟರ ಮಟ್ಟಿಗೆ ಕಿರಣ್ ಹಾಗೂ ರಂಗಭೂಮಿ ಒಂದೇ ನಾಣ್ಯದ ಎರಡು ಮುಖಗಳು.

ಮಕ್ಕಳ ಅಂತೆಯೇ ಹಿರಿಯರ ರಂಗಭೂಮಿಯಲ್ಲಿ ಅಪಾರ ಅನುಭವವಿದೆ. ಇಷ್ಟೇ ಆಗಿದ್ದರೆ ಕಿರಣ್ ಬಗ್ಗೆ ರಂಗ ಪ್ರಿಯರು ಮಾತನಾಡುತ್ತಿರಲಿಲವೇನೋ. ಅವರು ಪ್ರತೀ ರಂಗ ಉತ್ಸಾಹಿಗೂ ಕೊಟ್ಟ ಬೆಂಬಲ, ತಮ್ಮ ಜಿಲ್ಲೆಯಲ್ಲಿ, ಹೋದೆಡೆಯಲ್ಲಿ ಕಟ್ಟಿಕೊಂಡ ರಂಗ ಆವರಣ, ಪ್ರಯೋಗಗಳಿಗೆ ಕೊಟ್ಟ ಹೊಸ ಧಿಕ್ಕು ಎಲ್ಲವೂ ಕಿರಣರನ್ನು ‘ರಂಗ ಕಿರಣ’ವಾಗಿಸಿದೆ.

ಇವರ ಬೆನ್ನು ಬಿದ್ದು, ದಮ್ಮಯ್ಯಗುಡ್ಡೆ ಹಾಕಿ ಇವರ ಕೈಗೆ ಪೆನ್ನು ಹಿಡಿಸಿದ ಒಂದೇ ಕಾರಣಕ್ಕೆ ಇವರ ಏಕೈಕ ಕೃತಿ ರಂಗ ಕೈರಳಿ ಹೊರಬಂದಿತು. ಅದು ಅವರಿಗೆ ಹೆಸರು ತಂದುಕೊಟ್ಟಂತೆ ಕೇರಳದ ರಂಗಭೂಮಿಯನ್ನೂ ಕರ್ನಾಟಕದಲ್ಲಿ ಇನ್ನಿಲ್ಲದಂತೆ ಪ್ರಚುರಪಡಿಸಿತು.

ಈ ಕೃತಿಯ ನಿರೂಪಣಾ ಶೈಲಿ, ಅನುಭವ ಎಲ್ಲವೂ ಕನ್ನಡದ ಓದುಗರ ಕುತೂಹಲ ಕೆರಳಿಸಿದೆ. ಇವರ ಈ ಕೃತಿ ಪ್ರಕಟಿಸಲು ಕೈ ಹಚ್ಚಿದ ಕಾರಣಕ್ಕೆ ನಾನು ಅವರ ಜೊತೆಯಾಗಿ ಕೇರಳದ ಅಂತಾರಾಷ್ಟ್ರೀಯ ರಂಗ ಉತ್ಸವಕ್ಕೂ ಹೋಗಿ ಬಂದೆ. ಅಲ್ಲಿ ನಾವಿಬ್ಬರೂ ನೋಡಿದ, ನನಗೆ ನೋಡಲು ಕೊಡದೆ ತಾವೊಬ್ಬರೇ ಕೂತು ನೋಡಿದ ನಾಟಕಗಳ ಸರಣಿಯೇ ಈ ಬರಹ ಗುಚ್ಛ.

ಕೇರಳದ ಬೀದಿಗಳಲ್ಲಿ ಸುತ್ತುತ್ತಾ, ಅಲ್ಲಿನ ಗೊತ್ತಿಲ್ಲದ ಭಾಷೆಗೆ ಕಣ್ಣು ಬಿಡುತ್ತಾ, ಭಾಷೆ ಗೊತ್ತಿಲ್ಲದಿದ್ದರೂ ನಾಟಕದ ಒಳಮಿಡಿತಗಳನ್ನು ಅರ್ಥ ಮಾಡಿಕೊಂಡ, ಅಲ್ಲಿನ ರಂಗ ಉತ್ಸಾಹದ ಜೊತೆಗೆ ಸೇರಿ ಹೋದ ಎಲ್ಲದರ ನೋಟ ಇಲ್ಲಿದೆ.

ಕಿರಣ ಭಟ್ ತಮ್ಮ ಇಂದಿನ ಶೈಲಿಯಲ್ಲಿ ಬರೆದಿದ್ದಾರೆ. ಓದಿ

-ಜಿ ಎನ್ ಮೋಹನ್

ರಂಗ ಕೈರಳಿ‘ ಕೃತಿಯನ್ನು ಕೊಳ್ಳಲು –https://bit.ly/3zioQ5f ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

10

ಉತ್ಸವದಲ್ಲಿ ಪ್ರತಿ ವರ್ಷ ಮುಖ್ಯವಾಗಿ ಕಾಡುತ್ತಿದ್ದುದು ಊಟ ತಿಂಡಿಯ ಸಮಸ್ಯೆ. ಅಕಾಡಮಿಯ ಕ್ಯಾಂಪಸ್ ನಲ್ಲಿ ಒಂದು ಕ್ಯಾಟೀನ್ ಇದ್ರೂ ಅಲ್ಲಿ ತುಂಬಾ ರಷ್ ಇರ್ತಿತ್ತು. ತುಂಬ ಹೊತ್ತು ಕಾಯ್ಬೇಕಿತ್ತು. ಒಂದೆರಡು ವರ್ಷ ಖಾಸಗಿ ಹೊಟೆಲ್ ನವರು ಕೌಂಟರ್ ತೆರೆದಿದ್ರು. ಚೆನ್ನಾಗಿರೋ ತಿಂಡಿಯೂ ಸಿಕ್ತಿತ್ತು. ಆದ್ರೆ ಸ್ವಲ್ಪ ದುಬಾರಿ ಅನಿಸ್ತಿತ್ತು. ಆದರೆ ಈ ವರ್ಷ ಫುಲ್ ಛೇಂಜ್. ಕಳೆದ ವರ್ಷಗಳಿಗಿಂತ ವ್ಯವಸ್ಥೆ  ತುಂಬಾ ಚೆನ್ನಾಗಿತ್ತು. ಇದಕ್ಕೆ ಕಾರಣ ‘ಕುಟುಂಬಶ್ರೀ’ ಇಲ್ಲಿ ಪ್ರವೇಶಿಸಿದ್ದು.

1997 ರಲ್ಲಿ ಪ್ರಾರಂಭವಾದ ‘ಕುಟುಂಬಶ್ರೀ’ ಮಹಿಳೆಯರದೇ ಆದ ಒಂದು ಸಂಸ್ಥೆ. ಹಳ್ಳಿಯ, ಪಟ್ಟಣದ ಮಹಿಳೆಯರ ಒಕ್ಕೂಟ. ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮತ್ತು ಮಹಿಳಾ ಸಬಲೀಕರಣ ಸಂಸ್ಥೆಯ ಧ್ಯೇಯ. ಹಾಗಾಗಿ ಮಹಿಳೆಯರನ್ನ ಸ್ವಾವಲಂಬಿಗಳಾಗಿಸುತ್ತ ಅವರನ್ನು ಸ್ವಂತ ಉದ್ಯೋಗಗಳಿಗಾಗಿ ಸಿದ್ಧಮಾಡೋದು ಸಂಸ್ಥೆಯ ಮುಖ್ಯ ಚಟುವಟಿಕೆ. ಹಾಗಾಗಿಯೇ ಈ ಬಾರಿ ಮಹಿಳಾ ರಂಗತರಬೇತಿ ಶಿಬಿರದಲ್ಲೂ ಕುಟುಂಬಶ್ರೀಯ ಮಹಿಳೆಯರಿಗೂ ಆದ್ಯತೆ ನೀಡಲಾಗಿತ್ತು.

ದೊಟ್ಟದೊಂದು ಟೆಂಟ್ ನ ಅಡಿಯಲ್ಲಿ ಮಹಿಳೆಯರದೇ ಸಿಕ್ಕ ಚಿಕ್ಕ ಸ್ಟಾಲ್ ಗಳು. ಬಗೆ ಬಗೆಯ ದೇಸೀ ತಿನಿಸುಗಳು. ಬೆಳಗಿನಿಂದ ತಡ ರಾತ್ರಿಯ ವರೆಗೂ ಸಿಕ್ತಿದ್ದವು. ನಾನು ಇದುವರೆಗೂ ನೋಡದ, ತಿನ್ನದ ಹೊಸ ಹೊಸ ತಿನಿಸುಗಳ ರುಚಿ ನೋಡ್ದೆ.

ರಂಗಶಾಲೆಗಳ ಅಂತರರಾಷ್ಟ್ರೀಯ ಉತ್ಸವ

ಬಹುಷ: ಜಗತ್ತಿನಲ್ಲೇ ಮೊದಲ ಬಾರಿ ನಡೆದ ಉತ್ಸವ ಇದು. ಈಗಂತೂ ಅಲ್ಲಲ್ಲಿ ರಂಗಶಾಲೆಗಳು ಹುಟ್ಟಿಕೊಂಡಿವೆ.ಪ್ರತಿವರ್ಷ ಭವಿಷ್ಯದ ನೂರಾರು  ರಂಗಕರ್ಮಿಗಳು ಅವುಗಳಿಂದ ಹೊರಬರುತ್ತಿದ್ದಾರೆೆ. ಇಂಥ ಶಾಲೆಗಳ ಒಂದು ಉತ್ಸವ ಇದು.  ಇದು ರಂಗ ಕಲಿಕೆಯ ಬಗೆಗಿನ ಹೊಸ ಚಿಂತನೆಗಳಿಗಾಗಿ ಸಿದ್ಧಪಡಿಸಿದ ವೇದಿಕೆ. ರಂಗಪಠ್ಯಗಳು, ನಿರ್ದೇಶಕರ ಸಭೆಗಳು, ರಂಗಶಿಕ್ಷಕರಿಗಾಗಿ ಕಾರ್ಯಾಗಾರ, ರಂಗಶಾಲೆಗಳಲ್ಲಿ ಸಿದ್ಧವಾದ ನಾಟಕಗಳ ಪ್ರದರ್ಶನ ಇವೆಲ್ಲ ಇಲ್ಲಿದ್ದವು. ನಾಸಿರುದ್ದೀನ ಶಾ, ರುಸ್ತಮ್ ಭರೂಚ, ಕೀರ್ತಿ ಜೈನ್ ಸೇರಿದಂತೆ ಬೇರೆ ಬೇರೆ ದೇಶಗಳ ನಟರು, ನಿರ್ದೇಶಕರು ಈ ಉತ್ಸವದಲ್ಲಿ ಭಾಗಿಯಾಗಿದ್ರು.

ಮ್ಯೂಸಿಕ್:

ಸಂಗೀತ ಇಲ್ದೇ ನಾಟ್ಕವುಂಟೇ? ಮರದ ಕೆಳಗಿನ ಗೋಷ್ಠಿಗಳಷ್ಟೇ ಅಲ್ಲ, ಈ ವರ್ಷ ಸ್ಟೇಜ್ ಗಳಿಂದಾನೂ ಸಂಗೀತ ಕೇಳಿ ಬಂತು. The Indian Ocean Band, Bandish aur Gaat, Avial Band, Urban Folk singer Sumit Bose, Pulli Parave . RaystenAbel-Manganiar Seduction

ವಿವಿಧ ಶೈಲಿಯ ಸಂಗೀತಗಳಿಂದ ವಾತಾವರಣವನ್ನು ಇನ್ನಷ್ಟು ಮುದಗೊಳಿಸಿದ್ವು.

‘ಇಟ್ಫಾಕ್’ ಗೆ ಹೋಗುವವರಿಗಾಗಿ:

 ತುಂಬ ಜನ ಈ ಆಂತರ್ರಾಷ್ಟ್ರೀಯ ನಾಟಕೋತ್ಸವಕ್ಕೆ ಹೋಗುವ ಉತ್ಸಾಹ ತೋರಿಸ್ತಿದಾರೆ. ಆಂಥವರಿಗಾಗಿ ಕೆಲವು ಮಾಹಿತಿ.

1. ನಾಟಕೋತ್ಸವಕ್ಕೆ ನಾಟಕ ಕಳಿಸಲು ಸಪ್ಟೆಂಬರ್ ತಿಂಗಳಲ್ಲಿ ಕರೆಯ ಶುರುವಾಗ್ತದೆ. ನಾಟಕ ಕಳಿಸುವವರು ಇಟ್ಫಾಕ್ ನ ವೆಬ್ ಪೇಜನ್ನು ನೋಡ್ತಿರಿ.

2. ಉತ್ಸವಕ್ಕೆ ಒಂದು ತಿಂಗಳಿರುವಾಗ ನಾಟಕಳ ವಿವರಗಳು ಪೋರ್ಟಲ್ ನಲ್ಲಿ ಬರಲು ಶುರುವಾಗ್ತವೆ. ನಾಟಕಗಳ ವಿವರ ನೋಡ್ಕೊಂಡು ನೀವು ನೋಡಬೇಕಾದ ನಾಟಕ, ದಿನ  ಮೊದಲೇ ಗುರುತು ಹಾಕಿಕೊಳ್ಳಿ.

3. ಉತ್ಸವಕ್ಕೆ ಎರಡು ವಾರ ಇರುವಾಗ ಓನಲೈನ್ ಬುಕಿಂಗ್ ಶುರುವಾಗ್ತದೆ. ಇದನ್ನು ಮಾತ್ರ ಆಗಾಗ ಚೆಕ್ ಮಾಡ್ತಿರಬೇಕು. ದೂರದಿಂದ ಹೋಗುವವರು ಮೊದಲೇ ಬುಕಿಂಗ್ ಮಾಡಿಕೊಳ್ಳದಿದ್ರೆ ನಾಟಕ ನೋಡೋದು ಕಷ್ಟ. ಮೊದಲ ದಿನವೇ ಸೀಟುಗಳು ಭರ್ತಿಯಾಗ್ತವೆ. ಇಲ್ಲದಿದ್ರೆ  ಬೆಳಗಿನಿಂದ್ಲೂ ಕ್ಯೂ ನಲ್ಲೇ ನಿಲ್ಬೇಕಾಗ್ತದೆ.

4. ಬುಕಿಂಗ್ ವಿವರ ಮೇಲ್ ನಲ್ಲಿ ಬರ್ತದೆ. ಕಾಪಾಡಿಕೊಳ್ಳಿ.

5. ಟಿಕೆಟ್ ಗಳು ಕೌಂಟರ್ ನಲ್ಲಿ ಸಿಕ್ತವೆ.

6. ತ್ರಿಷೂರಲ್ಲಿ ಏರಪೋರ್ಟ್ ಇಲ್ಲ. ಕೊಚೀನ್ ನಲ್ಲಿದೆ.ಅಲ್ಲಿಂದ ಒಂದೂವರೆ ಗಂಟೆ ಪ್ರಯಾಣ.

7. ಬೆಂಗಳೂರು, ಮಂಗಳೂರಿಂದ ಟ್ರೇನ್ ಇದೆ. ಬೆಂಗಳೂರು, ಮೈಸೂರಿನಿಂದ ಬಸ್ ಗಳಿವೆ.

8. ವಡಕ್ಕನಾಥನ್ ದೇವಸ್ಥಾನದ ಸುತ್ತ ಒಳ್ಳೊಳ್ಳೆ ಲಾಡ್ಜ್ ಗಳಿವೆ. ಒಳ್ಳೇ ರೆಸ್ಟುರಾಂಟ್ ಗಳಿವೆ. ಮೊದಲೇ ಬುಕ್ ಮಾಡಿಕೊಳ್ಳಿ. ಅಲ್ಲಿಂದ ಆರಾಮಾಗಿ ಆಟೋದಲ್ಲಿ ಹೋಗಬಹುದು. ಆಟೋಗಳಿಗೆ ತುಂಬ ಕಡಿಮೆ ದರ ಮತ್ತು ತುಂಬ ಪ್ರಾಮಾಣಿಕತೆ.

9. ಅಲ್ಲಿ ಹೋದವ್ರು ತಪ್ಪದೇ ತೇರಳಿ ಶೇಖರ್ ರನ್ನು ಭೆಟ್ಟಿಯಾಗಿ. ಪಕ್ದಲ್ಲೇ ಗುರುವಾಯೂರಿನಲ್ಲಿರ್ತಾರೆ. ಕನ್ನಡ ಮಲಯಾಳಂ ಕಾವ್ಯದ ನಡುವಿನ ಗಟ್ಟಿ ಕೊಂಡಿ ಅವರು. ಅಪ್ಪಟ ಕವಿ ಹೃದಯದ ತುಂಬಾ ಸರಳ ಮನುಷ್ಯ.

10. ಸರಿ, ಎಲ್ಲ ರೆಡಿ ಮಾಡ್ಕೊಂಡು…..ಹೊರಡಿ

ಕೇರಳಿಗರ ಔದಾರ್ಯದ ಕುರಿತ ಒಂದು ಘಟನೆಯೊಂದಿಗೆ ಲೇಖನ ಮುಗಿಸ್ತೇನೆ.

ಒಂದು ‘ಔದಾರ್ಯ’ ದ ಕತೆ.

ಎಂಟು ವರ್ಷದಿಂದ ಇಟ್ಫಾಕ್ ಗೆ ಬರ್ತಿರೋ ನನಗೆ ಸಾಕಷ್ಟು ಒಳ್ಳೇ ಅನುಭವಗಳಾಗಿವೆ. ಅವುಗಳಲ್ಲಿ,ಕೇರಳಿಗರ, ಮುಖ್ಯವಾಗಿ ಅಲ್ಲಿನ ಸಂಘಟಕರ ಔದಾರ್ಯದ ಕುರಿತ ಒಂದು ಘಟನೆಯೊಂದಿಗೆ ಸರಣಿಯನ್ನ ಮುಗಿಸ್ತೇನೆ. 2015 ನೇ ಇಸವಿಯ ಇಟ್ಫಾಕ್ ಅದು. ‘ ಮಹಾಭಾರತ’ ಅನ್ನೋ ನಾಟ್ಕದ ಪ್ರದರ್ಶನ ಇತ್ತು. ಜಪಾನಿನ ಒಂದು ಯೋಜನೆಯ ನಾಟ್ಕ ಇದು. ನಾಲ್ಕು ಭಾಗಗಳ ‘ಮಹಾಭಾರತ’ ದ ಎರಡನೇ ಭಾಗದ ಪ್ರೀಮಿಯರ್ ಇಲ್ಲೇ ಆಗ್ಲಿಕ್ಕಿತ್ತು. ‘ಹಿರೋಷಿ ಕೊಯ್ಕೆ’ ಯವರ ಈ ನಾಟ್ಕದಲ್ಲಿ ಮಲೇಷಿಯ, ಇಂಡೋನೇಷ್ಯಾ, ಜಪಾನ್, ಥೈಲ್ಯಾಂಡ್ ಮತ್ತು ಭಾರತದ ಬೇರೆ ಬೇರೆ ಶೈಲಿಯ ನೃತ್ಯ ಕಲಾವಿದರಿದ್ರು. ನನಗೋ ಈ ನಾಟ್ದ ಬಗ್ಗೆ ಅಸಾಧ್ಯ ಕುತೂಹಲ. ನೋಡ್ಲೇ ಬೇಕೆನ್ನೋ ಆಸೆ. ಆದ್ರೆ ನನಗೆ ಟಿಕೆಟ್ ಸಿಕ್ಕರ್ಲಿಲ್ಲ. ನೂರು ಜನ ಕೂತ್ಕೋಬಹುದಾದ ‘ಬ್ಲಾಕ್ ಬಾಕ್ಸ್’ ಎನ್ನೋ ಥಿಯೇಟರ್ ತುಂಬಿಹೋಗಿತ್ತು. ಜಾಗವಿಲ್ಲದೆ ಜನ ಬೇಸರದಿಂದ ಹಿಂದೆೆ ಹೀಗೋಕೆ ಶುರು ಮಾಡಿದ್ರು. ನಾನು ಬಾಗ್ಲಲ್ಲೇ ನಿಂತಿದ್ದೆ. ಗೇಟಲ್ಲಿ ನಿಂತೋನನ್ನ ಪರಿ ಪರಿಯಾಗಿ ಬೇಡ್ಕೋತಿದ್ದೆ.

‘ನಾನು ಕರ್ನಾಟಕದ ದೂರದ ಊರಿಂದ ಬಂದಿದೇನೆ, ಹೇಗಾದ್ರೂ ಮಾಡಿ ವ್ಯವಸ್ಥೆ ಮಾಡಿ’ ಅಂತ. ಒಂದೇ ಒಂದು ಸೀಟೂ ಇಲ್ಲ ಅಂತ ಪದೇ ಪದೇ ಹೇಳ್ತಿದ್ದವನಿಗೆ ಅದೇನನ್ನಿಸ್ತೋ. ಬಾಗಿಲು ಮುಚ್ಚಿ ಒಳಗೆ ಹೋದ. ಇನ್ನೇನು ನಾಟ್ಕ ಶುರುವಾಗೋಕೆ ಐದು ನಿಮಿಷ ಇತ್ತು. ನನಗೋ ಚಡಪಡಿಕೆ. ‘ಮಿಸ್ ಆಯ್ತು’ ಅಂತ ತಿರುಗಿ ಹೊರಡ್ಬೇಕು, ಅಷ್ಟರಲ್ಲಿ ಬಾಗಿಲು ತೆರೀತು. ಗೇಟ್ ಕೀಪರ್ ಹಿರಿಯರೊಬ್ಬರೊಂದಿಗೆ ಹೊರಬಂದ. ಅವ್ರಲ್ಲಿ ನನ್ನ ಕತೆ ಹೇಳ್ಕೊಂಡೆ. ನಕ್ಕರು. ನನ್ನನ್ನ ‘ಒಳಗೆ ಕರ್ಕೊಂಡು ಹೋಗು’ ಅಂತ ಸನ್ನೆ ಮಾಡಿದ್ರು. ಆಗಲೇ ಥಿಯೇಟರ್ ನಲ್ಲಿ ಕತ್ತಲಾಗಿತ್ತು. ಹುಡುಗ ಕೈ ಹಿಡಿದು ಕರಕೊಂಡು ಹೋಗಿ ಕೂರಿಸಿದ.ಅದೂ ಮುಂದಿನ ಸಾಲಿನಲ್ಲಿ. ನಾಟಕ ನೋಡಿ ಹೊರಬರುವಾಗ ಹುಡುಗನಿಗೆ ಥ್ಯಾಂಕ್ಸ್ ಹೇಳಿದೆ. ಅವ ಹೇಳಿದ ‘ ನೀವು ಸರ್ ಗೆ ಥ್ಯಾಂಕ್ಸ್ ಕೇಳ್ಬೇಕು. ಅವರು ಕೂತ ಜಾಗಾನ ನಿಮಗೆ ಬಿಟ್ಕೊಟ್ಟು ಸರ್ ಚೆಂಬರ್ ಗೆ ಹೊರಟೋದ್ರು’

ಹೌದು. ಅಕಾಡಮಿಯ ಅಧ್ಯಕ್ಷರು ಅವರ ಸೀಟ್ ನನಗೆ ಬಿಟ್ಕೊಟ್ಟು ನನಗೆ ನಾಟ್ಕ ತೋರಿಸಿದ್ರು.

| ಮುಕ್ತಾಯ |

‍ಲೇಖಕರು avadhi

April 5, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: