ಸಿ ವಿ ಶೇಷಾದ್ರಿ ಹೊಳವನಹಳ್ಳಿ
1
ಒಣಗಿತನಗೆತಾನೇ ಬಿದ್ದು ಹೋಗುವ
ಎಲೆ ಮೇಲೆ
ಕರಗಿಕಾಣೆಯಾಗುವ
ಬಿಂದು ಬಂದು
ಹೊಳೆ ಹೊಳೆಯುತ್ತಲೇ
ಮಣ್ಣಿಗೆ ಬೀಳುತಿದೆ.
2
ಬಾ ಬಂದಿದ್ದಾನೆರಾಜ
ಜೊತೆಗೆ ಫೋಟೋ ತೆಗೆಸಿಕೊಳ್ಳೋಣ.
ಸ್ವಲ್ಪಇರುಓದುತ್ತಿದ್ದೇನೆ ಅವನ ಹಗರಣ.
3
ಹಣ ಹೊತ್ಕೊಳ್ಳೋ ಬದ್ಲು
ಸ್ವಲ್ಪ ಹೊತ್ತು ಹೆಣ ಹೊತ್ಕೊ.
4
ಗಿಡವೇ. . .
ಮುಳ್ಳುಗಳಿಂದ ಚುಚ್ಚಿ
ಗಾಯ ಮಾಡಿದ ಮೇಲೆ
ನಿನ್ನ ಹೂವಿನ ಸುಗಂಧವನ್ನು
ಯಾರುಗೌರವಿಸುತ್ತಾರೆ..?
ಯಾರು ನಂಬುತ್ತಾರೆ..?

5
ಗಾಳಿ ಪಟದದಾರವನ್ನು ಮಗು ತೋರುತ್ತಿದೆ.
ನನಗೆ ನೇಣೇ ನೆನಪಾಗುತ್ತಿದೆ.
6
ದಾರಿಯೆಂಬ ಸಮುದ್ರದದಡದಲ್ಲಿ
ಅಂಗಡಿಗಳ ಅಲೆಗಳು
ಹಡಗುಗಳಾದ ಮನುಷ್ಯರನ್ನು ಸೆಳೆಯುತ್ತಿವೆ.
ಹಡಗುಗಳು ತೂತುಗಳನ್ನು ಮುಚ್ಚಿಕೊಳ್ಳಲು,
ಬಟ್ಟ್ಟೆಕೊಳ್ಳಲು
ಅಂಗಡಿಗಳ ಬಳಿ ಅಲೆಯುತ್ತಿವೆ.
7
ಈ ಬದುಕು
ದುಡುಕು.
ಒಂದೊಂದೇ ಮೆಟ್ಟಿಲಿಳಿದು
ಕೈ ಜಾರಿದ್ದೆಲ್ಲ
ಹುಡುಕು.
8
ಗಾಡಿ ಹೊರಟಿದೆ ಹತ್ತಿ.
ಎಲ್ಲಊರಲ್ಲೂಓಡಾಡುತ್ತಿದೆ.’
ಕಿಟಕೀಲಿ ಕಾಣಿಸೋದೃಶ್ಯ ನಿಜವಾದ್ರೂ
ಯಾವುದನ್ನೂ ಕೈಲಿ ಹಿಡಿಯೋಕ್ಕಾಗಲ್ಲ..
ನೋಡ್ರಿ ಅಷ್ಟೇ.
ಮಂದಿರ ಮಸೀದಿ ಮತ್ತುಚಚರ್ು ಹಿಂದಕ್ಕೆ
ಹೋದವು ನೋಡ್ರಿ.
9
ಬೆಟ್ಟವನ್ನು ಹಾಗೇ
ಬಿಟ್ಟು ಬಿಡಿ.
ಹೊನಲು ಹುಟ್ಟಲಿ.
‘
10
ದಾರಿಗೆಚಾಚಿಕೊಂಡಿರುವ
ಕೊಂಬೆಗೆ
ಜೋಕಾಲಿ ಕಟ್ಟಿಆಡುವುದಕ್ಕಿಂತ
ಕಡಿದು ಹಾಕುವುದೇ ಮೇಲು.






0 Comments