ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಶ್ಮೀರದ ಕನವರಿಕೆ..

girish-jakapure

ಗಿರೀಶ ಚಂದ್ರಕಾಂತ ಜಕಾಪುರೆ

ಬೆಳಕಸರಿದು ಕತ್ತಲಿಳಿದು ಬಂದಾಗ

ನಿನ್ನ ಹಾಡುಗಳು ಇರುತ್ತವೆಯೇ?

ಹೌದು… ಆಗಲೂ ಹಾಡುಗಳಿರುತ್ತವೆ

ಬೆbird2ಳಕ ನುಂಗಿದ ಕತ್ತಲೆ ಹಾಡು

ಕತ್ತಲೆಗೆ ಆಹುತಿಯಾದ ಬೆಳಕಿನ ಹಾಡು

ಭೂತಲದ ಸ್ವರ್ಗವಾಗಿದ್ದ ನಾನೀಗ

ಉಸಿರಾಡುತ್ತಿದ್ದೇನೆ ಭಯದ ನೆರಳಲಿ

ಸೌಂದರ್ಯದ ಖಣಿಯಾಗಿದ್ದ ಕಣಿವೆಗಳು

ನರಳುತ್ತಿವೆ ಸ್ಫೋಟದ ಅಬ್ಬರಗಳಲಿ

ಸೇಬುಹಣ್ಣಿನ ತೋಟದಲಿ

ಬೀಳುತ್ತಿವೆ ಕೈಬಾಂಬುಗಳು

ಕೇಶರದ ಫಸಲಿಂದ ಕೆಂಪಾಗಿರುತ್ತಿದ್ದ

ಇಳಿಜಾರುಗಳಲಿ ರಕ್ತದ ಹರಿವು

ಚಿನಾರ್ ವೃಕ್ಷಗಳ ನೆರಳಿದ್ದಲ್ಲಿ

ಈಗ ಭಯೋತ್ಪಾದಕರ ಛಾಯೆ

bird3ಅಲ್ಲಿಯೂ ನಿನ್ನ ಹಾಡುಗಳಿರುತ್ತವೆಯೇ?

ಹೌದು… ಅಲ್ಲಿಯೂ ಹಾಡುಗಳಿರುತ್ತವೆ

ಮದ್ದುಬೆರೆತ ಕಮಟು ಗಾಳಿಯ ಹಾಡು

ರೆಕ್ಕೆ ಕಿತ್ತಲ್ಪಟ್ಟ ಬಿಳಿಪಾರಿವಾಳದ ಹಾಡು

ರಾತ್ರಿಯಿಡಿ ಬಂದೂಕಿನ ಮೊರೆತ

ಬೆಳಗಾದರೆ ಗೋಳಿಬಾರ್ ನ ಸುದ್ಧಿ

ಹತರಾದ ನನ್ನ ನಿನ್ನ ಜನ

ನೆರೆಮನೆಯವರ ವಿಛಿನ್ನ ದೇಹ

ಹುತಾತ್ಮನಾದ ಯೋಧ

ಹೆಂಗೂಸಿನ ಹಾಳಾದ ಶೀಲ

ಸತ್ತ ಕನಸುಗಳ ಮೆರವಣಿಗೆ

bird1ಕರ್ಫ್ಯೂ, ನಿಷೇಧ, ಧಿಕ್ಕಾರ ಮತ್ತೆ

ರಾತ್ರಿಯಿಡಿ ತೆರೆದ ಬಂದೂಕಿನ ಬಾಯಿ

ಕಳ್ಳರ ಕಂಡು ಬೊಗಳುವ ನಾಯಿ

ಆಗಲೂ ನಿನ್ನ ಹಾಡುಗಳಿರುತ್ತವೇಯೇ?

ಹೌದು… ಆಗಲೂ ಹಾಡುಗಳಿರುತ್ತವೆ

ತನ್ನವರ ಕಳೆದುಕೊಂಡ ನನ್ನವರ ಹಾಡು

ಯಾರಿಗೂ ಕೇಳದಂತೆ ಬಿಕ್ಕಿದವರ ಹಾಡು

ಮಾನಸ ಸರೋವರದಿ ತೇಲುವ

ದೋಣಿಯಲಿ ಅಸಹಾಯಕ ಹೆಣ

ಗುಲ್ಮರ್ಗಿನ ರಸ್ತೆಗಳಲಿ ಆರ್ತನಾದ

ಹಿಮಶಿಖರದಲಿ ಅಪರಿಚಿತ ಮುಖ

ಹಡೆಮುರಿಗಟ್ಟಿದ ಶೇಷನಾಗನ ಹೆಡೆ

rd4ಕಿಂಚಿತ್ತೂ ಕದಲದ ದ್ರಾಸ್ ನ ಗಾಳಿ

ನರಳುತ್ತ ಹರಿವ ಝೇಲಂನ ನೀರು

ವೋಲಾರ ಕೆರೆಯಲಿ ಬೆರೆತ ವಿಷ

ಕಾಡೆಲ್ಲ ಸುಡುವ ರಣಗಿಚ್ಚು

ದುಕಲೆಂದು ಸಾವತ್ತ ಓಡುವ ಹುಚ್ಚು

ಆಗಲೂ ನಿನ್ನ ಹಾಡುಗಳಿರುತ್ತವೆಯೇ?

ಹೌದು.. ಆಗಲೂ ಹಾಡುಗಳಿರುತ್ತವೆ

ಬೆಂಕಿಬಿದ್ದು ಕರಕಾದ ಗುಡಿಸಲ ಹಾಡು

ಖಾಲಿಯಾದ ಊರು ಕೇರಿಯ ಹಾಡು

‍ಲೇಖಕರು Admin

2 November, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading