ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾವ್ಯ ಎಂ ಎನ್ ಕವಿತೆ- ಸಸ್ತಾ ಮಾಲು…

ಕಾವ್ಯ ಎಂ ಎನ್

ಬಹಳಷ್ಟು ಸಭ್ಯ ಗಂಡಸರ ಪ್ರೇಮ
ಯೋನಿ ಬುಡದಲ್ಲಿ ಹುಟ್ಟಿ
ಅಲ್ಲೇ ಬರಡಾಗುತ್ತದೆ…

ದೇಹದ ಅಂಚು ದಾಟದ
ಅವರ ಬಹಳಷ್ಟು ಪ್ರೇಮಪ್ರಕರಣಗಳು
ಹೆಣ್ಣಿನ ಒದ್ದೆ ನ್ಯಾಪ್ಕೀನಿನ
ರಕ್ತಸ್ರಾವದಲ್ಲಿ
ಪಾತವಾಗುತ್ತದೆ..

ಹೆಣ್ಣೆಂದರೆ……
ಮೊಲೆ ಮುಡಿ ಗರ್ಭ ಮುಟ್ಟು
ಎಂದಷ್ಟೇ ಭಾವಿಸುವ
ಅಸಂಖ್ಯ ಗಂಡಸರ
ಒಲವಿನ ಇಶಾರೆಯಲ್ಲಿ
ಅವಳು ಕಣ್ಣು ಬಾಯಿ ಮುಖ
ಮುಚ್ಚಿಕೊಂಡ ಸ್ಥಿತಿಯಲ್ಲೆ
ಉಸಿರಾಡುತ್ತಾಳೆ..

ಕೊನೆಗೊಮ್ಮೆ
ತೊರೆದುಬಿಡುವ
ಅವನ
ಅಂದರೆ
ಗಂಡಿನ ಅಹಮ್ಮಿಕೆ
ಅವನ ಶಿಷ್ನದಿಂದಲೇ ನಿಗುರಿಕೊಳ್ಳುವಾಗ
ಮುಗ್ಧೆ ಆಗ ಕಣ್ಣು ತೆರದು
ಜಗತ್ತನ್ನು ದಿಟ್ಟಿಸುತ್ತಾಳೆ..

ಏನೆಲ್ಲಾ ಹುದುಗಿಸಿಕೊಂಡಿದೆ
ಈ ಬಡ ಜಗತ್ತು
ಶುದ್ಧ ಪ್ರೇಮವನ್ನುಳಿದು…
ಯೋಚಿಸುತ್ತಾಳೆ…

ಹಸಿದ ಮಾರುಕಟ್ಟೆ
ಕಣ್ಣಿಗೆ ರಾಚುತ್ತದೆ

ಗಾಢ ಹಸಿವಿನ ಬೇನೆ
ದುಡಿಯುವ ದರ್ದಿನ
ಪಾಠ ಹೇಳುತ್ತದೆ

ಎಲ್ಲ ಬಿಕರಿ ಇಲ್ಲಿ..

ಪ್ರೀತಿ ಪ್ರೇಮ ಕಾರುಣ್ಯ
ತೀರಾ ಸಸ್ತಾ ಮಾಲು…

‍ಲೇಖಕರು avadhi

2 April, 2023

1 Comment

  1. NAGARAJ KAMBLE

    chennagide.. more impressive

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading