ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾವಲುಗಾರನ ಮಗಳು…

ಕಾವಲುಗಾರನ ಮಗಳು…

ಎಂ.ಎಸ್.ಕೃಷ್ಣಮೂರ್ತಿ


ಮೊದಲ ಋತುಮತಿಯಾದ ಸಂಬ್ರಮಕ್ಕೆ
ಹೊರಗೋಡಿ ಬಂದವಳ ಮೋರೆಗೆ
ಮುಸ್ಸಂಜೆ ಸೂರ್ಯನ ಕೆಂಪು
ಕೆಂಪು ಮುಕ್ಕಳಿಸಿದಂತೆ
ಆಗಷ್ಟೆ ಹಚ್ಚಿಹೋದ ಚಿತೆಯ ಚಟಪಟ
ಮೊಳೆ ಮುರಿತ,ತಲೆ ಸಿಡಿತ
ಚಳಿ ಚಳಿಗೆ ನಡು ನಡುಗಿ
ಮೈಮುರಿದು ಮೈಕಾಯಿಸಿ
ಹಸಿ ಸಮಾದಿಯ ಊದುಗಡ್ಡಿ ಕಿತ್ತು
ಆಟವಾಡಿ
ಚಿಪ್ಪಿನ ಬಾಳೆಹಣ್ಣು ಸುಲಿ ಸುಲಿದು ತಿಂದು
ಚಿಕ್ಕ ಮನೆಯ ಹರುಕು ಚಾಪೆಯ ಮಲಗಿ
ರಾಜಕುಮಾರನ ಕನಸು ಕಾಣಹತ್ತಿದಳು
ಸ್ಮಶಾನದ ಕಾವಲುಗಾರನ ಮಗಳು…!!!
 
 

‍ಲೇಖಕರು avadhi

1 June, 2013

3 Comments

  1. Manjunath s

    Sir, kaviteya vastu gatti iddaroo, inneno bekittu annisitu, nimminda innastannu nireekshisutta du

    • M,S.Krishna Murthy

      ಧನ್ಯವಾದಗಳು, ಪ್ರಯತ್ನಿಸುತ್ತೇನೆ

  2. ಉದಯಕುಮಾರ್ ಹಬ್ಬು

    ಮನುಷ್ಯನ ಸಾವು ಬದುಕಾಗಿರುವ ಅನಿವಾರ್ಯತೆಯೇ ಅಲ್ಲಿ ಮೊಳೆಯುವ ಬದುಕಿನ ನಿಗೂಢತೆ. ಶ್ಮಶಾನಂಗಣವೇ ಬಾಲೆಗೆ ಹಗಲುಗನಸು ಕಾಣುವ ಬಯಲು.ಚೆನ್ನಾಗಿ,ಸರಳವಾಗಿ ಕವನ ಮೂಡಿಂದಿದೆ. ಉದಯಕುಮಾರ ಹಬ್ಬು,ಕಿನ್ನಿಗೋಳಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading