ನಾಗರಾಜ್ ಹರಪನಹಳ್ಳಿ
ಕಾಳಿ ನದಿಯ ಬೆಳಗುಗಳೇ ಹೀಗೆ. ತಣ್ಣಗೆ ಹರಿವ ನದಿಯಲ್ಲಿ ಬೆಳಗಾಗುವ ಮುನ್ನ ಪಾತಿ ದೋಣಿ ಹತ್ತಿ, ಹುಟ್ಟು ಹಾಕುತ್ತಾ ನದಿಯಲ್ಲಿ ಆಹಾರದ ಬೇಟೆ. ಈ ವಯೋವೃದ್ಧ ಆಗಾಗ ಕಾಣಿಸಿಕೊಂಡು ನನ್ನನ್ನು ಚಕಿತಗೊಳಿಸುತ್ತಾನೆ.

ಒಂದು ಕೈಯಲ್ಲಿ ಗಾಳ. ಮತ್ತೊಂದು ಕೈಯಲ್ಲಿ ಪಾತಿ ದೋಣಿ ನಡೆಸುವ ಹುಟ್ಟು. ನದಿಯಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ನಿಲ್ಲುವ ಪಾತಿ ದೋಣಿ. ನಂತರ ಮೀನು ಬೇಟೆ.
ಸ್ವಲ್ಪ ಹೊತ್ತಿನ ನಂತರ ನದಿ ದಂಡೆಯ ಕಲ್ಲು ಪೊಟರಿ ಸಂದುಗಳಲ್ಲಿ ಏಡಿಯ ಬೇಟೆ.
ದಂಡೆಯಲ್ಲಿ ಗಾಳ ಮತ್ತು ಹುಟ್ಟು ಹಿಡಿದು ಬೇಟೆಯ ಹುಡುಕಾಟ ಮಾಡುವ ಒಂದು ಕ್ಷಣ ಚಿತ್ರ ರೋಚಕವಾಗಿತ್ತು. ಮಧ್ಯೆ ದಾಹ ದಣಿವಾರಿಸಿಕೊಳ್ಳಲು ಒಮ್ಮೆ ನೀರು ಕುಡಿದು ಮತ್ತೆ ಕಾಯಕ ಮುಂದುವರಿಸಿದ ವಯೋವೃದ್ಧ. ಆತನ ಹಂಬಲ, ಛಲ ಮತ್ತು ಬದುಕುವ ಹಠ, ನದಿ ಗಾಳದೊಂದಿಗಿನ ಸಾನಿಧ್ಯ , ಅಪಾರ ಆತ್ಮ ವಿಶ್ವಾಸ…..
ಇವೆಲ್ಲಾ ಇವತ್ತಿನ ಬೆಳಗು ನನಗೆ ಸಿಕ್ಕ ಸಂಭ್ರಮ…









0 Comments