ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಲ ಮೀರುವ ಹರೆಯವಷ್ಟೇ ಕಡೆತನಕ ಉಳಿಯುವುದು….

– ಲಡಾಯಿ ಬಸು

ವಸಂತವೆಂದರೆ ಹೀಗಿರಬಹುದಾ ?

  ಒಡೆದ ತುಟಿಗಳಲಿ ನಗು ಅರಳಿ ಒಸರುವ ರಕ್ತ ನಿಲ್ಲುವುದು… ಭಾರ ಹೆಜ್ಜೆಗಳು ಭಾವ ತುಂಬಿ ನೆಲವ ನರ್ತನ ಮಾಡುವುದು … ಕೊನರಿದ ಕೊರಡಿನ ಚಿಗುರು ಮೈಚಾಚಿ ಕೇ ಕೇ ಹಾಕುವುದು … ಸೆರಗ ಪದರಿಗೆ ಕನಸು ತಾಕಿ ನೀ ಹೆಣ್ಣಾಗುವುದು …   ಕಡಲ ಒಡಲೊಳಗೆ ನದಿ ಸೇರಿ ಅಲೆಗಳ ಅಬ್ಬರ ಹೆಚ್ಚುವುದು ಇದ್ದದ್ದೇ ಬಂದ ಋತುಮಾನ ತಿರುಗುವ ಹೊತ್ತಿನಲ್ಲಿ ನಿನ್ನೆದುರು ನಿಂತಿರುವಾಗ ಹುಟ್ಟಿದ ಭಾಷೆ ಇದೊಂದೆ   ಕಾಲದ ಕಳವಳವನು ಕಣ್ತುಂಬಿಕೊಳ್ಳಬೇಡ ಹೊರಗಡೆಯ ವಸಂತ ಕರಗುವನು ಒಳಗಡೆಯ ವಸಂತ ಬೆಳೆಯುವನು ಕಡೆಗೊಂದು ಮಾತು ಗೆಳತಿ ಕಾಲ ಮೀರುವ ಹರೆಯವಷ್ಟೇ ಕಡೆತನಕ ಉಳಿಯುವುದು  ]]>

‍ಲೇಖಕರು G

9 March, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading