ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಲ

ಶಿವಯೋಗಿ ಕಳ್ಳಿಮಠ

ಮತ್ತಷ್ಟು ಕಾಲ‌
ಕೈಲಿರುವ ಕಾಲ
ಇದ್ದು ಬಿಡು
ಅವನಿರುವ
ಘಾಸಿಗೊಳಿಸದೆ.

ಈ ಕತ್ತಲ ರಾತ್ರಿಗೆ ಬೇಕಿಲ್ಲ
ಚಂದ್ರ.
ಚುಕ್ಕಿಯ ಹಂಗಿಲ್ಲ.
ಗಾಢ ವಾಗಿ ಮೂಡಬೇಕಿದೆ ಅವನು
ಹವಣಿಸಿ, ಬೆಚ್ಚಿಸಿ
ಕ್ಷಣಕ್ಕೂ ನೆತ್ತರಲಿ
ಪುಟಿಯುತ್ತ ಬೋರ್ಗರೆದು.

ಅವನೆ ನನ್ನ ಎದೆ ಮಧ್ಯಕ್ಕೆ
ಸೂರ್ಯ
ನನ್ನ ಹೊಕ್ಕಳ ಪದ್ಯಕ್ಕೆ
ಮುದಗೊಳ್ಳಬೇಕಿದೆ ಅವನು.
ಉದಯ ಅಸ್ತಮಾನದ
ಗೊಡವೆ‌‌ಯಿಲ್ಲದೆ
ನನ್ನೊಳಗೆ ಹರಿಯುತ್ತ..

ಕೊರೆವ ಗಾಳಿಗೆ
ತನು ಒಡ್ಡಿ
ಸುಡದ ಬೆಂಕಿಗೆ
ಕಾಯಬೇಕಿದೆ ನಾನು.
ಎದೆಗಪ್ಪಳಿಸಿದ ಭಯಗಳು
ಅವನ ಪಟ್ಟಿಗೆ
ಬಯಕೆಗಳಾಗಲು

ಅವನ ಕುರಿತು
ಹಾಡಿ
ಮೈ ದೂಳಿನಲಿ ಬೆರತು
ಮಣ್ಣಾಗಬೇಕಿದೆ ನಾನು
ಅವನ ಹಾಜರಿಯು
ಒಂಚೂರು ಬಿಡದೆ
ಸ್ಥಾಪನೆಯಾಗಲು

‍ಲೇಖಕರು Avadhi

8 April, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading