‘ಕಾರ್ಟೂನು ಹಬ್ಬ’ದಲ್ಲಿ ಮಹತ್ವದ ಜೀವಿಗಳು…

ಉದಯ ಗಾಂವಕರ್

ಉಡುಪಿ ಜಿಲ್ಲೆಯ ಕಟ್ಟ ಕಡೆಯ ಊರು. ಅಲ್ಲೊಂದು ಪುಟ್ಟ ಶಾಲೆ. ಆ ಶಾಲೆಯಿರುವುದೇ ಪಶ್ಚಿಮ ಘಟ್ಟದ ದಟ್ಟ ತಪ್ಪಲಲ್ಲಿ. ಆ ಶಾಲೆಯಾಚೆ ಕಾಡು. ಅದರಾಚೆಯೂ ಕಾಡು. ಕಾಡು..ಕಾಡು..ಕಾಡು. ಇಲ್ಲಿ ಕಾಡದೇ ಇರುವುದು ಶಾಲೆ ಮಾತ್ರ.

ಸುಜಾತಾ ಟೀಚರ್ ಕಾಡಿನ ನಡುವೆ ಇರುವ ಈ ಶಾಲೆಯ ಶಿಕ್ಷಕಿ. ಕೇವಲ ತಳಸಮುದಾಯದ ಅರಣ್ಯವಾಸಿಗಳ ಮಕ್ಕಳಷ್ಟೇ ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಈ ಶಾಲೆ ಕುಂದಾಪುರದ ಉತ್ತಮ ಶಾಲೆಗಳಲ್ಲೊಂದಾಗಿರುವುದಕ್ಕೆ ಸುಜಾತರವರ ವೃತ್ತಿಪ್ರೀತಿ ಕಾರಣ.

ಅಮಾಸೆಬೈಲು ಶಾಲೆಯನ್ನು ನೋಡಲು ಬೇರೆ ಬೇರೆ ಕಡೆಯಿಂದ ಶಿಕ್ಷಣಾಸಕ್ತರು ಬರುತ್ತಿದ್ದಾರೆ. ಊರ ದಾನಿಗಳ ನೆರವು ಪಡೆದು ಆದರ್ಶ ಶಾಲೆಯನ್ನು ಕಟ್ಟಿದ ಶ್ರೇಯ ಶೇಖರ್ ರವರಿಗೆ ಸಲ್ಲಬೇಕು. ಸಹಕಾರ, ನೆರವು ಎಲ್ಲವೂ ಗ್ರಾಮಸ್ಥರದ್ದು. ಆದರೆ, ನೆರವು ಪಡೆಯಲು ಇಷ್ಟಗಲ ಚಾಚಿದ ತೋಳುಗಳು ಶೇಖರದು. ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಶಾಲೆಯ ಎಲ್ಲ ಮಕ್ಕಳನ್ನೂ ತಲುಪಲು ವಿಭಿನ್ನ ಮಾರ್ಗಗಳನ್ನು ಅನುಸರಿಸಿದರು Ananda ತಪ್ಪಲು. ಶಾಲೆಯನ್ನು ಭೌತಿಕ ಗಡಿಗಳಾಚೆ ವಿಸ್ತರಿಸಿದವರು. ತಮ್ಮೆಲ್ಲ ಶಿಕ್ಷಕರಿಗೂ ಹಾಗೆ ವಿಸ್ತರಿಸಿಕೊಳ್ಳಲು ಪ್ರೇರೇಪಿಸಿದವರು.‍

ಮೊದಲು ಮೂರು ಫೋನ್ ಬಳಸಿ ಹದಿನೈದಕ್ಕೂ ಹೆಚ್ಚು ಮಕ್ಕಳಿಗೆ ಕಾನ್ಫರೆನ್ಸ್ ಕಾಲ್ ಮಾಡುತ್ತಿದ್ದರು. ನಂತರ ಗೂಗಲ್ ಮೀಟ್, ಟೀಚ್ ಮಿಂಟ್ app ಗಳಲ್ಲಿ ಮಕ್ಕಳನ್ನು ತಲುಪಿದರು. ಬೈಲೂರು ಶಾಲೆಯ ಮಕ್ಕಳಿಗೆ ಲಾಕ್ ಡೌನ್ ನಲ್ಲಿ ಒಂದು ಹೊಸ ಜಗತ್ತು ಪರಿಚಯವಾಗಿದ್ದರೆ ಅದಕ್ಕೆ ಅವರ ಶಿಕ್ಷಕ- ಶಿಕ್ಷಕಿಯರು ಕಾರಣ. ಆನಂದರವರ ಪ್ರೇರಣೆ ದೊಡ್ಡದು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸುತ್ತಿರುವವರೂ ಅಪರೂಪದ ಸಾಧಕಿ. ನಮ್ಮ Roshan ಮೇಡಮ್. ಕಳೆದ ಇಪ್ಪತೈದು ವರ್ಷಗಳ ಹಾಲಾಡಿಯ ಶೈಕ್ಷಣಿಕ ಗೆಲುವುಗಳೆಲ್ಲವೂ ರೋಷನ್ ಮೇಡಮ್ ರವರಿಗೆ ಋಣಿಯಾಗಿರುತ್ತದೆ. ಮೆದು ಮಾತು, ಸಂಕೋಚದ ರೋಷನ್ ಮೇಡಮ್ ತನ್ನ ಘನತೆಯ ಹೆಜ್ಜೆಗಳಲ್ಲಿ ದೊಡ್ಡ ಕದಲಿಕೆಗೆ ಕಾರಣರಾದವರು.

ಹಾಗೆಯೇ ಮಕ್ಕಳ ಜೊತೆ ಕೆಲಸ ಮಾಡುವ ನಮಗೆಲ್ಲ ಮಾರ್ಗದರ್ಶನ ನೀಡುತ್ತಾ ಬಂದಿರುವ ಡಾ.ವಿರೂಪಾಕ್ಷ ದೇವರಮನೆ ಮಕ್ಕಳ ಕಾರ್ಟೂನು ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾರೆ. ಎಷ್ಟು ಖುಷಿ.

‍ಲೇಖಕರು Admin

November 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: