-ಜಯಲಕ್ಷ್ಮೀ ಪಾಟೀಲ್.
ಶಿವರಾಮ ಕಾರಂತರಂತಹ ಬಹುಮುಖಿ ವ್ಯಕ್ತಿತ್ವವು ವಿಶ್ವದೆಲ್ಲೆಡೆ ಪರಿಚಯವಾಗಬೇಕು ಹಾಗೂ ಅವರ ಎಲ್ಲ ಸಾಹಿತ್ಯ ಹಾಗೂ ಚಿಂತನೆಗಳು ಉಚಿತವಾಗಿ ಜಗತ್ತಿನೆಲ್ಲೆಡೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ www.shivaramkarantha.in ಎಂಬ ವೆಬ್ ಸೈಟನ್ನು ಸೃಜಿಸಲಾಗಿದೆ.
ಈ ವೆಬ್ ಸೈಟಿನ ಮೂಲಕ ಶಿವರಾಮ ಕಾರಂತರ ಸುಮಾರು ನಲವತ್ತು ಸಾವಿರ ಪುಟಗಳಷ್ಟು ಸಾಹಿತ್ಯ, ಹತ್ತು ಸಾವಿರ ಪುಟಗಳಷ್ಟು ಹಸ್ತಪ್ರತಿಗಳು, ವಿಡಿಯೋಗಳು, ಚಿತ್ತಗಳು ಜಗತ್ತಿನೆಲ್ಲೆಡೆ ಉಚಿತವಾಗಿ ವೀಕ್ಷಿಸಲು ಹಾಗೂ ಓದಲು ಜಗತ್ತಿನೆಲ್ಲೆಡೆ ಲಭ್ಯವಾಗಲಿವೆ.
ಈ ವೆಬ್ ಸೈಟಿನ ಜೊತೆ ಶಿವರಾಮ ಕಾರಂತರ ವಿಶಿಷ್ಟ ಹಾಗೂ ಜಗದೇಕ ಸೃಷ್ಟಿಯಾದ ಯಕ್ಷಗಾನ ಬ್ಯಾಲೆಯ ಸಿಡಿಗಳು ಅಭಿಮಾನಿಗಳಿಗೆ ಲಭ್ಯವಿವೆ. ಈ ಸಿ.ಡಿಗಳು ಅತ್ಯಂತ ಅಪರೂಪದವುಗಳಾಗಿದ್ದು ಜಗತ್ತಿನ ಯಾವ ಭಾಗದಲ್ಲೂ ಲಭ್ಯವಿಲ್ಲ. ಕಾರಂತರ ವೆಬ್ ಸೈಟ್ ನ ವಿನ್ಯಾಸದ ಹಾಗೂ ಅಭಿವೃದ್ಧಿಯ ವೆಚ್ಚಕ್ಕಾಗಿ ಈ ಸಿಡಿಗಳ ಮಾರಾಟದಿಂದ ಬರುವ ಸಂಪೂರ್ಣ ಹಣವನ್ನು ವಿನಿಯೋಗಿಲು ಉದ್ದೇಶಿಲಾಗಿದೆ.
ಸಿಡಿಗಳಲ್ಲಿ ಸ್ವತಃ ಕಾರಂತರೇ ನಿರ್ದೇಶಿಸಿದ ಹಾಗೂ ವಿವರಣೆ ನೀಡಿದ ಯಕ್ಷಗಾನ ಬ್ಯಾಲೆಗಳ ವಿಡಿಯೋ ಇವೆ. ಒಂದು ಸೆಟ್ ನಲ್ಲಿ ಐದು ಸಿಡಿಗಳಿದ್ದು ಸಿಡಿಗಳಲ್ಲಿರುವ ವಿಡಿಯೋಗಳು ಹೀಗಿವೆ,
೧. ರಾಮಾಯಣ
೨. ಗಯನ ಚರಿತ್ರೆ
೩. ಕನಕಾಂಗಿ ಕಲ್ಯಾಣ.
೪. ಚಿತ್ರಾಂಗದಾ.
೫. ನಳದಮಯಂತಿ.
ಈ ಸಿಡಿ ಗಳು ಅತ್ಯಂತ ನಿಯಮಿತ ಸಂಖ್ಯೆಯಲ್ಲಿ ಮಾತ್ರ ಲಭ್ಯವಿದ್ದು ಮೊದಲು ಬಂದವರಿಗೆ ಆದ್ಯತೆ ಮೇಲೆ ನೀಡಲಾಗುತ್ತದೆ. ಒಂದು ಸೆಟ್ ನಲ್ಲಿ ಐದು ಸಿಡಿಗಳಿದ್ದು ಒಂದು ಸೆಟ್ ನ ಬೆಲೆ ರೂ.೫೦೦/- ಮಾತ್ರ.
ಸಿಡಿಗಳು ಬೇಕಿರುವ ಅಭಿಮಾನಿಗಳು ತಮ್ಮ ವಿಳಾಸವನ್ನು ಹಾಗೂ ತಲುಪಿಸಬೇಕಾದ ಸಮಯವನ್ನು ಬರೆಯಬಹುದು. ಮನೆಗೆ ಸಿಡಿಗಳನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುವುದು. thesalimath@gmail.com ಗೆ ಮೇಲ್ ಮಾಡಿ
http://www.shivaramkarantha.in/]]>
ಕಾರಂತ ಬ್ಯಾಲೆ : ಹೆಚ್ಚಿನ ಮಾಹಿತಿ
ನಿಮಗೆ ಇವೂ ಇಷ್ಟವಾಗಬಹುದು…





0 Comments