ಆನಂದ ಭೋವಿ

ಕಾಯ್ದು ಕೆಂಡವಾಗಿದ್ದೇನೆ
ನೀ ಸುರಿಯುತ್ತಿದ್ದರೂ
ಕಾಯ್ದು ಕೆಂಡವಾಗಿದ್ದೆನೆ
ಪದರು ಪದರುನಲಿ ಆರಿಹೋದ
ಲಾವಾರಸ ನಿನ್ನ ತಣ್ಣೀರು ಕುಡಿದು
ಹುಚ್ಚೆದ್ದು ಕುದಿಯುತಿದೆ
ತುಳಿದು ತುಳಿದು ಸವಿದ
ಎದೆಯಲಿ ಹೆಪ್ಪುಗಟ್ಟಿದ ರಕ್ತ
ಬಿಸಿಯಾಗಿ ಬಿರುಕು ಬಿಟ್ಟಿದೆ
ಮುಚ್ಚಿಕೊಂಡ ಸೊಟ್ಟ ಮೂತಿ
ಮಣ್ಣನೆಲ್ಲಾ ಸಾರಿಸಿ ತೊಳೆದು
ಬಣ್ಣ ಮೆತ್ತಿ ಉರಿಯುತಿದೆ
ಅಟ್ಟಾಡಿಸಿ ಕಟೆದ ಏಟು
ಕತ್ತರಿಸಿದ ತುಂಡು ಗಾಯ
ಕಿವು ಬಸಿದು ಸೊರುತಿದೆ
ಕಾಯ್ದು ಕಪ್ಪಾಗಾದ ಕಪಾಳದ
ಮೇಲೆ ನೀ ಮೆತ್ತಿದ ನೆನಪು
ಕಾಣದೆ ಕಳೆದು ಹೋಗಿದೆ
ಬೆತ್ತಲಿದ್ದರೂ ಬಾಗದ ಬೆನ್ನು
ಅಂಗಾತ ಉರಳಾಡಿ
ಸಿಡಿದು ಚುರಾಗಿದೆ
ಸಾಕು ನಿಲ್ಲಿಸಿ ಬಿಡು
ಸುರಿಯಬೇಡ ಕಾಯ್ದ ನನ್ನ
ದಾಹಕ್ಕೆ ಚೂರು ನೀನು.






nice…..