
ಇಂಡಿಯನ್ ಫ಼ೌಂಡೇಶನ್ ಫ಼ಾರ್ ದ ಆರ್ಟ್ಸ್ ವತಿಯಿಂದ ನನಗೆ ಪ್ರಾಜೆಕ್ಟ್ 560 ಗ್ರಾಂಟ್ ನೀಡಲಾಗಿದ್ದು ಅದು ಬೆಂಗಳೂರಿನ ಕಾಫ಼ಿ ಕೆಫ಼ೆಯ ಕುರಿತದ್ದಾಗಿದೆ.
ಅದರ ಶೀರ್ಷಿಕೆ ಒಂದು ಲೆಸ್ಸು ಒಂದು ಪ್ಲಸ್ಸು. ಬೆಂಗಳೂರಿನ ಕಾಫ಼ಿ ಕೆಫ಼ೆಗಳ ಚರಿತ್ರೆ, ಜೊತೆಗೆ ಅದು ಜನ ಸಂಸ್ಕೃತಿಯ ಮೇಲೆ – ಭಾಷೆ, ತಿಂಡಿ ಊಟದ ರೀತಿ ಇತ್ಯಾದಿ – ಮಾಡಿದ ಪರಿಣಾಮ ಹಾಗೂ ಅದು ಸಾಹಿತ್ಯದಲ್ಲಿ ಪ್ರತಿಬಿಂಬಿತವಾದ ಬಗೆ ಎಲ್ಲವನ್ನೂ ಕುರಿತ ಕಾರ್ಯಕ್ರಮವಾಗಿದ್ದು, ಇದರಲ್ಲಿ ಪ್ರತಿಭಾ ನಂದಕುಮಾರ್ ಕಾಫ಼ಿ ಕವನಗಳನ್ನು ವಾಚಿಸುತ್ತಾರೆ, ಕವನಗಳ ನಾಟಕೀಯ ಪ್ರಸ್ತುತಿ ಇರುತ್ತದೆ.
ಇದರ ಅಂತಿಮ ಷೋಗಳು ಡಿಸೆಂಬರ್ 11, 12, 13 ಐ ಎಫ಼್ ಎ ಏರ್ಪಡಿಸುವ ಬೆಂಗಳೂರು ಉತ್ಸವದ ಭಾಗವಾಗಿರುತ್ತದೆ. ಅದರಲ್ಲಿ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ಒಂದು ಬೃಹತ್ ಶಿಲ್ಪವನ್ನೂ ಮಾಡಲಿದ್ದಾರೆ.
ಅದರ ಪೂರ್ವಭಾವಿಯಾಗಿ ದಿನಾಂಕ 16 ಸೋಮವಾರ 2015 ರಂದು ಆದಿತ್ಯ ಕೆಫ಼ೆ, ಪುಟ್ಟೇನಹಳ್ಳಿ ಮುಖ್ಯರಸ್ತೆ, ಬ್ರಿಗೇಡ್ ಮಿಲೇನಿಯಂ ಎದುರು ಸಂಜೆ ಆರರಿಂದ ಏಳು ಗಂಟೆಯವರೆಗೆ ಪ್ರತಿಭಾ ನಂದಕುಮಾರ್ ಅವರ ಕಾಫ಼ಿ ಕವನ ವಾಚನ, ಜನಪ್ರಿಯ ಕಿರುಚಿತ್ರ ” ಫಟಿಂಗ” ದ ನಾಯಕ ಪೂರ್ಣಚಂದ್ರ ಮೈಸೂರು, ಇತ್ತೀಚಿನ ಜನಪ್ರಿಯ ” ಬಾರಿಸು ಕನ್ನಡ ಡಿಂಡಿಮ…”ದ ಖ್ಯಾತಿಯ ನಾಗಭೂಷಣ ಎನ್ ಎಸ್ ಹಾಗೂ ಕಥಕ್ ನೃತ್ಯಗಾತಿ ವಾಣಿ ಭಟ್ ಮುಂತಾದವರು ” ಇಂಟಿಮೇಟ್ ಥಿಯೇಟರ್” ಎನ್ನುವ ಹೊಸ ಪರಿಕಲ್ಪನೆಯಲ್ಲಿ ನೈಜ / ನಾಟಕೀಯ ಪ್ರಸ್ತುತಿ ನೀಡುತ್ತಾರೆ.
ತಮ್ಮ ವಿಶ್ವಾಸಿ







Great going . All the best