ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಣದ ವೈರಿಯ ಜೊತೆ..

~ ವಿಜಯ್ ಅಬ್ಬಿಗೇರಿ

ಯುದ್ಧವಂತೆ
ಕಾಣದ ವೈರಿಯ ಜೊತೆ
ಬಂದಿಯಾಗಿರಬೇಕು ಕೋಟೆಯೊಳಗೆ
ಎದುರಿಸುವಂತಿಲ್ಲ ಎದೆಯುಬ್ಬಿಸಿ

ಒಳನುಸುಳಿದ್ದಾರಂತೆ ವೈರಿಗಳು
ಕಂಡವರಿಲ್ಲ ಯಾರು
ಹೊಕ್ಕಿದ್ದಾರಂತೆ ನಮ್ಮವರೊಳಗೆ
ಗುರುತಿಸಲು ಸರಕಾರದ ಠಸ್ಸೆ
ಎಚ್ಚರ ಹತ್ತಿರ ಹೋದರೆ
ಆಕ್ರಮಿಸಿ ದೇಹವ
ಬಲಪಡಿಸಿ ಕೊಳ್ಳುವರಂತೆ
ವೈರಿಗಳು ಸೈನ್ಯವ

ಯುದ್ಧವಂತೆ ಆದರೆ
ಸುಲಭವಿಲ್ಲ ಯುದ್ಧದಷ್ಟು
ವೈರಿಯ ಎದೆ ಸೀಳಿ
ಬೊಬ್ಬಿರುದು ಆರ್ಭಟಿಸುವಂತಿಲ್ಲ
ಯಾಕೆಂದರೆ ಠಸ್ಸೆ ಒತ್ತಿಸಿಕೊಂಡವರು
ನಮ್ಮಲ್ಲೊಬ್ಬರ ಒಡ ಹುಟ್ಟಿದವರೆ

ಯುದ್ಧಕ್ಕಿಂತಲು ಭೀಕರ
ಕಾಯುತ್ತಿರುವರು ಸೈನಿಕರು ಕೋಟೆ ಬಾಗಿಲು
ಹೊರಗೆ ಕಾಲಿಟ್ಟವರ ಒಳದಬ್ಬಲು
ಕೋಟೆಯೊಳಗೊ ಅನಿಶ್ಚಿತತೆ
ಹಸಿದ ಹೊಟ್ಟೆಗಳು
ಬಳಲಿದ ದೇಹಗಳು
ಏರುತ್ತಿರುವ ಸಾವಿನ ಸಂಖ್ಯೆ
ಯುದ್ಧವಂತೆ
ಕಾಣದ ವೈರಿಯ ಜೊತೆ!

 

‍ಲೇಖಕರು avadhi

28 March, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading