ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡುತ್ತಿದ್ದಾಳೆ `ಗಜಲ್' ಕೊನೆ ಸಾಲಿನಂತೆ..

ಗಜಲ್

ಪ್ರಕಾಶ್ ಬಿ ಜಾಲಹಳ್ಳಿ


ಮಡಿ ಯಾವುದು ಮೈಲಿಗೆ ಯಾವುದು ಮನಸು ಒಪ್ಪಿದ ಬಳಿಕ
ಲೋಕದ ಮಾತೇಕೆ ದೂರವಿದ್ದರೂ ಹೃದಯ ಹೃದಯ ಅಪ್ಪಿದ ಬಳಿಕ
 
ಎಷ್ಟು ತಾಳ್ಮೆ ಅವಳಿಗೆ ಅಳು ನುಂಗಿ ನಗುತ್ತಾಳವಳು ನನ್ನ ಮುಂದೆ
ಕಾಯುವುದರಲ್ಲಿ ಜಾನಕಿಗಿಂತ ಗಟ್ಟಿಗಳು ಕಣ್ಣ ತುಂಬ ಕನಸು ತಬ್ಬಿದ ಬಳಿಕ
 
ಮನದ ಬಯಕೆಗಳ ಹೂವಾಗಿ ಪೋಣಿಸುತ್ತಿದ್ದಾಳೆ ಅವನಿಗಾಗಿ
ವಯಸ್ಸಿನ ಪರಿವೆಯಿಲ್ಲ ಮೊಹಬ್ಬತ್ಗೆ ಮಾತು ತುಟಿ ತಬ್ಬಿದ ಬಳಿಕ
 
ಮೂರು ಗಂಟು ಬಿಗಿಯದೆ ಇರಬಹುದು ನೂರು ಗಂಟು ಬೆಸೆದಿವೆ ಮನಸ ತುಂಬ
ಗುಟುಕು ಪ್ರೀತಿಯ ಪ್ರತಿ ಕ್ಷಣ ಕೊಡುತ್ತಾಳೆ ಕೂಸಂತೆ ನನ್ನ ಅಪ್ಪಿದ ಬಳಿಕ
 
ಮಗ್ಗಲು ಇಲ್ಲದ ಮಾತಲ್ಲೂ ಕಾಡುತ್ತಿದ್ದಾಳೆ `ಗಜಲ್’ ಕೊನೆ ಸಾಲಂತೆ
`ಪ್ರಕಾಶ’ ಹುಚ್ಚು ಪ್ರೀತಿಗೆ ಮತ್ತೆ ಮತ್ತೆ ತಿರುಗಬೇಕು ಅವಳು ಹೋದ ಬಳಿಕ
 

‍ಲೇಖಕರು G

27 June, 2015

2 Comments

  1. basavanneppa.kambar

    super

  2. mmshaik

    nice gazal..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading