ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾಡಿಸುವಷ್ಟು ಕಾಯುತ್ತೇನೆ..

ಚಲಪತಿ ವಿ

ಅವಳಿಗೋ ಕಾಡಿಸುವಷ್ಟು ಕರುಣೆಯಿದೆ
ನನಗೋ ಕಾಯುವಷ್ಟು ಬಯಕೆಯಿದೆ
ಮನದ ಇಂಗಿತಕೆ
ನೆಲದ ಬಿಂಬ ಬೀರುವಷ್ಟು ಬಾಯಾರಿಕೆ

ಮಿತಿಮೀರಿದ ಪ್ರೀತಿಗೆ ಇತಿಗಳಿಲ್ಲ
ತಬ್ಬಿ ಬಾಚುವಷ್ಟು ಸಲುಗೆ
ಒಮ್ಮೆಯೂ ಸ್ಪರ್ಷದ ಸಂಘರ್ಷ ಇಲ್ಲ
ಅನಿರ್ದಿಷ್ಟ ಆತ್ಮಕೆ, ಬೇಕಿಲ್ಲ ಇದ್ಯಾವುದು

ಸಾಕ್ಷಿಯೂ ಒದ್ದಾಡಿ ಸಾಯುತ್ತದೆ
ಅವಳ ನೆನಪ ಸಾಲ ಮಾಡಿ
ಮರೆಯುವ ಪ್ರಶ್ನೆಗಳಷ್ಟು
ನಿರೀಕ್ಷೆಗಳು ಸುಳ್ಳಾಗುವುದಿಲ್ಲ, ನಿಜ

ಅವಳ ಕಣ್ಣು ಕಾಡುವಷ್ಟು
ಕಾಡಿಲ್ಲ ಇನ್ಯಾವುದು
ಭ್ರಮೆಗಳಲ್ಲಿ ಬದುಕುವುದು
ಈಗೀಗ ಅಭ್ಯಾಸ, ಅವಳ ಕೃಪೆ

ನನ್ನ ನೆನಪಿಗೆ ನೀನು ಕಾಯಬೇಡ
ನೀನು ಕಾಡಿಸುವಷ್ಟು ಕಾಯುತ್ತೇನೆ ವಾಸ್ತವಕೆ

‍ಲೇಖಕರು avadhi

4 June, 2019

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading