ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿ ಜೋಗಿ ಬರುತ್ತಿದ್ದಾರೆ ದಾರಿ ಬಿಡಿ…

ಜೋಗಿ ಕವಿತೆ ಬರೀತಾರೆ ಅನ್ನೋದು ನಮಗಂತೂ ಗೊತ್ತಿರಲಿಲ್ಲ. ದಿಢೀರನೆ ‘ಮುಸ್ಸಂಜೆಗಳನ್ನು ಮನ್ನಾ ಮಾಡಲಾಗಿದೆ’ ಎಂಬ ಕವಿತೆಯನ್ನು ನಮ್ಮತ್ತ ತೂರಿಬಿಟ್ಟಿದ್ದಾರೆ. ವಿಮರ್ಶಕ ಜೋಗಿ ಯಾಕೆ ಎಲ್ಲರಿಗೂ ಇಷ್ಟವಾಗುತ್ತಾರೆ ಎಂದರೆ ಅವರಿಗೆ ಕಥೆ, ಕವಿತೆ, ಪ್ರಬಂಧ ಬರೆಯುವ ಕಷ್ಟ ಗೊತ್ತಿದೆ. ಹಾಗಾಗಿಯೇ ವಿಮರ್ಶೆ ನೆಲದಲ್ಲಿ ಬೇರು ಬಿಟ್ಟಿದೆ. ಅದು ಹೇಗಾದರೂ ಇರಲಿ. ಕವಿ ಜೋಗಿ ಬರುತ್ತಿದ್ದಾರೆ ದಾರಿ ಬಿಡಿ…

ಮುಸ್ಸಂಜೆಗಳನ್ನು ಮನ್ನಾ ಮಾಡಲಾಗಿದೆ

ಕನ್ನಡಿಯಲ್ಲಿ ಕಂಡ
ಕೆಂಡ
ಸಂಪಿಗೆಗೆ
ವಾಸನೆಯಿಲ್ಲ, ಬರೀ ಬಣ್ಣ.
ವಯಸ್ಸಾಗುತ್ತಾ
ಉಡುಗುತ್ತದೆ ನಡು ಹೆಜ್ಜೆ
ಪಂಚೇದ್ರಿಯಗಳೂ
ಜೀವಕ್ಕೆ ಒಜ್ಜೆ
ಗರುಡಗಂಬಕ್ಕೆ
ಜೋತುಬಿದ್ದ ಹರೆಯದ
ತುಂಡುಲಂಗಕ್ಕೆ
ಕಾಸು ಕೈಲಾಸ, ಕಾಯಕ
ಮನೋವಿಲಾಸ.
ಅವಳ ಎಸ್ಸೆಮ್ಮೆಸ್ಸು ಬಂತೆಂದರೆ
ಸೆಲ್‌ಫೋನಿಗೆ ವೈಬ್ರೇಷನ್ನು.
ಚಿತ್ರದುರ್ಗದ ಬೆಟ್ಟದ ಮೇಲೆ
ಗಾಳಿಯಂತ್ರ.
ಗುಡ್ಡಕ್ಕೂ ಚಳಿ
ವಾರಕ್ಕೆರಡು ರಜೆ
ಭಾನುವಾರ ಮನೆಮಂದಿಗೆ
ಶನಿವಾರ ಸಂಜೆ
ಅವಳೊಂದಿಗೆ
ಪಡಪೋಶಿ ಕತೆಗಾರನಿಗೆ
ಕವಿತೆ ಅಲರ್ಜಿ.
ಶೃಂಗಾರಶಯ್ಯೆಯಲ್ಲಿ
ಮನೋರಮೆಯೊಂದಿಗೆ
ಮುದ್ದಣನಿಲ್ಲ.
ಸಲ್ಲಾಪಕ್ಕಂತೂ ಅಡ್ಡಿಯಿಲ್ಲ.

‍ಲೇಖಕರು avadhi

7 June, 2008

2 Comments

  1. malathi S

    WOW. kyaa baat hai.:-)

  2. Harish kera

    Dear Jogi,
    Garudagamba, vibration, shrungarashayye…
    ha ha !
    yaru helidaru nimage vayassaguttide endu ?
    -Harish kera

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading