ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕವಿಯ ಹೊಕ್ಕುಳಿನಿಂದ ಮಳೆಯ ಸೊಗಡಿನ ಹೂ ಬಿರಿದು..’ – ನಳಿನ

ಮಳೆಗಾಲದ ರಸಕಾವ್ಯ

ನಳಿನ ಡಿ

ರಸಿಕತೆಯ ರಂಗಿಗೆ,
ಪಿಸುಗುಡುವ ಪ್ರೇಮಸಲ್ಲಾಪದೊಳು
ಕುಡಿಯೊಡೆಯುತಿರಲು,
ಜಾವದ ಚಳಿಗೆ ಮುಸುಕಿದ ಮಂಜಿಗೆ
ಇನಿಯನ ಅಪ್ಪುಗೆಯ ಸೆರೆ ಹಿತವಾಗಿದೆ.
ಕನಿಕರಪಡುವ ಮಿಂಚಿಗೆ, ಮೋಡದೆದುರು
ಕೆಲಸವಿಲ್ಲದೆ ಅಲ್ಲೆಲ್ಲೋ ಡಮಡಮಿಸಿ
ದೂರವಿರುವಾಸೆ,

ದೂರದಿ ಭದ್ರೆ ಬೆಟ್ಟತೊಳೆದು
ಹೊಟ್ಟು ಧೂಳು ಒತ್ತಟ್ಟಿಗೆ
ತೇಲಿಸಿಕೊಂಡು ಹರಿಯುವ ಸಂಭ್ರಮ,
 
ಕೊಳಕು ತೋಯ್ದ ಕಾಡ
ಹಸಿರೆಲೆಯ ನಡುವೆ ನಿಂತ ಹನಿಯು
ಫಳ್ ಗುಡುತಿದೆ.
 
ದೂರದಿ ಸಾಗಿ ಬಂದು ಮರಿಪಿಳ್ಳೆಗಳ
ತೆರೆದ ಬಾಯಿಗೆ ತುಂಬುತ್ತಿದೆ ತುತ್ತು
ಪಿಕರಾಳ ಹಕ್ಕಿ.
 
ಕೋಗಿಲೆ ಅಲ್ಲೆಲ್ಲಿದೆಯೋ?
ಮರಗಿಡಗಳೊಳಗಿನಿಂದ
ಗಾನ ಉಲಿದು ಗಂದರ್ವರನ್ನು
ಭೂಮಿಗಿಳಿಸುತಿದೆ.
 
ಸೌಂಧರ್ಯ ಸವಿಯಲು ರಸಿಕನಿಗೆ
ಪ್ರಕೃತಿಗಿಂತ ಅನ್ಯಸ್ಥಳವೇಕೆ?
ಕವಿಯ ಹೊಕ್ಕುಳಿನಿಂದ ಮಳೆಯ ಸೊಗಡಿನ ಹೂ ಬಿರಿದು
ನಗಲು, ಹುಟ್ಟಿದ ಕವಿತೆಯೊಂದು
ಹೊಸ ಭಾಷ್ಯ ಬೇಕೆ?
 

‍ಲೇಖಕರು G

15 August, 2014

1 Comment

  1. sangeetha raviraj

    Chennagide kavite

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading