ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿತೆ -“ಕನ್ನೆ ಒಲಿದಾಗ ಕವಿತೆ”

ನಂದಿನಿ ಹೆದ್ದುರ್ಗ

ಇನ್ನೇನು ಇವಳ ಕನ್ನೆತನ ತನ್ನ
ಪಾಲಾಯಿತೆಂದು
ಕಿವಿ ಮೂಗು ನೀವಿ
ಕತ್ತು‌ನೇವರಿಸಿ ಮುತ್ತಿಕ್ಕಿ
ತೋಳು ಸೆಳೆದು
ಬಲವಂತದಲಿ ಬಳಸಿ
ಬೊಗಸೆ ಕಣ್ಣಿನ
ಒಳಸೊಗಸ ಕುಡಿಯುತ್ತೇನೆ.
ಸೆಟೆದ ಹೆಣ್ಣಿನ ಒಲುಮೆಗೆ ಹಾತೊರೆದು
ಮೊಲೆ ಮೈ ತಡಕಿ
ಬೆರಳ ತುದಿ ಹಿಸುಕಿ
ಬಯಲು ಬಾನಿಗೆಲ್ಲಾ ಬಾಯೊಡ್ಡಿ
ತೃಷೆಗೆ ಪಶುವಾಗುತ್ತೇನೆ.
ಕೆರಳಿ ಅವಳು
ಕನಲುವಾಗೆಲ್ಲಾ ಕಾದ ಕಣಿವೆಯ
ಹಾದಿ ನನ್ನದು.
ಕಾಲು ದಾರಿಯಲ್ಲಿ ಸಾಗಿ
ಇಳಿದು ಹತ್ತಿ ,ಹತ್ತಿ ಇಳಿದು
ಬೆವರಿ
ತೆರೆಯದ ಗುಡಿ ಕದವ
ನೋಡಿ ತಟ್ಟುತ್ತೇನೆ ಮೆಲ್ಲ..
ಸವರುತ್ತಾ ನನ್ನ ಒರಟು ಗಲ್ಲ
ಬೇಡಿ ಕರೆದರೆ ಬಾಗಿಲು ತೆರೆಯದ
ದೇವಿಯೇ ಇಲ್ಲ…
ಊರುಗೋಲಿನ ಸದ್ದು
ಜೋರಾಗುತ್ತಲೇ
ಅಲ್ಲಿ
ಕಿಲಕಿಲ ನಕ್ಕ ಸದ್ದು…

“ವಶವಾಗಿದ್ದು ನಾನಲ್ಲ’
ಹುಸಿಮುನಿದು ಪಿಸುಗುಡುತ್ತಾಳೆ.

ಚಿರಕನ್ನೆ ಕವಿತೆ
ಅವಳ ಕನಸಿ ಕನವರಿಸಿದ್ದೆ
ನನ್ನ ಪಾಲಿಗೆ ಕಾವ್ಯ ಅಷ್ಟೆ..

‍ಲೇಖಕರು Avadhi

29 October, 2020

1 Comment

  1. T S SHRAVANA KUMARI

    ಚಂದದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading