ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿತೆಗಳೊಂದಿಗೆ ಫ್ಲರ್ಟ್ ಮಾಡುವುದು ಸುಲಭದ ಮಾತಲ್ಲ..

 

 

ಪ್ಯಾರಡಾಕ್ಸುಗಳು

ಭುವನಾ ಹಿರೇಮಠ

 

 

 

 

ಕವಿತೆಗಳೊಂದಿಗೆ ಫ್ಲರ್ಟ್ ಮಾಡುವುದು
ಸುಲಭದ ಮಾತಲ್ಲ,
‘ಕಣ್ಣ ಚಿತ್ತ ಕಣ್ಣ ಮಾಯಿ’

ಈಗೀಗ ಗಂಟಲು ಒಣಗುವುದಿಲ್ಲ
ಆ ಕವಿತೆಯ ಕಣ್ಣಿಗೋ, ತುಟಿಗೋ
ಅಂಟಿಕೊಂಡ ಪದಗಳನ್ನೇ
ಕುಡಿದು ಕುಡಿದು
ಉನ್ಮತ್ತಳಾಗುತ್ತೇನೆ.

ಪ್ಯಾರಡಾಕ್ಸುಗಳು ಕಾಲು ಮುಂದುಮಾಡಿ
ಜನಿಸಿದ ಕೂಸುಗಳು,
ಕತ್ತು ಹಿಸುಕದೆ ಸೂಲಗಿತ್ತಿಗೆ
ಮುಕ್ತಿಯೇ ಇಲ್ಲ,
ಪ್ರೀತಿಸದೇ ಯಾವ ಜೀವವನ್ನೂ
ಮೊಂಡು ಮಾಡಲಾಗುವುದಿಲ್ಲ.

ಅಗ್ನಿದಿವ್ಯದಲ್ಲಿ ಬೆರಳಿನ ಜೊತೆ ಪದ,
ಪದದ ಜೊತೆ ಮನಸು,
ರೂಪಕದೊಂದಿಗೆ ಸತ್ಯ
ನಗ್ನವಾಗಿ ಹಾರಿದರೂ
ಹೌಹಾರಬೇಕಿಲ್ಲ
ಕವಿತೆಯ ಬಣ್ಣ ಸುಡುವುದೇ ಇಲ್ಲ.

‍ಲೇಖಕರು avadhi

27 December, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading