ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವಿಗೋಷ್ಠಿಯ ಚಿತ್ರಗಳು

ಮಂಜಿನ ನಗರಿಯಲ್ಲಿ ನಡೆಯುತ್ತಿರುವ ಸಮ್ಮೇಳನ ಯಶಸ್ವಿಯಾಗಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಮೂರೂ ದಿನಗಳಲ್ಲಿ ನಡೆದ ಕಾರ್ಯಕ್ರಮಗಳು ಸಾಹಿತ್ಯಾಸಕ್ತರ ಮನಗೆದ್ದಿವೆ. ಹಾಗೆಯೇ ಮೂರನೇ ದಿನವಾದ ಇಂದು ಭಾರತಿಸುತ ಮುಖ್ಯವೇದಿಕೆಯಲ್ಲಿ ಡಾ. ಎಚ್.ಎಸ್.ವೆಂಕಟೇಶ್ ಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆದ ‘ಕವಿಗೋಷ್ಠಿ’ ಕಾರ್ಯಕ್ರಮದಲ್ಲಿ 29 ಕವಿ/ಕವಯತ್ರಿಯರ ಕವನಗಳು ವಾಚನಗೊಂಡು ನೆರೆದ ಸಭಿಕರ ಮನಗೆದ್ದಿವೆ.

ಕಾರ್ಯಕ್ರಮದಲ್ಲಿ ಡಾ.ಮಾಲತಿ ಪಟ್ಟಣಶೆಟ್ಟಿಯವರ ‘ಗುಬ್ಬಚ್ಚಿ’ ಡಾ. ಎಚ್.ಎಲ್. ಪುಷ್ಪರವರ ‘ಮರೆಯಾಗುವ ಚಂದಿರನೆ’ ಡಾ. ಜಿ.ಎಸ್.ಉಬರಡ್ಕ ಅವರ ‘ನಿಜಗುಣ’ ಡಾ. ಅಪ್ಪಾಜಿಯವರ ‘ಹಾಳು ಹಂಪೆ’ ಮತ್ತೂ ಹಲವಾರು ಕವನಗಳು ವಾಚನಗೊಂಡವು.

ಹಾಗೆಯೇ ಇನ್ನೊಂದೆಡೆ ಸಮನಾಂತರ ವೇದಿಕೆಯಾಗಿರುವ ‘ಕೊಡಗಿನ ಗೌರಮ್ಮ ವೇದಿಕೆಯಲ್ಲಿ ಅಬ್ದುಲ್ ರಶೀದ್ ಇವರ ಅಧ್ಯಕ್ಷತೆಯಲ್ಲಿ ನಡೆದ ಮತ್ತೊಂದು ಕವಿಗೋಷ್ಠಿಯಲ್ಲಿ 34 ಕವಿ/ಕವಯತ್ರಿಯರು ತಮ್ಮ ಕವನಗಳನ್ನು ವಾಚಿಸಿದರು.

ವಿಶ್ವನಾಥ ಶೆಟ್ಟಿ ಪೇತ್ರಿಯವರ ‘ಮಾತಿಗೆ ಮಡಿ’ ಮತ್ತು ಗುರುರಾಜ ವೆಂ. ಶಿರಹಟ್ಟಿ ಮೊದಲಾದವರ ಕವನಗಳು ವಾಚನಗೊಂಡವು.

ಕವಿಗೋಷ್ಠಿಯ ಕೆಲವು ಚಿತ್ರಗಳು ನಿಮಗಾಗಿ

ಚಿತ್ರಗಳು : ಶಿವು ಮೊರಿಗೇರಿ

 

 


‍ಲೇಖಕರು G

9 January, 2014

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading