ರೋಹಿಣಿ ಸತ್ಯ
ಘಟನೆಗೆ ಪ್ರತಿಕ್ರಿಯೆ ತೋರುತ್ತಾ
ಸಮಾಜವನ್ನು ಅಧಿಕಾರವಾಗಿ ಆದೇಶಿಸುತ್ತಾ
ಪ್ರಕೃತಿ ವಿಕೋಪಗಳನ್ನು ಚಿತ್ರಿಸುತ್ತಾ
ಸೃಷ್ಟಿಯ ಸೊಬಗನ್ನು ಸ್ಪರ್ಶಿಸುತ್ತಾ
ಕ್ರೋಧಾಗ್ನಿ ಜ್ವಾಲೆಯನ್ನು ಉರಿಸುತ್ತಾ
ಶಾಂತವನ್ನು ಸಮಪಾಲಿನಲ್ಲಿ ಬೆರೆಸುತ್ತಾ
ಕಷ್ಟಗಳನ್ನು ಹಿಮಾಲಯಗಳೆಂದು ಬಣ್ಣಿಸುತ್ತಾ
ಸುಖಗಳನ್ನು ಹಸಿರು ಹುಲ್ಲಿನಂತೆ ಹರವುತ್ತಾ
ಭೀಭತ್ಸ ಭಯಾನಕ ದೃಶ್ಯಗಳಿಗೆ ಮರುಗುತ್ತಾ
ಅನುಕಂಪವನ್ನು ಆನಂದವಾಗಿ ಅನುಭವಿಸುತ್ತಾ
ಅನ್ಯಾಯ ಅಕ್ರಮಗಳನ್ನು ಎದುರಿಸುತ್ತಾ
ಆತ್ಮೀಯತೆಯ ಹೊಳೆಯನ್ನು ಹರಿಸುತ್ತಾ
ವಿಷಾದವನ್ನು ವಿಧಿಯಲ್ಲದೇ ನುಂಗುತ್ತಾ
ವಿನೋದದ ಜಾಡನ್ನು ಅರಸುತ್ತಾ
ವಿಯೋಗದ ವಿರಹಕ್ಕಾಗಿ ಪರಿತಪಿಸುತ್ತಾ
ಸರಸ ಸಮಾಗಮವನ್ನು ಸೃಷ್ಟಿಸುತ್ತಾ
ಅಭ್ಯುದಯ ಭಾವನೆಗಳನ್ನು ವ್ಯಕ್ತೀಕರಿಸುತ್ತಾ
ಹಾಸ್ಯಾಸ್ಪದ ವ್ಯಕ್ತಿಗಳನ್ನು ವಕ್ರೀಕರಿಸುತ್ತಾ
ವಿಸ್ಮಯ ವಿಚಿತ್ರ ವಿಭಿನ್ನವಾದ ಮನಸಿನಾಳದ ಭಾವನೆಗಳು
ಪೊರೆಗಳನ್ನು ಸೀಳಿ ವೇಗದ ಗತಿಯಿಂದ ಮುನ್ನಗ್ಗುವ ಪರಿ
ಹೊಮ್ಮಿಸಿದ ನವರಸಗಳ ನವತರಂಗಗಳ ಧ್ವನಿಗಳು, ಕವನಗಳು







bhavanegalu sogasagi samajika chintaneyatta saagive
ಹೃದಯ ಸಮುದ್ರದಲ್ಲಿ ಏಳುವ
ತರಂಗಗಳು ಕವನ
ಮೇಲಾಕಾಶದಲ್ಲಿ ಹಾರುವ
ಮುಗಿಲುಗಳ ಭಾವನೆಯೆ ಕವನ. -ನಿಮ್ಮ ಕವನ ಚೆನ್ನಾಗಿದೆ.
very nice
Dhanyavaadagalu Raghavendra Noorulla Veeranna avarige