ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕವನಗಳು ಮಾರಾಟಕ್ಕಿವೆ…

ಕೈಗೆತ್ತಿರಿ ಲೇಖನಿಯ ಗೀಚಿಬಿಡಿ ಕವನಗಳ

ಡಾ. ಶಿವಾನಂದ ಕುಬಸದ

ಹನಿಗವನ ಮಿನಿಗವನ

ಮಿಡಿಕವನ ಮ್ಯಾಕ್ಸಿ ಕವನ

ಭೋರ್ಗರೆದು ಸುರಿದು

ಜಲಪಾತದಂದದಿ ಬರುವ

ಛಂದಸ್ಸು ಅಲಂಕಾರ ಹೊಂದಿದ

ಮಹಾಕವನ ಇತ್ಯಾದಿ

ಕವನಗಳು ಮಾರಾಟಕ್ಕಿವೆ…

 

ಹರೆಯದ ಹುಡುಗ

ಚಿತ್ತ ಚಾಂಚಲ್ಯದಿಂದ ಕಲಿತ

ಕನ್ನಡವನ್ನೆಲ್ಲ ವ್ಯಯಿಸಿ ಹುಡುಗಿಯ

ಕಣ್ಣು ಮೂಗು ನಡು ನಿತಂಬಗಳ

ವರ್ಣಿಸಲು ಸೃಷ್ಟಿಸಿದ

ಚಂದದ ಚಿತ್ತಾರದ

ಕವನಗಳು ಮಾರಾಟಕ್ಕಿವೆ…

 

ಸಂತೋಷ ಕೂಟಕು ಕವನ

ಸಂತಾಪ ಸೂಚನೆಗು ಕವನ

ಕವಿಗೋಷ್ಟಿಗಾಗಿಯೇ ತಿಣುಕಿ

ತೆಗೆದ ಸಂತೆಗೆ ಮೂರು ಮೊಳದ

ಸಮಯ ಸಾಧಕ ಕವನ ಇತ್ಯಾದಿ

ಕವನಗಳು ಮಾರಾಟಕ್ಕಿವೆ…

 

ಮಂತ್ರಿಯ ಹೊಗಳಲು ಕವನ

ಮಹಾಪುರುಷನ ತೆಗಳಲು ಕವನ

ಹೆಸರು ಮಾಡಲು ಕವನ

ಪ್ರಶಸ್ತಿಯಿದೆಯೋ ಸಿಧ್ಧವಾಯಿತು

ಇನ್ಸ್ಟಂಟ್ ಕವನ ಅಂತೂ

ಅದಕೋ ಇದಕೋ ಎದಕೊ ಬರೆದ

ಕವನಗಳು ಮಾರಾಟಕ್ಕಿವೆ…

 

ಕವನ ಕೊಳ್ಳಲು ನಿಮ್ಮಲ್ಲಿ

ಇಲ್ಲವೋ ಮನ ಧನ

ಚಿಂತಿಸದಿರಿ ಇಲ್ಲಿದೆ ಅದ್ಭುತ ಐಡಿಯಾ

ಕೈಗೆತ್ತಿರಿ ಲೇಖನಿಯ ಗೀಚಿಬಿಡಿ ಕವನಗಳ

ಅರ್ಥವಾಗಲಿ ಬಿಡಲಿ ಓದುಗರ ಕರ್ಮ

ಮತ್ತೆ ಹೊರಡಿರಿ ಕೂಗುತ್ತ

ಕವನಗಳು ಮಾರಾಟಕ್ಕಿವೆ…

 

‍ಲೇಖಕರು avadhi

3 July, 2013

6 Comments

  1. Rukmini Nagannavar

    naijyateyannu bittarisada kavana 🙂

  2. Anonymous

    ಹನಿಗವನ ಮಿನಿಗವನ
    ಮಿಡಿಕವನ ಮ್ಯಾಕ್ಸಿ ಕವನ
    ಭೋರ್ಗರೆದು ಸುರಿದು
    ಜಲಪಾತದಂದದಿ ಬರುವ
    ಛಂದಸ್ಸು ಅಲಂಕಾರ ಹೊಂದಿದ
    ಮಹಾಕವನ ಇತ್ಯಾದಿ
    ಕವನಗಳು, Nimma ‘kavana’ yava catagoty? olleya kavana marayare. thanx for your good poem.

  3. Gururaj katriguppe

    ಹನಿಗವನ ಮಿನಿಗವನ
    ಮಿಡಿಕವನ ಮ್ಯಾಕ್ಸಿ ಕವನ
    ಭೋರ್ಗರೆದು ಸುರಿದು
    ಜಲಪಾತದಂದದಿ ಬರುವ
    ಛಂದಸ್ಸು ಅಲಂಕಾರ ಹೊಂದಿದ
    ಮಹಾಕವನ ಇತ್ಯಾದಿ
    ಕವನಗಳು , Nimma ‘kavana’ yava ‘catagory’ ge seruthe? olleya kavana marayare. thanx for your good poem.

  4. nagraj harapanahalli

    ಬರೆಯುವವರಿಗೆ ಎಚ್ಚರಿಕೆ ಮತ್ತು ಆತ್ಮಾವಾಲೋಕನ ಮಾಡಿಕೊಳ್ಳುವಂತಿದೆ .

  5. lalitha siddabasavaiah

    ಮಸಲಾ ನೀವು ಮಾರಾಟಕ್ಕೇ ಇಟ್ರೂ ಕೊಂಡುಕೊಳ್ಳೋರ್ ಯಾರಿದಾರೆ ಕವನಗಳ? ಪುಗಸಟ್ಟೆ ಕೊಟ್ರೂ ಓದಲ್ಲ ಸಾರ್,
    ಹ್ಹಹ್ಹ

  6. Anil Talikoti

    ವನದಲ್ಲಿ ಕೆಂಗೆಟ್ಟು ಕೂತ ಕಪಿಗಳಂತೆ ಕವನ ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading