'ಕಳ್ಳ ಬೆಕ್ಕು ಕಣ್ಣ ಮುಚ್ಚಿಕೊಂಡು ಹಾಲ ಕುಡದ್ರ…' – ಕಿರಣ್ ಬರೀತಾರೆ

ಕಿರಣ್ ದೇಸಾಯಿ

ಬಹುಶ; ಇದು ಎಲ್ಲಾ ಹೆಂಡತಿಯರ ಕಥೆಯೋ ಏನೋ? ಗಂಡ ನಮ್ಮನ್ನ ಹೊಗಳಿ ಹೊಗಳಿ ಹೊನ್ನಶೂಲಕ್ಕೇರಿಸ್ತಾರಲ್ಲ ಇದಕ್ಕ್ ಏನನಬೇಕು. ಅಲ್ಲ ನೋಡ್ರೀ,….. ಸೂಟಿಯಿದ್ದಾಗ,” “ಚಾ ” ಕುಡುಕೊತ ಕೂತಾಗ್ ಖಾಸಾ ದೋಸ್ತನ್ ಬರಬೆಕ್ ನೋಡ್ರೀ……..ಮೈಯಾಗ್ ನುಸಗುನ್ನಿ ಹೊಕ್ಕಂಗ ಆಟಾ ಆದ್ತಾರ . ಭಾಳ ಆರಾಮ ಇದ್ದೆನಪಾ… ಮತ್ತೇನಿಲ್ಲ, ಇಲ್ಲೇ ವೈನೀ ಇದ್ದಾಳ ಅಂತ ಫೋನ್ ಕೊಡ್ತಾರ್. ಗೆಳ್ಯಾರ ಅಂತರಂಗದ ಮಾತು ಹೆಂಡತಿಗೆ ಗೊತ್ತಾಗಬಾರದಂತ ನಾಟಕ ಮಾಡ್ಯಾರೆನೊ?? ಅಂತ ಅನಸ್ತದ್.
ಯಾವಾಗ ಹೊರಗ ಹೊಟೇಲಗ ಹೋದರೂನೂ ಹಂಗ, ನೀ ಇಲ್ಲೇ ಕೂಡು, “ಆರಾಮ ಕೂಡು” ಅಂತ ಹೇಳಿ ತಾವು ಆಯಕಟ್ಟಿನ ಜಾಗಾದಾಗ ಕೂತ ಕೊಂಡು ಹೆಂಡತಿಯನ್ನು ನೋಡ್ಕೋತ್ ದೌಲತ್ ಮಾಡ್ತಾರ, ಆದರ ಅವರ ಲಕ್ಷ್ಯೆಲ್ಲಾ ಬೇರೆ ಕಡೆನ ಇರತದ್. ನಾವು ಪೂರಿ ಉಬ್ಬಿಧಂಗ ಉಬ್ಬಿರ್ತೇವೀ ಅಂತ ಆವ್ರು ಅನಕೊಂಡಿರ್ತಾರ್.

ಇನ್ನ ಪಿಕ್ಚರ್ಗ ಹೋದಾಗು ಹಂಗ ನೋಡ್ರೀ, ತಮಗ ಕಣ್ಣ ಆಡಸಲಿಕ್ಕೆ ಆರಾಮ ಆಗೋಹಂಗ ಸೀಟ್ ನೋಡೀರ್ತಾರ್ ಮತ್ತ , ಹೆಂಡತಿನ್ ಒಂದ ಮ್ಯೂಲ್ಯಾಗ್ ಕುಡಸ್ತರ್. ಯಾವರೆ ಧಡವ್ಯ ಹೆಂಡ್ತಿ ಬಾಜೂಕ್ ಬಂದ್ರ…………….. ಚಿಂತೀ…ಅಲ್ಲದ್ ತಮ್ಮ ಬಾಜೂಕ್ ಸುರಸುಂದರಿ ಬರ್‍ಲಿ ಅಂತ ಮನಸ್ನಾಗ ಮಂಡಗೀ ತಿನ್ತಿರ್ತರ್.
ಗ೦ಡಸ್‌ರು “ಕಾರ್” ಓಡಸೋ ಸಂಭ್ರಮಾನ್ ನೋಡೇ ಅನುಭವಿಸಬೆಕು. ಗೋಣು ತಿರುಗಿಸಾಧಾಂಗ ಡ್ರೈವ್ ಮಾಡ್ತಾರಾ, ಆದ್ರ ಕಣ್ಣ ಮಾತ್ರ ಎಲ್ಲ ಕಡೆ ತಿರುಗತಿರತದ್. ಹೆಂಡತಿ ಏನರೇ ಕಣ್ಣ ನೋಡಿದ್ರ, ಹುಸಿನಗು ನಕ್ಕೂ “ಈ ಡ್ರೆಸ್ಸನಾಗ್ ನೀ ಭಾಳ್ ಚಂದ ಕಾಣಿಸ್ಲಿ ಕತ್ತಿ” ಅಂತ ಹೇಳಿ ಮಾತ್ ಹಾರಸ್ಲಿಕ್ಕೆ ನೊಡತಾರ್. ಕಳ್ಳ ಬೆಕ್ಕು ಕಣ್ಣ ಮುಚಗೊಂಡು ಹಾಲ ಕೂಡದ್ರ……. ಜಗತ್ತಿಗೆ ಗೊತ್ತಾಗುದಿಲ್ಲೇನೂ?
ಮದುವಿ ಮುಂಜವಿ ಸಮಾರ೦ಭ ಇದ್ರಂತೂ ಕೇಳೋದ ಬ್ಯಾಡಾ……. ನಾವಲ್ಲೇ.. ನೀ ಹೋಗ್ ಹುಡುಗುರ್ನ ಕರಕೊಂಡ ಹೋಗಿಬಾ ಅನ್ನೋವ್ರ,ಫೋನಾಗ್ ಇವ್ರ ಸೊದರತ್ತಿ ಮಗಳು, ಮಾವನ ಮಗಳು ಅಥವಾ ಹಳೆ ಫ್ರೆಂಡ್ಸ್ ಹಾಜರಾಗ್ತಾರಂದ್ರ ನಮ್ಕಿಂತ ಮೊದಲೇ ತಯಾರಾಗಿ ನಿಂತ ಬಿಟ್ಟಿರ್ತಾರ್. ಆಗ್ ನೋಡಬೆಕ್ ಇವರ್ ಭರಾಟೆ ಅವ್ರ ಮುಖದ್ ಮ್ಯಾಲಿನ್ ಬಣ್ ಹೇಳ್ಲ್ತದ್.ಆವಾಗ್ ನೋಡಬೆಕ್ ಈ ಸಡಗರ. ಇಲ್ಲದ್ದ ಉಪಚಾರ್ ಮಾಡತರ್. ಅಲ್ಲಿ ಹೋದ ಮ್ಯಾಲೆ ಯಾವ ಮಾಯದಿಂದ್ ಎಲ್ಲಿರ್ತಾರೋ ಹೆಂಡತಿಗೆ ಗೊತ್ತಾ ಆಗಾಂಗಿಲ್ಲ. ಉಸರ್ವಳ್ಲಿ ಬಣ್ಣ ಬದಲಾಯಿಸ್ಧಂಗ ಬದಲಾಯಿಸ್ತಾರ .
ಇದು ಹೆಂಗಸರಿಗೆ ಗೊತ್ತಾಗಾಂಗಿಲ್ಲ ಅಂತ ಅನಕೊಂಡಿರ್ತಾರ್. ಗಂಡನ ಮನಸ್ಸು ಹೆಂಗ ಅಂತ ಹೆಂಡತಿಗೆ ಗೊತ್ತಿರ್ತದ್.ಆಫಿಸ್ನಾಗ್ ದುಡಿದು ದುಡಿದು ಪಾಪ…. ಕಣ್ಣಿಗೆ ತಂಪ್‌ಮಾಡಿಕೊಳ್ಳಿ ಅಂತ ಸುಮ್ಮನೆ ಇರ್ತಾರೆ. ಆದರೆ ಹೆಂಡತಿಯರಿಗೆ ಗೊತ್ತಿರತದ್ ಯಾವುದು ಖರೆ,  ಯಾವುದು ಸುಳ್ಳು ಅಂತ ಗಾಳಿಪಟ್ ಹಾರಿಸಲಿಕ್ಕೆ ಬಿಟ್ಟು ಸೂತ್ರಾನ ಹೆಂಗ ಆಡಿಸಬೇಕಂತ.
ಹೊಗಳಿ ಹೊಗಳಿ ಎನ್ನ ಹೊನ್ನ ಶೂಲಕ್ಕೇರಿಸದರಯ್ಯಾ!
 

‍ಲೇಖಕರು G

August 6, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: