ಕಳೆದ ಕೀಲಿ ಕೈ ಸಿಕ್ಕಿದೆ, ಬೀಗಕ್ಕೆ ಬಾಯಿಲ್ಲ..

ಮರೆತವರ ನೆನಪಿಗೆ

ರೇಣುಕಾ ರಮಾನಂದ

ತುಕ್ಕು
ಕಬ್ಬಿಣಕ್ಕೆ…
ಹಸಿರಿಗಲ್ಲ.

ಬಿಡದೆ
ಹೊಯ್ದ ಮಳೆಗೆ
ಒಂದು ಹುಟ್ಟಿತು
ಇನ್ನೊಂದು ಸತ್ತಿತು.

13533130_1059078750845248_1945511311663637231_nಕಳೆದ ಕೀಲಿ ಕೈ ಸಿಕ್ಕಿದೆ
ತೆರೆಯೋಣವೆಂದರೆ
ಬೀಗಕ್ಕೆ ಬಾಯಿಲ್ಲ
ಬರೀ ಹಸಿರು.

‘ಮರೆತವರ ನೆನಪಿಗೆ
ಒಂದೆರಡು ಹಸಿರುಟ್ಟಿಸುವುದು
ನನ್ನ ಧಮ೯’
ರಸ್ತೆಯಲಿ ಸಿಕ್ಕಿ
ನಕ್ಕ ಮಳೆರಾಯ.

ಹೊರಳಿ ಹೋಗಬೇಕು
ಮರಳಿಬಾರದೆ
ಈ ಹಿಂದಿನಂತೆ
ಎಂದುಕೊಂಡೆ
ಜಗ್ಗಿ ನಿಲ್ಲಿಸಿತು
ಹಸಿರ ಮೊರೆತ.

ಹತ್ಯಾರದೊಡನೆ
ಹಾಜರಿ ಹಾಕಿದ
ಗುಜರಿ ಹುಡುಗನಿಗೂ
ಗರಗಸವಿಡಲು
ಬಿಲ್ಕುಲ್ ಇಷ್ಟವಿಲ್ಲ
‘ಈ ಮಳೆಗಾಲ ಕಳೆಯಲಿ ಸಾರ್’
ಎನ್ನುತ್ತಿದ್ದಾನೆ
‘ಹುಟ್ಟು ನಿನ್ನಿಂದಲ್ಲ ಮಳೆರಾಯನಿಂದ
ಸಾವು ಮಾತ್ರ ನಿನ್ನದು’
ಎಂದೇನಾದರೂ
ಅಪರೋಕ್ಷವಾಗಿ
ಅಂದನೇ….

ಬೀಜಗಳೇನು ಬಾನಿನುಂದುದುರಿದವೇ…
ಎಂದು ಕೇಳಿದೆ ಮೊಳಕೆಯನ್ನು…
ಹೋಗುವಾಗ ಬೀಗದ ಬಾಯಿಗೆ
ಮಣ್ಣು ತುಂಬಿದ್ದೆಯಾ
ಹೊರಳಿ ಕೇಳಿತು
ನನ್ನನ್ನೇ…

ಗೋರಿಗಳ ಮೇಲೆ
ಆಲಗಳರಳಿದ್ದು ನೋಡಿದ್ದೆ
ತುಕ್ಕೂ ಹಸಿರ ಹೆರಬಲ್ಲುದೆಂದು
ಈಗಷ್ಟೆ ತಿಳಿಯಿತು.

‍ಲೇಖಕರು admin

August 14, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. Sangeeta Kalmane

    ಆಸರೆ ಕೊಂಚ
    ಸಿಕ್ಕರೆ ಸಾಕು
    ನಾ ಅಲ್ಲೆ ಮೊಳೆತು
    ಗಿಡವಾಗುವೆ
    ನಿನ್ನ ಋಣ
    ತೀರಿಸುವೆ
    ನಾ ಹಾಕಿದೆ
    ನೀರೆಲ್ಲ ಪೋಲಾಯಿತು
    ಒಂದಿನಿತೂ ನೀ ಮರುಗದಿರು
    ತಿಂಗಳ ಬಿಲ್ಲು ಬಂದಾಗ
    ನಿಮ್ಮಂತೆ ನಾವಲ್ಲವೆ
    ಕೆಲವು ಬಂಜರಾದರೆ
    ಹಲವು ಚಿಗುರಿ
    ಮೊಗ್ಗಾಗಿ ಅರಳಿ ಹೂ
    ಕಾಯಿ ಹಣ್ಣು
    ಕೊಟ್ಟು
    ತೀರಿಸಿಬಿಡುವೆವು
    ಬಿಲ್ಲು ಕಟ್ಟಿದ
    ಹಣವನ್ನು
    ಮಾನವಾ
    ದಯವಿಟ್ಟು ನಮ್ಮ
    ಸಾಯಲು ಬಿಡಬೇಡ
    ತೊಳೆದ
    ನೀರಾದರೂ ಸರಿ
    ಬಳಿದ
    ನೀರಾದರೂ ಸರಿ
    ಕುಡಿದು
    ಬದುಕುವೆವು
    ನಾವೂ
    ನಿಮ್ಮೊಂದಿಗೆ
    ಕರುಣೆ ತೋರು
    ಆದರೆ ನೆನಪಿರಲಿ
    ನಾವೆಂದೂ
    ಸ್ವಾಥಿ೯ಗಳಲ್ಲವೆ ಅಲ್ಲ
    ಅದು ನಮ್ಮ
    ಕನಸಲ್ಲೂ ಇಲ್ಲ
    ಕಂಡಲ್ಲಿ ಹಾಕು
    ಒಂದಷ್ಟು ನೀರು!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: