ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಳೆದು ಹೋಗಿದೆ ಎನ್ನ೦ಗಳದ ಬಾನೇ ಎನಗೆ

“ಇವತ್ತು ಪರಿಸರವಾದ ಎಂಬುದು ಪ್ಯಾಶನ್ ಆಗುತ್ತಿದೆ. ನಗರದ ನವಶ್ರೀಮಂತ, NGOಗಳು ಪ್ರಕೃತಿಯೊಂದಿಗೆ ಯಾವುದೇ ಸಾವಯುವ ಅನುಸಂಧಾನವಿಲ್ಲದೆ ತಮ್ಮ ವಿಚಾರ ಲಹರಿಗಳನ್ನು ಹರಿಯಬಿದುತಿದ್ದರೆ. ಕೇವಲ ಚಾರಣ, ಪ್ರಕೃತಿ ಪೋಟೋಗ್ರಪಿ, ಬ್ಲಾಗ್ಗಳಿಂದ ಪರಿಸರ ಉಳಿಸಲು ಸಾದ್ಯವಿಲ್ಲ. ಪರಿಸರ ಉಳಿಸಲು ನಗರದ ಹವಾನಿಯಂತ್ರಿತ ರೂಂಗಳಿಂದ ಕಂಪ್ಯೂಟರ್ ಮುಚ್ಚಿ ಹೊರಗೆ ಬರಬೇಕಿದೆ. ಗ್ರಾಮಗಳಲ್ಲಿ ಕೃಷಿ ಮಾಡುತ್ತಾ, ಪರಿಸರದೊ೦ದಿಗೆ ಹೊಂದಿಕೊಂಡು ಬದುಕಬೇಕಿದೆ. ಎಲ್ಲ ಪರಿಸರವಾದಿಗಳನ್ನೂ ಹಳ್ಳಿಗೆ ಆಹ್ವಾನಿಸುತ್ತಾ, ಪರಿಸರವಾದಿಗಳ ದ್ವಂದ್ವಗಳ ಬಗ್ಗೆ ಈ ಪದ್ಯ.”

– ಹರ್ಷ. ಕೆ

ಬರುತಿಹರು ಬರುತಿಹರು ಪರಿಸರವಾದಿಗಳು ಕಟ್ಟಲು ಕಾಡೊಂದ, ಮರಗಳ ಬೀಡೊಂದ. ದೊಡ್ಡ ದೊಡ್ಡ ಕಾರುಗಳಲಿ, ಬಣ್ಣ ಬಣ್ಣದ ಬೂಟಲಿ, ಬಗೆ ಬಗೆಯ ದರಿಸಿನಲಿ, ತರ ತರದ ಮಾತಿನಲಿ, ಎನ್ನ೦ಗಳದಲಿ ನಿಂತು ಬೋದಿಸಿಹರು, ಆಮ್ಲದ ಮಳೆಯೆಂದು, ಹಸಿರಿನ ಮನೆಯೆಂದು. ವೇಗದಲ್ಲೊಡುವ ಕಾರುಗಳ ನಿಲ್ಲಿಸಿ ತಿಳಿಸಿಹರು, ಕಡೆಯಬೇಡವೋ ದಾರಿ, ಕಟ್ಟಬೇಡವೋ ಗಾಡಿ. ಆಕಾಶಕ್ಕೆ ನೆಗೆಯುವ ವಿಮಾನದಿಂದಿಳಿದು ಹೇಳಿಹೋದರು, ಕಡೆಯಬೇಡವೋ ಕಾಡು ಕಟ್ಟಬೇಕಿದೆ ನಾಡು. ದೂರದ ಜೋಹಾನ್ಸ್ಬರ್ಗಲಿ ಒಪ್ಪಿಹರು ಕಡಿತಗೊಳಿಸಲು ದೂಪ, ಅಂಗಲಾಮ್ಲದ ದೂಪ. ಅಂಗ್ರೇಜಿಯ ಶೇರು ಮರುಕಟ್ಟೆಯಲಿ ಮಾರುವರು ದೂಪದ ಅಂಕ, ತರ ತರದ ಬೆಲೆಗೆ ಬಗೆ ಬಗೆಯ ಅಂಕ. ಮುಟ್ಟಬಾರದು ಇನ್ನು ಎನ್ನಂಗಳದ ಕಟ್ಟಿಗೆಯ, ಕಾಯಬೇಕಿದೆ ಇನ್ನು ಸರ್ಕಾರದ ಅನಿಲಕ್ಕೆ. ಹೇಗೆ ಕೇಳಲಿ, ಹೇಗೆ ಹೇಳಲಿ, ಪೂರ್ವ ನಿರ್ದಾರಿತ ಜಗಕೆ. ಕಳೆದು ಹೋಗಿದೆ, ಕಳೆದು ಹೋಗಿದೆ ಎನ್ನಂಗಳದ ಬಾ(ಳು)ನೇ ಎನಗೆ.   ೨

ಅರಣ್ಯ ರಕ್ಷಣೆಯ ಹೆಸರಿನಲ್ಲಿ ಅಲ್ಲಿನ ಮೂಲನಿವಾಸಿಗಳ ಒಕ್ಕಲೆಬ್ಬಿಸಿ ನಗರಗಳ ಕೂಲಿಯಾಗಿಸುವ ಸರ್ಕಾರದ ಕ್ರಮವನ್ನು ವಿರೋದಿಸಿ, ಆಂದ್ರದ ನಾಯಕರೊಬ್ಬರ ಮಾತುಗಳಿಂದ ಪ್ರೇರಿತವಾದ ಒಂದು ಪದ್ಯ.

ನಾನು ನಿಲ್ಲಿಸಲಾರೆ ಕೊಂಬೆ ರೆಂಬೆಗಳ ಕತ್ತರಿಸುವುದನ್ನು ಪ್ರಕೃತಿಯ ಸೌಂದರ್ಯಕ್ಕೆ ಕೆಡುವುದೆಂದು ತಿಳಿದೂ, ನಾನು ನಿಲ್ಲಿಸಲಾರೆ ಮರಗಳ ಕಡಿಯುವುದನ್ನು ಅದಕ್ಕೆ ಜೀವವಿದೆಯೆಂದು ಅರಿತೂ, ಏಕೆಂದರೆ, ಮನೆಯ ಕಟ್ಟಬೇಕಿದೆ. ನಾನು ನಿಲ್ಲಿಸಲಾರೆ ಬೇಟೆಯಡುವುದರ ಅಪರಾದವೆಂದು ತಿಳಿದೂ, ನಾನು ನಿಲ್ಲಿಸಲಾರೆ ಪ್ರಾಣಿ ಹತ್ಯೆಯ ಅವು ನಿರುಪದ್ರವಿಗಳೆಂದು ಅರಿತೂ, ಏಕೆಂದರೆ, ಹೊಟ್ಟೆ ತುಂಬಿಸಬೇಕಿದೆ. ನಾನೇಕೆ ಅಂಜಲಿ ಇದನ್ನು ಹೇಳಲು, ಪರಿಸರವಾದಿಗಳ ಕೋಪಕ್ಕೆ ತುತ್ತಾಗುವನೆಂದೆ? ಎಡಪಂಥೀಯನೆಂದು ಹೀಯಾಳಿಸುವರೆಂದೇ? ಹೆದರಲಾರೆ ಏಕೆಂದರೆ, ನಾಳೆ ಬದುಕಬೇಕಿದೆ.  ]]>

‍ಲೇಖಕರು G

7 July, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading