ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಳೆದುಹೋದ ಮಾತು ಉಳಿಸಿಬಿಟ್ಟ ಧೂಳು ಹಾಗೆ ಉಳಿಯಿತು…

– ಬಸವರಾಜ ಸೂಳಿಬಾವಿ

ಲಡಾಯಿ ಪ್ರಕಾಶನ ೧ ಆ ತುಳಿಸಿಕೊಂಡ ಹಾದಿ ಸುಮ್ಮನಿತ್ತು ತುಳಿವ ಕಾಲಿನ ಗಾಯದ ರಾಗ ಮುಗಿಲು ಮುಟ್ಟುತ್ತಿತ್ತು   ೨ ಅಂಟಿದೆಲ್ಲವ ತೊಳೆದುಕೊಂಡು ಹಗುರಾಗಲು ಆ ಜಡಿಮಳೆಯಲಿ ನಡೆದುಹೋದೆ ಆತ್ಮದ ಮೇಲೆ ಕಳೆದುಹೋದ ಮಾತು ಉಳಿಸಿಬಿಟ್ಟ ಧೂಳು ಹಾಗೆ ಉಳಿಯಿತು ೩ ದುರ್ಗಂಧಕೆ ಕಾರಣರಾದವರಾರೋ ತನ್ನೊಳಗೆ ಬೆರೆಯಿಸಿಕೊಂಡ ಗಾಳಿಯಷ್ಟೇ ನಿಂದನೆಗಳ ಎದುರಿಸಿತು ೪ ಒಮ್ಮೊಮ್ಮೆ ಹೀಗೆ ಕಣ್ಣೀರು ಖಾಲಿಯಾದರಷ್ಟೇ ಕಣ್ಣು ಸ್ವಚ್ಛಗೊಳ್ಳುವುದು ೫ ನಾನು ತುಳಿವ ಮಣ್ಣು ನನಗೆ ಹೂ ಕೊಟ್ಟಿತು ಹೀಗೇಕೆಂದೆ :ಎಲ್ಲವೂ ಅವರವರ ಸ್ವಭಾವ ಎಂದುತ್ತರಿಸಿತು ೬ ಹೊಗೆ ಬೂದಿ ಎರಡೂ ಬೆಂಕಿ ಜನ್ಯಗಳೆ ಕೂಡುವುದಿಲ್ಲ ಎಂದೂ ಹೊಗೆ ಹುಟ್ಟುತ್ತಲೇ ಆಕಾಶಮುಖಿ ಬೂದಿ ಭೂಮಿಯಲ್ಲುಳಿವ ಕಾಲಿಲ್ಲದ ಕೂಸು ೭ ನಿನ್ನೆ ಕೊನೆಗಾಲದ ಅಪ್ಪನನು ಕಣ್ತುಂಬಿಕೊಳಲು ಹೋಗಿದ್ದೆ ಕಾಲ ಬೀಸಿದ ಕವಣೆಕಲ್ಲಿಗೆ ಸಹನೆಯ ಗುಬ್ಬಿ ಯಾವ ಲೆಕ್ಕ ? ೮ ಪ್ರಮಾಣದ ಹಂಗಿಲ್ಲದ ಈ ಪಯಣದಲಿ ನಿನ್ನ ಮಾತು ಕೇಳಲೆಂದು ಮೌನವಾದೆ ಸಂತೆಯ ಶಬ್ದಗಳ ಧೂಳು ಆತ್ಮಕ್ಕಂಟಿದ ಹಾಗೆ ಬಯಕೆಯ ದಿಕ್ಕು ಗಾಳಿಯ ಕೂಡಿತು ೯ ಈ ಹೃದಯವನು ನೀ ಹಾಡುಗಳಿಂದ ತುಂಬುವಾಗ ಬಯಕೆ ಮೌನದವತಾರದಲಿತ್ತು ಎಷ್ಟು ಎತ್ತರ ಹೇಳಿದರೂ ನೋವು ಮತ್ತು ಸಾವಿನಲ್ಲಾಡುವ ಶಬ್ದ ಮೌನದಂತಿರುವವು ೧೦ ಆ ತಿರುವಿನಲಿ ದುಃಖದ ನೆನಪ ಇಳಿಸಿ ನಡೆವಾಗ ಸುಖದ ರೆಪ್ಪೆಯಲೇಕೊ ಕಳವಳ ಇಂದೂ ಆ ಹೆಸರಿರದ ಓಣಿಯಲಿ ಗೆಜ್ಜೆಸದ್ದಿಗೆ ಗೋಡೆ ನೆರಳು ಕಂಪಿಸುತ್ತಲೇ ಇತ್ತು!]]>

‍ಲೇಖಕರು G

6 July, 2012

1 Comment

  1. D.RAVI VARMA

    ಈ ಹೃದಯವನು ನೀ ಹಾಡುಗಳಿಂದ ತುಂಬುವಾಗ ಬಯಕೆ ಮೌನದವತಾರದಲಿತ್ತು
    ಎಷ್ಟು ಎತ್ತರ ಹೇಳಿದರೂ ನೋವು ಮತ್ತು ಸಾವಿನಲ್ಲಾಡುವ ಶಬ್ದ ಮೌನದಂತಿರುವವು
    ೧೦
    ಆ ತಿರುವಿನಲಿ ದುಃಖದ ನೆನಪ ಇಳಿಸಿ ನಡೆವಾಗ ಸುಖದ ರೆಪ್ಪೆಯಲೇಕೊ ಕಳವಳ
    ಇಂದೂ ಆ ಹೆಸರಿರದ ಓಣಿಯಲಿ ಗೆಜ್ಜೆಸದ್ದಿಗೆ ಗೋಡೆ ನೆರಳು ಕಂಪಿಸುತ್ತಲೇ ಇತ್ತು!……tumbaa classic aagide guru ..
    ravivarma hospet

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading