ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಕಲ್ಲು ಕೋಳಿಗೆ ಗಲ್ಲು ಖಾತರಿ….’

ಬಾನು ನೀವೆ ಹಂಚಿಕೊಳ್ಳಿ

ರಮೇಶ್ ಆರೋಲಿ


ಎತ್ತರೆತ್ತರ ಬಾನಿನೆತ್ತರ ಗುಡ್ಡಕ ಕರಿ ಕಲ್ಲು
ಗಿಡದ ಬುಡಕ ನೆಡು ಹುಲ್ಲು
ಅಗಲ ಅಗಲ ಅದು ಮಾತಿನ ಹಗಲ
ಸುಮ್ಮನೆ ಕಿರಿ ಹಲ್ಲು
ಮುಗಿಲ ಮುಟ್ಟಿತು ಬರಿ ಸೊಲ್ಲು
 
ಗಿಳಿ ಬಾರವು ಗೂಬೆ ಕೂಡವು
ಕಬ್ಬಿಣ ಕೊಂಬೆಯಲಿ
ಪೊಟರಿನ ಗುಟುರು ಕೇಳದಿಲ್ಲಿ
ಕಾಯಿ ಇದ್ದವು ಹಣ್ಣು ಮೇದವು
ಊರ ಬದುವಿನ್ಯಾಗ
ಯಾರೊ ನದುರು ಬಿಟ್ಟರೀಗ
 
ಎದೆ ಗೂಡಿನ ಮಾತು ನಿಂತವು
ಕಂಪನಿ ಭರದಾಗ
ರಂಗಿನ ಗೋಡೆ ಶಹರದಾಗ
ಕುಲ ಗೋತ್ರಕ ಬಣ್ಣ ಬಳೆದನು
ಗ್ಲೋಬಲ್ ಗೌಡಣ್ಣ
ಜೋಪಡಿ ಜಾಗ ನೀಡಿರಣ್ಣ

ಅರೆ ಬೊಕ್ಕಣ ಅಲೆಯ ಮ್ಯಾಲೆ
ಆ ಚುಕ್ಕಿ ಚೀರುತಾವ
ಕೆಳಗೆ ಸತ್ತು ಸೇರುತಾವ
ಬಯಲು ಬಯಲಿಗೆ ಮೊಬೈಲು ಆಗಿ
ಮಾತ ಕಸಿಯುತಾವ
ಕಿವಿಯು ಮೌನ ಮರಿಯುತಾವ
 
ಊರ ಊರಿಗೆ ಅದರ ತೇರಿಗೆ
ಕೊಕ್ಕರೆ ಕೊಕ್ಕೋಳಿ
ಕೋಳಿಗೆ ಹೊಸ ಚಾಳಿ
ಕಲ್ಲು ಕೋಳಿಗೆ ಗಲ್ಲು ಖಾತರಿ
ಕಿವಿಯ ಮುಚ್ಚಿಕೊಳ್ಳಿ
ಬಾನು ನೀವೆ ಹಂಚಿಕೊಳ್ಳಿ

‍ಲೇಖಕರು avadhi

16 March, 2013

1 Comment

  1. Vithal Dalawai

    Vastavavannu janapadada nudigattinalli hidididuttiva nimma prayatna uttamavagide. Munduvaresi.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading