ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಲಾ ಭಾಗ್ವತ್ ಹೊಸ ಕವಿತೆ – ‘ಕಂಬದಲ್ಲಿ ಹುಟ್ಟಿದ ಕವಿತೆ’

 ಕಲಾ ಭಾಗ್ವತ್

**

ಎಷ್ಟೋ ಆಳಕ್ಕೆ  ಇಳಿದು ಗಟ್ಟಿಯಾಗಿ

ನಿಂತ ಕಂಬಕ್ಕೆ ಇನ್ಯಾವುದೋ 

ಕೊರೆದ ಅಂಟಿದ ಮೂಡಿದ ನೋವಿನ ಚಿತ್ತಾರ

ಆಗಾಗ ಸರಿಪಡಿಸಬೇಕು

ಸಿಕ್ಕ ಸಮಯದಲ್ಲೇ..

ಸೂರಿನಡಿ ಇರುವವರ ಆಶ್ರಯಕೆ.

ಹೀಗೊಮ್ಮೆ ನಿಂತ ಕ್ಷಣದಲ್ಲೇ ನಿಗ್ರಹ

ಏರುವ ತವಕ ಎಲ್ಲರಿಗೂ

ಹುದ್ದೆಯೆಂಬ ಹಣೆಪಟ್ಟಿಯ ಬಿಗಿತವನ್ನು 

ಸಡಿಲಿಸಲೂ ಬಿಡುವಿಲ್ಲ

ಬೇಕು ಬೇಕೆಂಬ ಬೇಡಿಕೆಗಳೆಲ್ಲ ಬೇರೆ ಬೇರೆ

ಬೊಕ್ಕಸವಿಲ್ಲದ ಬೈರಾಗಿ ಈಗ 

ಹಗುರವಾದಷ್ಟೂ ಹೇರಿ ಹೇರಿ ಮಣ ಭಾರವ

ಕುಹಕದ ನಗು ಕುಕ್ಕುತ್ತಲೇ ಕವಿತೆಯಾಗಿದೆ

ಅಲ್ಲಿ.. ಅದಾವುದೂ ಕಾಣದಂತೇ

ಕಲಬೆರಕೆಯ ಕುಳಿಯಲ್ಲೇ ನಿಂತರೂ

 ತಿಳಿಯದು ಈ ಕಂಬ ಕಂಬ ಆಟ

ಜಾಲವ ಬೀಸಿ ಮೇಲೇರುವ ಹುಕಿಗೆ

ಸಕಾಲದಲ್ಲಿ ಸಂಗತನಾದರಷ್ಟೇ ಸಲುಗೆ

ಆಯ ತುಸುವೇ ತಪ್ಪಿದರೂ ಬಿಟ್ಟೋಡುವವರ 

ನಡುವೆ ಹೇಗೋ ಸಿಕ್ಕ ಕ್ಷಣ ಇದ್ದಲ್ಲೇ  ವಿಶ್ರಮಿಸಿ 

ದಣಿವ ನೀಗಿಸಿಕೊಳ್ಳಲು ಈಗ ಹವಣಿಸುತ್ತಿದೆ

 ಕಂಬ ಗಟ್ಟಿಯಾಗಿದೆ

ಹಿಡಿವ ಬಿಡುವ ಆಟದ ನಡುವೆ

ಇರಬೇಕು ಹೀಗೇ ಅವರೆಲ್ಲರಿಗಾಗಿ 

ಎಲ್ಲ ಬಂಧನ ತೊರೆದು ಹಾಯಾಗಿ

ಒಂದಿಷ್ಟೇ ದಿನ ಕ್ಷಣಗಳಾದರೂ 

ಕಂಬದಲ್ಲಿ ಹುಟ್ಟಿದ ಕವಿತೆಯಾಗಿ

‍ಲೇಖಕರು Admin MM

20 March, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading