ಕಲಾವಿದ ಜೆ ಎಂ ಎಸ್ ಮಣಿಗೆ ಪ್ರಶಸ್ತಿ ಗರಿ

ಸಂಕೇತ್ ಗುರುದತ್ತ

ಪ್ರತಿ ವರ್ಷವೂ ಚಿತ್ರಕಲಾ ಪರಿಷತ್ತಿನಲ್ಲಿ ನಡೆವ ಚಿತ್ರಸಂತೆಯು ಈ ಬಾರಿ ಜನವರಿ 6 ರಂದು ನಡೆಯುವಂತೆ ಆಯೋಜನೆಗೊಂಡಿದೆ. ಇದು 16ನೆಯದಾಗಿದ್ದು ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಿಂದ ಉದ್ಘಾಟನೆಯಾಗಲಿದೆ. ಈ ಚಿತ್ರಸಂತೆಯೊಂದಿಗೆ ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯುತ್ತದೆ. ಈಗಿನ ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ 5ರಂದು ನಡೆಯಲಿದ್ದು ಹಿರಿಯ ಕಲಾವಿದರೂ ಹಾಗೂ ಕಲಾ ಪ್ರೋತ್ಸಾಹಕರೂ ಆಗಿದ್ದ ಹೆಚ್ ಕೆ ಕೇಜರಿವಾಲ್ ಪ್ರಶಸ್ತಿಯನ್ನು ನಾಡಿನ ಹಿರಿಯ ಚಿತ್ರಕಲಾವಿದರಾಗಿರುವ ಜೆ ಎಂ ಎಸ್ ಮಣಿ ಅವರಿಗೆ ಕೊಡಲಾಗುತ್ತಿದೆ.

ಡಿ ದೇವರಾಜ ಅರಸು ಪ್ರಶಸ್ತಿಯನ್ನು ಹಿರಿಯ ಚಿತ್ರಕಲಾವಿದರಾಗಿರುವ ಜೆಸು ರಾವಲ್ ಅವರಿಗೂ ಹಾಗೂ ಎಂ ಆರ್ಯಮೂರ್ತಿ ಪ್ರಶಸ್ತಿಯನ್ನು ಹಿರಿಯ ಸಾಂಪ್ರದಾಯಿಕ ಚಿತ್ರಕಲಾವಿದರಾಗಿರುವ ನೀಲಾ ಪಂಚ್ ಅವರಿಗೂ ಕೊಡ ಮಾಡಿ ಗೌರವಿಸಲಾಗುತ್ತಿದೆ. ಇದರೊಟ್ಟಿಗೆ `ಗಾಂಧಿ 150′ ಕಲಾ ಪ್ರದರ್ಶನವನ್ನು ಇದೇ ಚಿತ್ರಕಲಾ ಪರಿಪತ್ತಿನಲ್ಲಿ ಹಮ್ಮಿಕೊಂಡಿದ್ದಾರೆ.

ಈ ಪ್ರಶಸ್ತಿ ಪ್ರದಾನವನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಟ್ರಸ್ಟ್ ನ ಅಧ್ಯಕ್ಷರೂ ಹಾಗೂ ಮಾಜಿ ಮುಖ್ಯಮಂತ್ರಿಗಳೂ ಆದ ಎಸ್ ಎಂ ಕೃಷ್ಣ ನಿರ್ವಹಿಸಲಿದ್ದು ಕಲಾ ಪ್ರದರ್ಶನದ ಉದ್ಘಾಟನೆಯನ್ನು ಹೆಸರಾಂತ ಚಲನಚಿತ್ರ ಕಲಾವಿದರಾದ ರಮೇಶ್ ಅರವಿಂದ್ ಮಾಡಲಿದ್ದಾರೆ.

ಜೆ ಎಂ ಎಸ್ ಮಣಿ ಅವರ ಕಲಾ ಪಯಣ

ಹೆಚ್ ಕೆ ಕೇಜರಿವಾಲ್ ಪ್ರಶಸ್ತಿಗೆ ಪಾತ್ರರಾಗಿರುವ ಜೆ ಎಂ ಎಸ್ ಮಣಿ ಅವರು ಗ್ರಾಮೀಣ ನೆಲೆಗಟ್ಟಿನ ಬಂದಿದ್ದು ನಾಡಿನ ಶ್ರೇಷ್ಟ ಚಿತ್ರಕಲಾವಿದರಾಗಿ ರೂಪುಗೊಂಡಿದ್ದಾರೆ.

ಇವರು ಬೆಂಗಳೂರಿನ ಪ್ರತಿಷ್ಟಿತ ಹಾಗೂ ಹಲವಾರು ಶ್ರೇಷ್ಟ ಚಿತ್ರಕಲಾವಿದರನ್ನು ನಾಡಿಗೆ ಕೊಟ್ಟ ಕೆನ್ ಕಲಾ ಶಾಲೆಯ ವಿದ್ಯಾರ್ಥಿ. ಇದೇ ಕಲಾ ಶಾಲೆಯಲ್ಲಿಯೇ ಉಪನ್ಯಾಸಕರಾಗಿಯೂ ಹಾಗೂ ಹಲವು ಕಾಲ ಪ್ರಾಂಶುಪಾಲರೂ ಆಗಿ ಸೇವೆ ಸಲ್ಲಿಸಿದ್ದಾರೆ. ಕಲಾಶಾಲೆಯಲ್ಲಿ ಕಾರ್ಯ ನಿರ್ವಹಿಸಿದ್ದೇ ಅಲ್ಲದೇ ತಮ್ಮದೇ ಆದ ವಿಭಿನ್ನ ರೀತಿಯ ಕಲಾ ಜೀವನವನ್ನೂ ಕಟ್ಟಿಕೊಂಡರು. ಹಲವಾರು ವಿದ್ಯಾರ್ಥಿಗಳಿಗೆ ಚಿತ್ರಕಲೆಯನ್ನು ಕಲಿಸಿ. ಅದರೊಟ್ಟಿಗೆ ತಾವೂ ಈ ಕಲಾಕ್ಷೇತ್ರದಲ್ಲಿ ಹಲವಾರು ರೀತಿಯ ಪ್ರಯೋಗಗಳನ್ನು ಮಾಡಿದರು. ವಿದ್ಯಾರ್ಥಿಗಳೊಂದಿಗೆ ವಿದ್ಯಾರ್ಥಿಯಾಗಿ ಬೆರೆತು ಮೇರುಮಟ್ಟದ ಕಲಾಕೃತಿಗಳನ್ನು ರಚಿಸುತ್ತಾ ಬಂದಿದ್ದಾರೆ. ಮಣಿ ಅವರು ವಿದ್ಯಾರ್ಥಿಗಳೊಂದಿಗೆ ಗೆಳೆಯರಂತೆ ವರ್ತಿಸುತ್ತಾ ದಿನವಿಡಿ ಚಿತ್ರ ರಚನೆಯ ಪ್ರಾತ್ಯಕ್ಷಿಕೆಗಳನ್ನು ಕೊಡುತ್ತಿದ್ದದ್ದು ಇವರ ವಿಶೇಷತೆಯಾಗಿದೆ.

ಅದರೊಟ್ಟಿಗೆ ಗ್ರಾಮೀಣ ಭಾಗದಿಂದ ಬಡತನದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಶ್ರಮ ವಹಿಸಿ ಕಲೆಯನ್ನು ಹೇಳಿಕೊಟ್ಟದ್ದು ಕೂಡ ಇವರ ವಿಶೇಷ ಗುಣ ಎನ್ನುವುದು ಇವರಲ್ಲಿ ಕಲಿತು ಬೆಳಕಿಗೆ ಬಂದು ವಿದ್ಯಾರ್ಥಿ ಸಮೂಹದ ಅಕ್ಕರೆಯ ಮಾತಾಗಿದೆ.

    

ಕೆನ್ ಕಲಾಶಾಲೆಯ ಪ್ರತಿಭೆ

`ಗುರುಗಳೂ ಹಾಗೂ ನಾಡಿನ ಖ್ಯಾತ ಚಿತ್ರಕಲಾವಿದರಾಗಿದ್ದ ಹಡಪದ್ ಅವರ ಈ ಶಾಲೆಯು ನಾಡಿನಲ್ಲಿಯೇ ಅಲ್ಲದೇ ದೇಶ-ವಿದೇಶಗಳಲ್ಲಿಯೂ ಪ್ರಖ್ಯಾತಿಯನ್ನು ಪಡೆದಂತಹ ಕಲಾಶಾಲೆಯಾಗಿದೆ. ಅಲ್ಲದೇ ನನ್ನ ಕಲಾ ಜೀವನದ ಪಯಣದಲ್ಲಿ ಕೆನ್ ಕಲಾಶಾಲೆಯನ್ನೂ ಹಾಗೂ ಕಲಾ ಶಾಲೆಯ ಸಂಸ್ಥಾಪಕರಾದ ಆರ್. ಎಂ. ಹಡಪದ್ ಅವರನ್ನೂ ಎಂದೂ ಮರೆಯಲಾಗದು. ಅವರ ದಾರಿಯಲ್ಲಿ ನಡೆಯುತ್ತಿದ್ದೇನೆ. ಈ ನನ್ನ ಎಲ್ಲಾ ಬೆಳವಣಿಗೆಗೂ ಗುರುಗಳಾದ ಹಡಪದ್ ಮಾಸ್ಟರ್ ಅವರೇ ಕಾರಣ’ ಎಂಬ ವಿನಮ್ರ ಭಾವವನ್ನು ಮಣಿ ಅವರು ಹೊಂದಿದ್ದಾರೆ.

ಈ ಚಿಕ್ಕ ಶಾಲೆಯಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರನ್ನು ಹುಟ್ಟು ಹಾಕಿದ ಕಾರ್ಯದಲ್ಲಿ ತಮ್ಮದೂ ಒಂದು ಭಾಗವಿದೆ ಎನ್ನುವುದೇ ಇವರ ಹೆಮ್ಮೆಯ ಸಂಗತಿ. ಕಲೆಯನ್ನೇ ಆಶ್ರಯಿಸಿದ್ದ ನಮ್ಮಂಥವರು ದೇಶವಿದೇಶಗಳ ಪ್ರವಾಸ ಮಾಡುವಷ್ಟು ಎತ್ತರಕ್ಕೆ ಕೊಂಡೊಯ್ದಿದೆ ಎನ್ನುವ ಅಭಿಮಾನವೂ ಪ್ರೇಮ ಭಾವವೂ ಮಣಿ ಅವರಲ್ಲಿದೆ.

ಶಿಷ್ಯಂಗೆ ಗುರುವಿನ ಪ್ರಶಸ್ತಿ

ಗುರು ಆರ್ ಎಂ ಹಡಪದ್ ಅವರ ಹೆಸರಲ್ಲಿ ಕೊಡುವ ಪ್ರಶಸ್ತಿಗೂ ಪಾತ್ರರಾಗಿದ್ದಾರಲ್ಲದೇ ಮೂಡುಬಿದರೆಯ ಆಳ್ವಾಸ್ `ಚಿತ್ರ ಸಿರಿ’ಯ ಪ್ರಶಸ್ತಿಯ ಗರಿಯೂ ಇವರ ಮುಡಿಗೇರಿದೆ. `ನನ್ನನ್ನು ಒಬ್ಬ ಕಲಾವಿದನೆಂದು ಗುರ್ತಿಸಿರುವುದೇ ನನ್ನ ಜನ, ನನ್ನ ನಾಡು ನನಗೆ ಕೊಟ್ಟ ಬಳುವಳಿ’ ಎನ್ನುತ್ತಾರೆ.

`ಹಲವು ದೇಶಗಳ ಪರ್ಯಟನೆ ಮಾಡಿದಾಗಲೂ ನನ್ನ ಭಾರತ, ಕರ್ನಾಟಕ, ಬೆಂಗಳೂರು ಚೆನ್ನ ಅದರಲ್ಲೂ ನನ್ನ ವಾಸಸ್ಥಾನ ಶ್ರೀರಾಂಪುರ ಕಾಡದೇ ಇರಲಿಲ್ಲ’ ಎನ್ನುತ್ತಾರೆ. ಈ ಮಾತು ಮಣ್ಣಿನ ವಾಸನೆ ಕಾವ್ಯದಲ್ಲಷ್ಟೆ ಅಲ್ಲ ಕಲೆಯಲ್ಲೂ ಪಸರಿಸಿದೆ ಎಂಬುದಕ್ಕೆ ಸಾಕ್ಷಿಯಂತಿದೆ.

 

 

 

 

‍ಲೇಖಕರು avadhi

January 5, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: