ಕಲಾಗ್ರಾಮದಲ್ಲಿ ‘#36 ಸತಿ ಸಾವಿತ್ರಿ ನಿವಾಸ’

#36 ಸತಿ ಸಾವಿತ್ರಿ ನಿವಾಸ, ಈ ಹೊಸ ಕನ್ನಡ ನಾಟಕ, ಧೀಮಹಿ ತಂಟದವರ ಹೊಸ ಪ್ರಸ್ತುತಿ. ಈ ನಗೆಯ ಹೊನಲು, ಇದೇ ಭಾನುವಾರ, ಫೆಬ್ರವರಿ 26 ರಂದು, ಕಲಾಗ್ರಾಮದಲ್ಲಿ ಮೊದಲ ಬಾರಿಗೆ, ಪ್ರದರ್ಶನ ಸಂಜೆ 7:15 ಕ್ಕೆ, ವೇದಿಕೆಯ ಮೇಲೆ ಪ್ರಸ್ತುತಗೊಳ್ಳಲಿದೆ! ಕಾರ್ತಿಕ್ ಹೆಬ್ಬಾರ್ ರಚಿಸಿ, ನಿರ್ದೇಶಿಸಿರುವ ಈ ನಾಟಕ ಮಧ್ಯಮವರ್ಗದ ಮೂವರು ಮಹಿಳೆಯೆರ ಜೀವನ ಗಾಥೆಯಾಗಿದೆ. ಅವರು ಅನುಭವಿಸುವ ನೋವು, ದುಃಖ, ಒಂಟಿತನ ಮತ್ತು ಭಗಿನಿ ಬಂಧುತ್ವದ ಕುರಿತಾಗಿದೆ. ಈ ನಾಟಕದಲ್ಲಿ ಹಾಸ್ಯ, ಸಂಗೀತ ಮತ್ತು ನೃತ್ಯವೂ ಇದ್ದು, ಇದರಲ್ಲಿ ಈ ಮಧ್ಯಮವರ್ಗದ ಹೆಣ್ಣು ಮಕ್ಕಳ ಜೀವನದ ಮುಖ್ಯಭಾಗವಾಗಿರುವ ಧಾರಾವಾಹಿ ಹಾಗೂ ಚಲನಚಿತ್ರಗಳಿಗೂ ಮುಖ್ಯ ಪಾತ್ರವಿದೆ. ಇಂಥಾ ಕಥೆಗಳು ಸ್ಟೀರಿಯೋಟೈಪ್ ಗಳಿಗೆ ಇಳಿಸಬಹುದಾದಂಥಾ ಕಥಾ ಹಂದರವನ್ನು ಅದರಿಂದಾಚೆಗೊಯ್ಯುವ ಪ್ರಯತ್ನವನ್ನು ಈ ನಾಟಕ ಮಾಡುತ್ತದೆ. ಈ ಕಥೆಯಲ್ಲಿ ಯಾರೂ ಬಲಿಪಶುಗಳಿಲ್ಲಾ! ಎಲ್ಲಾ ಪತ್ರಗಳೂ ತಮ್ಮ ಕಥೆಯನ್ನು ತಮ್ಮ ಹಿಡಿತದಲ್ಲೇ ಇಟ್ಟುಕೊಳ್ಳುತ್ತವೆ.

ಖ್ಯಾತ ಅಭಿನೇತ್ರಿಗಳಾದ ಡಾ ಸೀತಾ ಕೋಟೆ, ದೀಪಿಕಾ ಆರಾಧ್ಯ, ಯೆಶಸ್ವಿನಿ, ದಿವ್ಯಶ್ರೀ ಗ್ರಾಮ, ರೋಹಿತ್ ಮುಂತಾದವರು ನಟಿಸಿರುವ ಈ ನಾಟಕದಲ್ಲಿ, ಖ್ಯಾತ ಹಿನ್ನಲೆ ಗಾಯಕರಾದ ಮಾಧುರಿ ಸೇಷಾದ್ರಿ, ದರ್ಶನ್ ನಾರಾಯಣ್, ಪ್ರತೀಕ್ಷಾ ಮುಂತಾದವರೂ ಸೇರಿದಂತೆ, ವಿಶಾಕ್, ಸೌಮ್ಯ, ಚೇತನಾ, ಅಜಯ್ ಕಿಣಿ ಮುಂತಾದವರೂ ಕಾಣಿಸಿಕೊಳ್ಳಲಿದ್ದಾರೆ. ಬೆಳಕಿನ ವಿನ್ಯಾಸ ಎಮ್ ಜಿ ನವಿನ್ ನರಸಿಂಹ ಇವರು ಮಾಡಿದ್ದು, ಬೆಳಕಿನ ನಿರ್ವಹಣೆನ್ನು ಅರುಣ್ ಡಿ ಟಿ ಯವರು ಮಾಡಲಿದ್ದಾರೆ.

36 ಸತಿ ಸಾವಿತ್ರಿ ನಿವಾಸ, ಮೂವರು ಮಧ್ಯಮ ವರ್ಗದ ಮಹಿಳೆಯರ ಸಾಮಾನ್ಯ ಕಥೆ. ಈ ಮೂವರು ಮಹಿಳೆಯರ ಜೀವನದಲ್ಲಿ ಪ್ರಶ್ನೆಯಾಗಿ ಬರುವಂತಹ ಒಂದು ವಿಶೇಷ ಸನ್ನಿವೇಶವನ್ನು ಅವರು ಎದುರಿಸುವ ಬಗೆ ಹಾಗೂ ತನ್ಮೂಲಕ ಕಂಡುಕೊಳ್ಳುವ ಹೊಸ ಅರ್ಥಗಳ, ಸ್ನೇಹದ ಹಾಗೂ ಮೈತ್ರಿಯ ಕಥೆಯನ್ನು ಈ ನಾಟಕ ಹಿಡಿದಿಡುತ್ತದೆ. ಈ ನಾಟಕ ಮಹಿಳೆಯರ ಜೀವನೋತ್ಸಾಹ, ಸಿಸ್ಟರ್ಹುಡ್ (ಭಗಿನಿ ಬಂಧುತ್ವ), ಮುಪ್ಪು, ಒಂಟಿತನ ಮುಂತಾದ ಎಲ್ಲಾ ಭಾವಗಳ ಒಂದು ಕಾಮನಬಿಲ್ಲಾಗಿ ನಿಲ್ಲುತ್ತದೆ.

ಮಧ್ಯಮ ವರ್ಗದ ಒಂದು ಕಟ್ಟಡದಲ್ಲಿ ವಾಸವಾಗಿರುವ ಮಹಿಳೆಯರ ಜೀವನಕ್ಕೆ ಇದ್ದಕ್ಕಿದ್ದಂತೆ ಪ್ರವೇಶ ಮಾಡುವ ಒಂದು ವಿಶೇಷ ವ್ಯಕ್ತಿಯಿಂದಾಗಿ ಅವರ ಜೀವನದಲ್ಲಾಗುವ ಪರಿವರ್ತನೆ ಹಾಗೂ ಅವರು ಎದುರಿಸುವ ಪ್ರಶ್ನೆಗಳ ಕಥೆ ಇದಾಗಿರುತ್ತದೆ. ಈ ಮಹಿಳೆಯರ ಜೀವನದ ಸುಖ, ದುಃಖ ಅಲ್ಲದೆ ಅತಿರೇಕಗಳಂತೆ ಅವರನ್ನು ಆವರಿಸಿರುವ ಧಾರವಾಹಿ ಹಾಗೂ ಸಿನಿಮಾಗಳನ್ನೂ ಕೂಡ ಈ ನಾಟಕ ಚಿತ್ರಿಸುತ್ತದೆ. ಇಲ್ಲಿ ಸಂಗೀತವಿದೆ, ಸ್ವಲ್ಪ ನಾಟ್ಯವೂ ಇದೆ, ಪ್ರೇಮವೂ ಇದೆ, ಒಡನಾಟವೂ ಇದೆ! ಎಲ್ಲದಕ್ಕಿಂತ ಹೆಚ್ಚು ನಗು ಹಾಗು ಹುಚ್ಚುತನವಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೋರಾಡಿ, ಸೋತು-ಗೆದ್ದು, ಸದಾ ಜೀವನೋತ್ಸಾಹ ಹಾಗೂ ಭರವಸೆಯ ದೀಪವನ್ನು ಹಿಡಿದು ನಿಂತಿರುವ ಮಹಿಳೆಯರಿಗೆ ಈ ನಾಟಕವನ್ನು ನಾವು ಅರ್ಪಿಸುತ್ತೇವೆ.

-ಕಾರ್ತಿಕ್ ಹೆಬ್ಬಾರ್

‍ಲೇಖಕರು avadhi

February 24, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: