ಕರ್ನಾಟಕ = ನಾರಿಮನ್ ಅಲ್ಲ!

rajaram tallur low res profile

ರಾಜಾರಾಂ ತಲ್ಲೂರು

ವಕೀಲರು ಎಂದರೆ ನ್ಯಾಯಾಲಯದಲ್ಲಿ ಹೋರಾಡಿ ನ್ಯಾಯ “ಗೆದ್ದು” ಕೊಡುವವರು ಎಂಬುದು ತಪ್ಪು ಕಲ್ಪನೆ. ವಕೀಲರ ಕೆಲಸ ಇರುವುದು ಅವರ ಕಕ್ಷಿದಾರರ ಕೇಸನ್ನು ಕಾನೂನಿನ ಭಾಷೆಯಲ್ಲಿ ನ್ಯಾಯಾಲಯದ ಮುಂದೆ ಇಟ್ಟು, ಕಾನೂನಿನ ಪ್ರಕಾರ ಅದು ಹೇಗೆ ನ್ಯಾಯಬದ್ಧ ಎಂದು ವಿವರಿಸುವುದು. ಈ ಕೆಲಸವನ್ನು ಕಾವೇರಿ ವಿವಾದದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ವಕೀಲರಲ್ಲಿ ಹಿರಿಯರಾದ ಪಾಲಿ ಎಸ್. ನಾರಿಮನ್ ಶಿಸ್ತುಬದ್ಧವಾಗಿಯೇ ಮಾಡಿದ್ದಾರೆ.

avadhi-column-tallur-verti- low res- cropಆದರೆ, ಈಗ ಕೊನೆಯ ಕ್ಷಣದಲ್ಲಿ ನಾರಿಮನ್ ಅವರೇ ಕರ್ನಾಟಕಕ್ಕೆ ಕೈಕೊಟ್ಟರು ಎಂಬ ಅಪವಾದ – ರಾಜ್ಯಸರ್ಕಾರ ವಕೀಲರನ್ನು ಬದಲಿಸಬೇಕಿತ್ತು ಎಂಬ ಪ್ರತಿವಾದ ಹೊರಟಿರುವುದು ಕೇವಲ ರಾಜಕೀಯ ಕಾರಣಗಳಿಗಾಗಿ ಅನ್ನಿಸುತ್ತದೆ. ಅದಕ್ಕೆ ನನಗೆ ತೋಚಿದ ಕಾರಣಗಳು ಇಲ್ಲಿವೆ:

೧. ರಾಜ್ಯ ವಿಧಾನಮಂಡಲವು ಕೈಗೊಂಡಿರುವ ಸರ್ವಾನುಮತದ ನಿರ್ಣಯ – “ಕಾವೇರಿ ನೀರನ್ನು ಕುಡಿಯುವುದಕ್ಕಾಗಿ ಮಾತ್ರ ಬಳಸುತ್ತೇವೆ” ಎಂಬುದು ಸುಪ್ರೀಂ ಕೋರ್ಟು ನಮಗೆ ಕೊಡುತ್ತಾ ಬಂದಿರುವ ವ್ಯತಿರಿಕ್ತ ತೀರ್ಪುಗಳ ಸ್ಪಷ್ಟ ಉಲ್ಲಂಘನೆ ಎಂದು ಗೊತ್ತಿದ್ದೂ, ರಾಜ್ಯದ ಹಿತಾಸಕ್ತಿ ಉಳಿಸುವುದಕ್ಕೋಸ್ಕರ ತೆಗೆದುಕೊಂಡಿರುವ  ಸರ್ವಾನುಮತದನಿರ್ಧಾರ. ಕೋರ್ಟಿಗೆ ನಾರಿಮನ್ ಅವರು ನಾವು ಇಂತಹ ಕಾಯಿದೆಯ ಇಂತಹ ವಿಧಿಯನ್ವಯ “ಸುಪ್ರೀಂ ಕೋರ್ಟಿನ ತೀರ್ಪನ್ನು ಉಲ್ಲಂಘಿಸುತ್ತಿದ್ದೇವೆ” ಎಂದು ಹೇಳಲು ಸಾಧ್ಯವಿದೆಯೆ? ಹೆಚ್ಚೆಂದರೆ, ಅವರು ಶಾಸಕಾಂಗದ ನಿರ್ಧಾರವನ್ನು ಲಿಖಿತರೂಪದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿ, ಬಿಡಲು ನೀರಿಲ್ಲದಿರುವುದರಿಂದ ಬಿಡುತ್ತಿಲ್ಲ ಎಂದು ಹೇಳಬಹುದಿತ್ತು; ಆ ಕೆಲಸವನ್ನವರು ಮಾಡಿದ್ದಾರೆ (ಅವರ ಪತ್ರ ನೋಡಿ).

೨. ಈ ಹಿಂದಿನ ವಿಚಾರಣೆಗಳ ವೇಳೆ ನಾರಿಮನ್ ಅವರು ರಾಜ್ಯದಲ್ಲಿ ಕೊಡಲು ನೀರಿಲ್ಲದ ವಿಚಾರವನ್ನು ಗಟ್ಟಿ ದನಿಯಲ್ಲಿ ಹೇಳುತ್ತಲೇ ಬಂದಿದ್ದಾರಾದರೂ, ಕೋರ್ಟು ಅದನ್ನು ಪರಿಗಣಿಸದೇ ನೀರು ಬಿಡಬೇಕೆಂದೇ ಆದೇಶ ಕೊಡುತ್ತಾ ಬಂದಿದೆ. ನ್ಯಾಯಾಂಗದ ಭಾಗವಾಗಿ ಒಬ್ಬ ವಕೀಲರು ಇದಕ್ಕಿಂತ ಹೆಚ್ಚಿನದೇನನ್ನಾದರೂ ಮಾಡಬಹುದೆಂದು ನನಗನ್ನಿಸುವುದಿಲ್ಲ.

೩. ರಾಜ್ಯವನ್ನು ಕಾವೇರಿ ವಿಚಾರದಲ್ಲಿ ಪ್ರತಿನಿಧಿಸುತ್ತಿರುವುದು ಕೇವಲ ನಾರಿಮನ್ ಒಬ್ಬರಲ್ಲ. ಸುಮಾರು — ಮಂದಿವಕೀಲರು ಈ ಪ್ರಕರಣದಲ್ಲಿ ಕರ್ನಾಟಕದ ಪರವಾಗಿ ಜಂಟಿ ವಕಾಲತು ಹಾಕಿದ್ದಾರೆ (ಪಟ್ಟಿ ನೋಡಿ). ರಾಜ್ಯ ಸರ್ಕಾರಬೇರೆ ವಕೀಲರನ್ನು ನೇಮಿಸಬೇಕಿತ್ತು ಎಂಬ ವಾದದಲ್ಲಿ ಹುರುಳಿಲ್ಲ. ಯಾಕೆಂದರೆ, ಅಂತಹ ವಕೀಲರು ಈಗಾಗಲೇ ಆ ತಂಡದಲ್ಲಿ ಇದ್ದಾರೆ. ಆದರೆ, ಯಾವುದೇ ವಕೀಲರು ಈ ಹಂತದಲ್ಲಿ ನ್ಯಾಯಾಲಯದೆದುರು ಕಾನೂನುಬದ್ಧವಾಗಿ ಏನನ್ನೂ ಹೇಳುವುದು ಕಷ್ಟ.

೪. ತ್ರಿಸದಸ್ಯ ಪೀಠದೆದುರು ಕರ್ನಾಟಕದ ಅರ್ಜಿಯೊಂದು (ಟ್ರಿಬ್ಯುನಲ್ ಅಂತಿಮ ತೀರ್ಪು ನಮಗೆ ಅನ್ಯಾಯ ಮಾಡಿದೆ ಹಾಗಾಗಿ ಮರುಪರಿಶೀಲಿಸಿ ಎಂದು) ವಿಚಾರಣೆಗೆ ಬಾಕಿ ಇರುವಾಗ, ಇಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವ ಬಗ್ಗೆ ನಮ್ಮ ವಿರೋಧವನ್ನು ಈಗಾಗಲೇ ಲಿಖಿತವಾಗಿ ಸಲ್ಲಿಸಿರುವಾಗಲೂ, ಅದನ್ನು ನ್ಯಾಯಾಲಯ ನಿರ್ಲಕ್ಷಿಸಿದೆ. ಈ ನಿಟ್ಟಿನಲ್ಲೂ ವಕೀಲರ ತಂಡವನ್ನು ದೂರುವಂತಿಲ್ಲ.

cauvery೫. ನ್ಯಾಯಾಲಯದ ತೀರ್ಪು ಈ ಪ್ರಕರಣದಲ್ಲಿ ನೀರು ಬಿಡಬೇಕೆಂದೇ ಬರುವುದು ಅನಿವಾರ್ಯ. ಏಕೆಂದರೆ, ಇಡಿಯ ಪ್ರಕರಣವನ್ನು ಗ್ರಹಿಸುವ ವ್ಯಾಪ್ತಿ ಅದಕ್ಕಿಲ್ಲ. ಅದು ಏನಿದ್ದರೂ ಟ್ರಿಬ್ಯುನಲ್ ಅಂತಿಮ ತೀರ್ಪಿನ ಪಾಲನೆ ಆಗುವಂತೆ ನೋಡಿಕೊಳ್ಳುವ ವ್ಯಾಪ್ತಿಯನ್ನು ಮಾತ್ರ ಹೊಂದಿದೆ. ಅಲ್ಲಿ ಕೊಡಲು ನೀರಿಲ್ಲ ಎಂಬುದನ್ನು ಹೇಳಿದರೂ ಇರುವುದರಲ್ಲಿ ಪಾಲು ಮಾಡಿಕೊಳ್ಳಲು ಒತ್ತಾಯಿಸುತ್ತಿದೆ. ಇದಕ್ಕೆ ಕಾರಣ ಅಂತರ್ ರಾಜ್ಯ ಜಲವಿವಾದ ಕಾಯಿದೆಯಲ್ಲಿರುವ ಮತ್ತು ಆ ಮೂಲಕ ಟ್ರಿಬ್ಯುನಲ್ ಅಂತಿಮ ತೀರ್ಪಿನಲ್ಲಿ ನುಸುಳಿರುವ ಲೋಪವೇ ಹೊರತು ಸದ್ಯದ ಕಾನೂನು ತಂಡದ ಲೋಪ ಆಗಿರಲಾರದು.

೬. ಆದರೆ ಇದೇ ಮಾತನ್ನು ನ್ಯಾಯಪೀಠದ ವಿಚಾರದಲ್ಲಿ ಹೇಳಲಾಗದು. ಯಾಕೆಂದರೆ, ಮೊದಲನೆಯದಾಗಿ, ಪೀಠಾಸೀನ ನ್ಯಾಯಮೂರ್ತಿಗಳಲ್ಲೊಬ್ಬರು ಈ ಹಿಂದೆ ಜಯಲಲಿತಾ ಅವರ ಖಾಸಗಿ ವಕೀಲರಾಗಿದ್ದರು ಎಂಬ ವಿಚಾರ, ನೀರಿನ ವಿಚಾರ ವಿಶ್ಲೇಷಣೆ ಮಾಡುವ ತಂಡದ ಮುಖ್ಯಸ್ಥರಾದ ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿಗಳು ತಮಿಳುನಾಡು ಕೆಡೇರ್ ಅಧಿಕಾರಿ ಎಂಬ ವಿಚಾರ ಹಾಗೂ ಕೊನೆಯದಾಗಿ, ಕಾವೇರಿ ನಿರ್ವಹಣಾ ಮಂಡಳಿ ರಚಿಸಲು ಅದಕ್ಕೆ ಸಂಸತ್ತಿನ ಎರಡೂ ಸದನಗಳ ಅನುಮತಿ ಬೇಕು ಎಂಬ ವಿಚಾರ ಕಾನೂನಿನಲ್ಲಿ ಸ್ಪಷ್ಟವಾಗಿದ್ದರೂ, ಅದನ್ನು ನಾಲ್ಕೇ ದಿನಗಳಲ್ಲಿ ರಚಿಸಲು ಒಪ್ಪಿಕೊಂಡ ಅಟಾರ್ನಿ ಜನರಲ್ ಮುಕಿಲ್ ರೋಹಟ್ಗಿ ಅವರ ನಿಲುವು ಮತ್ತು ನ್ಯಾಯಾಲಯದ ನಿಲುವುಗಳನ್ನು ಕಾನೂನಿನ ವ್ಯಾಪ್ತಿಯೊಳಗೂ ಒಪ್ಪಿಕೊಳ್ಳುವುದು ಕಷ್ಟ.

೭. ಒಟ್ಟಿನಲ್ಲಿ, ಒಕ್ಕೂಟ ವ್ಯವಸ್ಥೆಯ ಒಳಗೆ ನ್ಯಾಯಾಂಗ ಶಾಸಕಾಂಗಗಳ ವ್ಯಾಪ್ತಿಯನ್ನು ಇನ್ನಷ್ಟು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ, ಹಾಗೂ ಆ ಮೂಲಕ ಭಾರತದ ಒಕ್ಕೂಟ ವ್ಯವಸ್ಥೆ ಇನ್ನಷ್ಟು ಆರೋಗ್ಯಕರಗೊಳಿಸುವ ನಿಟ್ಟಿನಲ್ಲಿ, ನ್ಯಾಯಾಂಗವನ್ನು ಶುದ್ಧೀಕರಿಸುವ ನಿಟ್ಟಿನಲ್ಲಿ ಈ ಪ್ರಕರಣ ಮೈಲಿಗಲ್ಲಾಗಲಿದೆ.  ಕರ್ನಾಟಕದ ಈಗಿನ ನಿಲುವು ಅಂತಿಮವಾಗಿ ಬಹಳ ಪ್ರಜಾತಾಂತ್ರಿಕ ನಿಲುವು ಎಂದು ಸಾಬೀತಾಗಲಿದೆ ಎಂದು ಆಶಯ

adv1 adv2 fali

‍ಲೇಖಕರು Admin

October 1, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. Venugopal

    ಒಂದೇ ಪ್ರಶ್ನೆ: ಕಾವೇರಿ ನಿರ್ವಹಣಾ ಮಂಡಳಿ ರಚಿಸುವ ಬಗ್ಗೆ ಏನೊಂದೂ ಮಾತನಾಡದೇ ನೆನ್ನೆ ಸುಮ್ಮನೆ ಕುಳಿತಿದ್ದು ಸರಿಯೇ.

    ಮಂಡಳಿ ರಚಿಸಲು ಕೋರಿ ತಮಿಳುನಾಡು ೨೦೧೩ ರಲ್ಲಿ ಹಾಕಿದ್ದ I.A.7 ನ್ನು ಮೂರು ನ್ಯಾಯಾಧೀಶರ ಪೀಠ ತಿರಸ್ಕರಿಸಿತ್ತು.( ಮೂಲ ಅವಾರ್ಡ್ ಪ್ರಶ್ನಿತವಾಗಿದ್ದು ಆ ಅವಾರ್ಡ್ ನ್ನು ಜಾರಿ ಮಾಡಬೇಕಾದ ಮಂಡಳಿಯ ರಚನೆಯೂ ಅಂತಿಮ ಆದೇಶದಲ್ಲಿ ಪರಿಗಣಿಸಬೇಕಾಗಿದೆ ಎಂಬ ಕಾರಣ ನೀಡಿ).

    ಈ ಸಂಗತಿಯನ್ನು ನೆನ್ನೆ ನ್ಯಾಯಾಲಯದ ಗಮನಕ್ಕೆ ಏಕೆ ತರಲಿಲ್ಲ..

    ಪ್ರತಿಕ್ರಿಯೆ
  2. Rajaram Tallur

    ಪ್ರಿಯ ವೇಣುಗೋಪಾಲ್ ಅವರೆ, ನಾನು ಗಮನಿಸಿದಂತೆ 20-09-2016ರಂದು ಈ ಬಗ್ಗೆ ಪರ-ವಿರುದ್ಧ ವಾದಗಳು ನಡೆದು, ಕೇಂದ್ರ ಸರ್ಕಾರಕ್ಕೆ ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೋರ್ಟು ಆದೇಶ ನೀಡಿಯಾಗಿದೆ. ಆ ದಿನ ನಾರಿಮನ್ ತಂಡ ಅದನ್ನು ವಿರೋಧಿಸಿದೆ ಎಂದು ನನ್ನ ನೆನಪು. ನಿನ್ನೆ (30-09-2016) ನ್ಯಾಯಾಲಯ ಆ ಬಗ್ಗೆ ಅಟಾರ್ನಿ ಜನರಲ್ ಅವರಲ್ಲಿ ಫಾಲೊಅಪ್ ಕೇಳಿದೆ, ಅವರು 4ನೇ ತಾರೀಕಿನೊಳಗೆ ಆಗುತ್ತದೆ ಎಂದು ಹೇಳಿದ್ದಾರೆ. ಇದು ತೀರ್ಪಿನ ಪ್ರತಿ ಓದಿ ನಾನು ಅರ್ಥ ಮಾಡಿಕೊಂಡದ್ದು (ಆಸಕ್ತರಿಗೆ ತೀರ್ಪಿನ ಪ್ರತಿ ಇಲ್ಲಿದೆ: http://supremecourtofindia.nic.in/FileServer/2016-09-30_1475235003.pdf) ತಾವು ಹೇಳಿರುವ ವಿಚಾರಗಳು ಆ ದಿನ ಚರ್ಚೆ ಆಗಿರಬಹುದು – ಖಚಿತವಿಲ್ಲ. ಇನ್ನು ನಿನ್ನೆ ಎರಡೂ ಪಕ್ಷಗಳು ಮಾತಾಡಲು ಏನೂ ಉಳಿದಿಲ್ಲ ಎಂದೇ ನಿಲುವು ತೆಗೆದುಕೊಂಡದ್ದರಿಂದ ನ್ಯಾಯಾಲಯ ಬಹಳ ಚುಟುಕಾಗಿಯೇ ತನ್ನ ಕೆಲಸ ಮುಗಿಸಿದೆ.

    ಪ್ರತಿಕ್ರಿಯೆ
  3. Rajaram Tallur

    ಕಾವೇರಿ ವಿವಾದದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ವಕೀಲರಲ್ಲೊಬ್ಬರಾದ ಶ್ರೀ. ಮೋಹನ್ ಕಾತರಕಿ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಹೀಗೆ ಹೇಳುತ್ತಾರೆ:
    *Professional Responsibilities*
    Every profession has its responsibilities and the code of conduct which must be strictly upheld by a professional.
    A Lawyer as an officer of the court primarily owes his duty to the court to assist in resolving the issues and upholding the majesty of law. Of course, he must equally stand up to. uphold interests of his client.
    In the continuing Cauvery Street Legal, eminent jurist Mr FS Nariman mentioned in his letter to the Chief Minister Siddaramiah, his (including the legal team led by him) professional difficulty in defending (before the SC) the open act of non compliance of the orders of the SC which had directed the release of water to co riparian State of Tamil Nadu. The rationale was, despite all difficulties, the orders of the SC ought to be obeyed and none can tell that I don’t obey the order. No lawyer has a right to defend disobedience, unless the court permits him to defend after taking a prima facie view that non compliance is a bonafide act.
    Siddaramiah having been a lawyer himself (before joining politics) appreciated the balancing act of Mr Nariman. The SC in its order dated 30.09.2016 took note of the letters and appreciated the stand of Mr Nariman as – ‘this behoves the officer of the court in the highest traditions of the “bar”‘
    However, some in the electronic media (TV Channels) in Bangalore questioned the decision of Mr Nariman and the legal team and even went to the extent of telling it is a back stabbing. I am sure these men or women would not have made such senseless statements if they were to have been aware of professional responsibilities of a lawyer. The electronic media which equally has professional responsibility ought to have restrained itself. The TRP is important but ethics are equally important.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: