’ಕರಿ ಮಣ್ಣು ಸಿರಿಗಂಧವು ಕನ್ನಡ…’ – ಗೋಪಾಲ ವಾಜಪೇಯಿ ಬರೀತಾರೆ

ಜೈ ಕನ್ನಡವೆನ್ನಿ…

ಗೋಪಾಲ ವಾಜಪೇಯಿ


ಅರಿಷಿಣ-ಕುಂಕುಮ ಮಂಗಳ ದ್ರವ್ಯ,
ಕನ್ನಡ ಧ್ವಜದ ಶಕ್ತಿಯೆ ದಿವ್ಯ !
ಗಡಿಯಲಿ ಹಾರಲಿ, ಗುಡಿ ಮೇಲೇರಲಿ,
ನುಡಿಯ ಮಹತಿಯನು ಎಲ್ಲೆಡೆ ಸಾರಲಿ
ಜೈ ಕನ್ನಡವೆನ್ನಿ… ಜೈ ಕನ್ನಡವೆನ್ನಿ…
 
ಕರಿ ಮಣ್ಣು ಸಿರಿಗಂಧವು ಕನ್ನಡ,
ಮಲ್ಲಿಗೆ ಸಂಪಿಗೆಯಾ ಘಮ ಕನ್ನಡ,
ಕರಿಗಳ ಬೀಡು, ಕಲಿಗಳ ನಾಡು,
ಪುಣ್ಯಕೋಟಿಯ ಹಾಡಿದು ಕನ್ನಡ… !
ಜೈ ಕನ್ನಡವೆನ್ನಿ… ಜೈ ಕನ್ನಡವೆನ್ನಿ…
 
ಕಣ್ಬಿಡುತಲೆ ಕೇಳಿದ್ದೇ ಕನ್ನಡ,
‘ಬಸವ’ ‘ಕಮಲ’ ಓದಿದ್ದೇ ಕನ್ನಡ,
ನೊಸಲಿಗಿದುವೆ ಸಿಂಗಾರ ಕನ್ನಡ,
ಬದುಕಿಗಿದುವೆ ಬಂಗಾರ ಕನ್ನಡ… !
ಜೈ ಕನ್ನಡವೆನ್ನಿ… ಜೈ ಕನ್ನಡವೆನ್ನಿ…

ಕಬ್ಬಿಗರಿತ್ತಾ ಕಬ್ಬಿನ ರಸವು,
ಶರಣರು ದಯಪಾಲಿಸಿದಾ ಪದವು,
ದಾಸರು ನೀಡಿದ ಕಲ್ಲುಸಕ್ಕರೆ,
ಕನ್ನಡವೆಂಬುದರರ್ಥವೆ ಅಕ್ಕರೆ… !
ಜೈ ಕನ್ನಡವೆನ್ನಿ… ಜೈ ಕನ್ನಡವೆನ್ನಿ…
 
ಸಂತ ಶರೀಫನ ತತ್ವದ ಸೆಳಕು,
ಮಂಕುತಿಮ್ಮನ ಕಗ್ಗದ ಬೆಳಕು,
ಸಾಧನಕೇರಿಯ ಸಾಧು ಮೀಟಿದಾ
ನಾಕು ತಂತಿಯ ನಾದದ ಝಲಕು… !
ಜೈ ಕನ್ನಡವೆನ್ನಿ… ಜೈ ಕನ್ನಡವೆನ್ನಿ…
 
ಕನ್ನಡ ಅಂತಃಕರಣದ ಭಾಷೆ,
ಅಂತರಂಗವನು ಅರಳಿಸೋ ಭಾಷೆ,
ಆತ್ಮವಿಕಾಸವಗೈಯುತ ಎಲ್ಲರ
ಉನ್ನತಿಗೊಯ್ಯೋ ಚಿದ್ಘನ ಭಾಷೆ… !
ಜೈ ಕನ್ನಡವೆನ್ನಿ… ಜೈ ಕನ್ನಡವೆನ್ನಿ…
 
ಸರಳತನದ ಸಂಭಾವಿತ ಭಾಷೆ,
ಕರುಳಿನೊಲವ ಕಕ್ಕುಲತೆಯ ಭಾಷೆ,
ಹೃದಯಕೆ ಹತ್ತಿರವಾಗುತ ಎಲ್ಲರ
ಒಂದಾಗಿಸುವಾ ಚಂದದ ಭಾಷೆ… !
ಜೈ ಕನ್ನಡವೆನ್ನಿ… ಜೈ ಕನ್ನಡವೆನ್ನಿ…
 

‍ಲೇಖಕರು G

November 1, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

23 ಪ್ರತಿಕ್ರಿಯೆಗಳು

  1. Anonymous

    ಸುಂದರ ಕವಿತೆ ಸಾರ್, ಕನ್ನಡದ ಹಿರಿಮೆ ಬಗ್ಗೆ ಸದಾಕಾಲ ನಿಲ್ಲುವ ಕವಿತೆ , ಇದನ್ನು ನನ್ನ ಮುಖಪುಟದಲ್ಲಿ ಹಂಚಿ ಕೊಳ್ಳಲು ಹೆಮ್ಮೆ ಪಡುತ್ತೇನೆ

    ಪ್ರತಿಕ್ರಿಯೆ
  2. balasubrahmanya .k.s.

    ಕನ್ನಡದ ಬಗ್ಗೆ ಸುಂದರ ಕವಿತೆ ಸಾರ್, ಕನ್ನಡ ತಾಯಿಯ ಚಾರಣಕ್ಕೆ ತಮ್ಮ ಅಕ್ಷರಗಳ ಮಾಲೆಯ ಸುಂದರ ಕೊಡುಗೆ , ತುಂಬಾ ಇಷ್ಟ ಆಯ್ತು. ಅಪರೂಪಕ್ಕೆ ಒಂದು ಒಳ್ಳೆಯ ಕವಿತೆ ಓದಿದ ಖುಷಿ ಸಿಕ್ಕಿತು. ನಿಮ್ಮ ಕವಿತೆಯನ್ನು ನನ್ನ ಮುಖಪುಟದಲ್ಲಿ ಹಂಚಿಕೊಳ್ಳಲು ಹೆಮ್ಮೆ ಪಡುತ್ತೇನೆ

    ಪ್ರತಿಕ್ರಿಯೆ
  3. ಅಹಲ್ಯಾ ಬಲ್ಲಾಳ

    ನವೆಂಬರ ೧. “ಕಣ್ ಬಿಡುತಲೇ” ಓದಿದ್ದೇ ಈ ಕವನ. ಇಡೀ ಕನ್ನಡತನಕ್ಕೆ ಒಂದು ಸುತ್ತು ಹಾಕಿ ಬಂದಂತಾಯ್ತು !

    ಪ್ರತಿಕ್ರಿಯೆ
  4. Sandhya, Secunderabad

    Sir – Motta modalu Rajyotsavada Shubhashayagalu. Chandada saalugala kavite – tumba aaptavaagide. Jai Kannada!

    ಪ್ರತಿಕ್ರಿಯೆ
  5. suresh kulkarni

    ಗೋಪಾಲ ಅವರೆ ,ಕವಿತೆ ತುಂಬಾ ಚೆನ್ನಗಿದೆ.. ಸಂತೋಷ ವಾಯಿತು .. ಶುಭಾಶಯಗಳು ..-ಸುರೇಶ್ ಕುಲಕರ್ಣಿ .

    ಪ್ರತಿಕ್ರಿಯೆ
  6. Aasif Kshathriya

    ನಿಜವಾಗಿಯೂ ನಮ್ಮ ಕನ್ನಡ ಭಾಷೆ…
    “ಸಂತ ಶರೀಫನ ತತ್ವದ ಸೆಳಕು, ಮಂಕುತಿಮ್ಮನ ಕಗ್ಗದ ಬೆಳಕು, ಸಾಧನಕೇರಿಯ ಸಾಧು ಮೀಟಿದಾ
    ನಾಕು ತಂತಿಯ ನಾದದ ಝಲಕು” !!
    ನಿಮ್ಮ ಈ ಕವನ, ತುಂಬಾ ಸೊಗಸಾಗಿ ಮತ್ತು ಮಾರ್ಮಿಕವಾಗಿ ಮೂಡಿ ಬಂದಿದೆ.
    ~ಆಸಿಫ್ ಕ್ಷತ್ರಿಯ

    ಪ್ರತಿಕ್ರಿಯೆ
  7. chetan

    ಭಾಳ್ ಛೊಲೋ ಅದ ಸರ್ ಕವಿತಾ, ಅದರಾಗೂ ಆ “ಸಾಧನಕೇರಿ ಸಾಧು” ಸಾಲಂತೂ ಭಾಳ ಖುಷಿ ಕೊಟ್ತ್ಯು. ನಿಮ್ಮಲ್ಲೆ ನಂದೊಂದು ಭಿನ್ನಹ, ತಾವು ಒಂದ್ ಸಲ ಪುರಸೊತ್ತಿದ್ದಾಗ ನಾನೂ ಬರ್ದಿರೊ ಹಾಡು ನೋಡ್ಬೇಕು , ಅದನ್ನ ತಿದ್ಬೇಕು , ಹಿಂದಕ ಆಸಕ್ತರಿಗೆ ಬೇಂದ್ರೆ ಅಂಥವರು, ಕೃಷ್ಣಶರ್ಮರಂಥವರು ಗುರುಗಳಿದ್ರು ನಮಗ್ಯಾರಿದ್ದಾರ? ನಾವು ತಪ್ಪು ಮಾಡಿದ್ರು ಯಾರು ಹೇಳವರಿಲ್ಲ ಏನರೆ ಛೊಲೊ ಮಾಡಿದ್ರೂ ಬೆನ್ತಟ್ಟೋವ್ರಿಲ್ಲ…ನಾವು ಬರ್ದಿದ್ದ ಹಾಡು ಗೆಳ್ಯಾರಿಗೆ ಹೇಳಿ ಖುಷಿ ಪಡ್ಬೇಕು ಅಷ್ಟSSSSS ಅವರಾದ್ರೂ ಪಾಪ ಕೇಳಿ ವಿಧಿ ಇಲ್ಲಾ ಅಂತ ಕೇಳ್ಬೇಕು…. ದಯಮಾಡಿ ತಾವು ತಮ್ಮ ಗಡಿಬಿಡಿ ಜೀವನ್ದಾಗ ನನಗೊಂದು ಭೆಟ್ಟಿ ಆಗೊ ಅವಕಾಶ ಕೊಡಬೇಕು….ಕೊಡ್ದ ಇದ್ರೂ ಅಡ್ಡಿ ಇಲ್ಲ ಇದ್ದಕೊಂದು ಪ್ರತಿಕ್ರಿಯಾ ಆದ್ರೂ ಮಾಡ್ರಿ… ಕಾಯ್ಲಿಕತ್ತೇನಿ.

    ಪ್ರತಿಕ್ರಿಯೆ
  8. rajkumar

    ಸಂತ ಶರೀಫನ ತತ್ವದ ಸೆಳಕು,
    ಮಂಕುತಿಮ್ಮನ ಕಗ್ಗದ ಬೆಳಕು,
    ಸಾಧನಕೇರಿಯ ಸಾಧು ಮೀಟಿದಾ
    ನಾಕು ತಂತಿಯ ನಾದದ ಝಲಕು… !
    ಜೈ ಕನ್ನಡವೆನ್ನಿ… ಜೈ ಕನ್ನಡವೆನ್ನಿ…
    ನವ ವಸಂತ ಚಿಗುರಿಸೋ ಶುದ್ಧ ಶ್ರಾವಣದಂತ ಹಾಡು…ಧನ್ಯವಾದಗಳು .

    ಪ್ರತಿಕ್ರಿಯೆ
  9. Anil Talikoti

    ಕನ್ನಡಿಗನಾಗಿದ್ದಕ್ಕೆ ಹೆಮ್ಮೆ ಬರುತ್ತದೆ ನಿಮ್ಮ ಕವಿತೆ ಓದಿ.
    -ಅನಿಲ ತಾಳಿಕೋಟಿ

    ಪ್ರತಿಕ್ರಿಯೆ
  10. Dr.D.T.Krishnamurthy.

    ಕನ್ನಡದ ಹಿರಿಮೆ ಮತ್ತು ಗರಿಮೆಯನ್ನು ಸಾರುವ ಸುಂದರ ಕವಿತೆ.ಅಭಿನಂದನೆಗಳು.

    ಪ್ರತಿಕ್ರಿಯೆ
  11. ವಿಠಲ ರಾ ಕುಲಕರ್ಣಿ

    ಜೈ ಕನ್ನಡವೆನ್ನಿ… ಜೈ ಕನ್ನಡವೆನ್ನಿ…
    ಗೋಪಾಲ ವಾಜಪೇಯಿ ಸರ ಮಸ್ತದರಿ! ಭಾಳ ಛೊಲೊ ಅನಸ್ತು…

    ಪ್ರತಿಕ್ರಿಯೆ
  12. sridhar gopalakrishna rao mulabagalಶ್ರೀಧರ್ ಗೋಪಾಲಕೃಷ್ಣರಾವ್ ಮುಳಬಾಗಲು

    ತಾವು ಬರೆದ ನಾಡಗೀತೆ ಸ್ಪಷ್ಟವಾದ,ಸರಳ ಬಾವನೆಯನ್ನು ಸ್ವಚ್ಛ ಶಬ್ದ ಉಚ್ಚಾರಕ್ಕೆ ಮಾಹಿತಿ ಪೂರ್ಣವಾಗಿ ಮೂಡಿಬಂದಿದೆ . ೫೮ ನೆ ಕನ್ನಡ ರಾಜ್ಯೋತ್ಸವಕ್ಕೆ ತಮ್ಮ ಈ ಕೊಡುಗೆ ಅನುಪಮಾವದದು .

    ಪ್ರತಿಕ್ರಿಯೆ
  13. Sripathi manjanabailu

    Chalo hadu brediddiya. Idakke olleya Raga Samyojane Aagabeku. Shubashayagalu.

    ಪ್ರತಿಕ್ರಿಯೆ
  14. Anonymous

    58 ne kannada rajyotsava NAADA GEETE.. geyate iruva geete.. olleya saalugaliruva geete .. kannada hirime -grime galannu nenapisuva geete..
    wov.. adbhuta saalugalu sir.. abhinandanegalu..
    -Mahipalreddy Munnur, gulbarga

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: