ಕರಾವಳಿಯ ಸಾವಿರದೊಂದು ದೈವಗಳು

ಡಾ ಲಕ್ಷ್ಮೀ ಜಿ ಪ್ರಸಾದ

ನನ್ನ ಅಧ್ಯಯನದ ಸಾವಿರದ ಇನ್ನೂರು ದೈವಗಳ ಮಾಹಿತಿ ಇರುವ ಪುಸ್ತಕಕ್ಕೆ ಯಾವ ಹೆಸರಿಡುವುದು ಎಂಬ ಗೊಂದಲ ನನಗಿತ್ತು‌. ಶುರುವಿಗೆ ತುಳುನಾಡಿನ ಸಾವಿರದೊಂದು ದೈವಗಳು ಎಂಬ ಹೆಸರಿರಿಸಿದ್ದೆ. ಆಗ ಕೆಲವರು ಕಾಸರಗೋಡು ಕಣ್ಣಾನ್ನೂರಿನ ದಕ್ಷಿಣ ಭಾಗದ ತೆಯ್ಯಂ / ದೈವಗಳು, ಕುಂದಾಪುರ ಬಾರಕೂರು ಕಾರವಾರ ಪರಿಸರದ ದೈವಗಳು, ಕೊಡವ ಪರಿಸರದ ಪೂದಗಳು ತುಳುನಾಡಿನವರಾ ಎಂದು ಕೇಳಿದ್ದರು‌. ನನಗೂ ಇದು ಹಾಗೆಯೇ ಅನಿಸಿತ್ತು. ಈ ದೈವಗಳ ಮಾಹಿತಿ ನೀಡಿದವರೂ ಇವರನ್ನು ತುಳುನಾಡಿನ ದೈವಗಳೆಂದು ಒಪ್ಪಲು ಸಾಧ್ಯವಿಲ್ಲ ಎಂದಿದ್ದರು.

ಡಾ. ಬಿ ಎ ವಿವೇಕ ದೈವಗಳು ಮಾಡಿದ ದೈವಗಳ ಪಟ್ಟಿಯಲ್ಲಿದ್ದ ಕನ್ನಡ ಮಲೆಯಾಳ ಪರಿಸರದ ದೈವಗಳ ಹೆಸರನ್ನು ಬಿಟ್ಟು ಡಾ.ಚಿನ್ನಪ್ಪ ಗೌಡರು ತುಳುನಾಡಿನ ದೈವಗಳ ಪಟ್ಟಿ ಮಾಡಿದ ಬಗ್ಗೆ ಅವರ ಥೀಸಿಸ್ ನಲ್ಲಿ ಬರೆದಿದ್ದಾರೆ. ಅವರು ಹಾಯ್ಗುಳಿ ಚಿಕ್ಕಮ್ಮ ಮೊದಲಾದ ಕುಂದಾಪುರದ ಕನ್ನಡ ಪರಿಸರದ ದೈವಗಳು ಹಾಗೂ ಭಗವತಿ ವಯನಾಟ್ ಕುಲವನ್, ಕರಿಂತಿರಿ ನಾಯರ್ ಮೊದಲಾದ ಕಾಸರಗೋಡಿನ ಮಲೆಯಾಳ ಪರಿಸರದ ತೆಯ್ಯಂ ಗಳು ತುಳುನಾಡಿನ ದೈವಗಳು ಅಲ್ಲ ಎಂದು ಡಾ.ಚಿನ್ನಪ್ಪ ಗೌಡರು ಅಭಿಪ್ರಾಯ ಪಟ್ಟಿದ್ದರು.

ಹಾಗಾಗಿ ಸೂಕ್ತ ಹೆಸರಿಗಾಗಿ ಯೋಚಿಸುತ್ತಾ ಇದ್ದೆ. ಕಾರವಾರದಿಂದ ಕಣ್ಣನ್ನೂರು ತನಕದ ಕನ್ನಡ ತುಳು ಮಲೆಯಾಳ ಪರಿಸರದಚ ಪ್ರದೇಶಗಳನ್ನು ಒಟ್ಟಾಗಿ ಕರಾವಳಿ ಎಂದು ಹಿಂದಿನಿಂದಲು ಕರೆಯುತ್ತಿದ್ದ ಬಗ್ಗೆ ದಾಖಲೆಗಳು ಸಿಕ್ಕಿದವು. South Canara north Canara (canar ಪದ ಕಿನಾರ/ಸಮುದ್ರ ತೀರ ದಿಂದ ಹುಟ್ಟಿದೆ) ಹಿಂದಿನ ಗಝಟಿಯರ್ ಗಳಲ್ಲಿ, ಇತರ ದಾಖಲೆಗಳಲ್ಲಿ ಈ ಹೆಸರಿದೆ.

ಕೆನರಾ ಪೊಲಿ ಇತ್ಯಾದಿ ಕೃತಿಗಳೂ ಪ್ರಕಟವಾಗಿವೆ. ಕೆನರಾ ಬ್ಯಾಂಕ್ ಕಾಲೆಜುಗಳೂ ಇವೆ. ಇವೆಲ್ಲವೂ ಕರಾವಳಿಯನ್ನೆ ಮೂಲವಾಗಿಟ್ಟುಕೊಂಡವುಗಳು. ಕರಾವಳಿಯ ಭಾಗವಾಗಿ ಉಡುಪಿ ದಕ್ಷಿಣ ಕನ್ನಡ ಗಳನ್ನು ಪರಿಗಣಿಸಿದ್ದರು. ನನ್ನ ಪುಸ್ತಕದಲ್ಲಿ ಕಾರವಾರದಿಂದ ಆರಂಭಿಸಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಸೇರಿದಂತೆ ಕಣ್ಣಾನ್ನೂರು ತನಕದ ಕನ್ನಡ ತುಳು ಮಲೆಯಾಳ ಪರಿಸರದ. ಭಿನ್ನ ಭಿನ್ನ ಸ್ವರೂಪಗಳ ದೈವಗಳ ಮಾಹಿತಿ ಇರುವ ಕಾರಣ ನಾನು ಕರಾವಳಿಯ ಸಾವಿರದೊಂದು ದೈವಗಳು ಎಂಬ ಹೆಸರನ್ನು ಇರಿಸಿದೆ‌. ಈ ಬಗ್ಗೆ ಹಿರಿಯ ವಿದ್ವಾಂಸರಲ್ಲಿ ಅಭಿಪ್ರಾಯ ಕೇಳಿದೆ. ಅವರೂ ಕರಾವಳಿಯ ದೈವಗಳು ಹೆಸರು ಸೂಕ್ತ ಎಂದು ಅಭಿಪ್ರಾಯ ನೀಡಿದರು.

ಆದರೂ ಇತ್ತೀಚೆಗೆ ರಾಜೇಶ್ ಆಳ್ವರು ತುಳುನಾಡಿನ ದೈವಗಳು ಎಂದು ಹೆಸರಿರುವಂತೆ ಸೂಚಿಸಿದರು‌. ತುಳುವಿಗಾಗಿ ಅಪಾರ ಕೆಲಸ ಮಾಡಿದ ಅವರ ಮನವಿಯನ್ನು ನಿರಾಕರಿಸಲಾಗಲಿಲ್ಲ. ಆದರೆ ಇದರಲ್ಲಿ ಕನ್ನಡ ಮಲೆಯಾಳ ಕೊಡವ ಪರಿಸರದ ದೈವಗಳ ಮಾಹಿತಿಯೂ ಇದೆಯಲ್ಲ ಎಂದೆ. ಅದಕ್ಕೆ ಸೂಕ್ತ ಪರಿಹಾರ ಅವರಿಗೂ ಕಾಣಲಿಲ್ಲ.
ಆದರೂ ನಾನು ಬದಲಿಸುವ ಬಗ್ಗೆ ಯೋಚಿಸುತ್ತಾ ಇದ್ದೆ. ಆದರೆ ಹಲವರ ದಬ್ಬಾಳಿಕೆ ನನ್ನ ಅಯ್ಕೆಯ ಹೆಸರನ್ನೇ ಗಟ್ಟಿ ಮಾಡಿತು‌. ದಬ್ಬಾಳಿಕೆಗೆ ಬಗ್ಗ ಬಾರದು ಎಂದು ನಿರ್ಧರಿಸಿದೆ ಹಾಗಾಗಿ ಕರಾವಳಿಯ ಸಾವಿರದೊಂದು ದೈವಗಳು ಎಂಬ ಹೆಸರನ್ನೇ ಅಂತಿಮ ಗೊಳಿಸಿರುವೆ‌.

ಏನು ಮಾಡಿದರೂ ಕುಹಕಿಗಳ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. ತುಳು ನಾಡು ಎಂದಿಟ್ಟಿದ್ದರೆ ಮಲೆಯಾಳದ ತೆಯ್ಯಂಗಳು ಕುಂದಾಪುರ ಕಾರವಾರದ ದೈವಗಳು ಕೊಡವರ ಪೂದಗಳು ತುಳುನಾಡಿನದು ಹೇಗಾಗುತ್ತದೆ? ಬೇರೆಯವರನ್ನು ತುಳು ನಾಡ ದೈವಗಳು ಎಂದು ಅಪಚಾರ ಮಾಡಿದ್ದಾರೆ ಎನ್ನುತ್ತಿದ್ದರು‌. ಈಗ ಕರಾವಳಿ ಎಂದಿಟ್ಟಿದ್ದಕ್ಕೆ ಅಕ್ಷೇಪ ಮಾಡುತ್ತಿದ್ದಾರೆ.

ಎಲ್ಲರನ್ನೂ ಮೆಚ್ಚಿಸಲು ಸಾಧ್ಯವಿಲ್ಲ. ಇನ್ನು ತುಳು ಉದ್ದಾರದ ಮಾತನ್ನಾಡುವವರು, ಸಂಘಗಳು ಯಾವುದೂ ನೆರವಿಗೆ ಬಂದಿಲ್ಲ. ಅವರಾಗಿ ಬೆಂಬಲಿಸಿ ಮುಂಗಡ ಬುಕಿಂಗ್ ಮಾಡಲಿಲ್ಲ‌‌‌. ಗಮನಕ್ಕೆ ಬಂದಿರಲಾರದು ಎಂದು ಭಾವಿಸಿ ನಾನು ಬೆಂಬಲ ಕೋರಿದ್ದರೂ ಒಂದು ತುಳು ಸಂಘಟನೆಯ ಮುಖ್ಯಸ್ಥರು ಮಾತ್ರ ಒಂದು ಪ್ರತಿ ಮುಂಗಡ ಪಾವತಿ ಮಾಡಿದ್ದಾರೆ‌.

ನಮ್ಮಲ್ಲಿ ನಾನಾ ಹೆಸರಿನ ತುಳು ಸಂಘಟನೆಗಳು ಇವೆ‌, ನಾನೂ ಮೆಂಬರ್ ಆಗಿದ್ದೇನೆ.. ಇದರ ಪದಾಧಿಕಾರಿಗಳೂ ನೂರಿನ್ನೂರು ಜನ ಇದ್ದಾರೆ‌. ಇವರ ತುಳು ಪ್ರೇಮ ವೇದಿಕೆಗೆ ಮಾತ್ರ ಸೀಮಿತವೋ ತುಳು ಅಧ್ಯಯನದ ಪುಸ್ರಕ ಖರೀದಿಯಲ್ಲೂ ಇರುತ್ತದಾ ಎಂದು ಮುಂದಿನ ದಿನಗಳಲ್ಲಿ ನನಗೆ ಅರಿವಾಗಬಹುದು‌. ಆಗ ಧನಾತ್ಮಕವಾಗಿದ್ದರೂ ಋಣಾತ್ಮಕವಾಗಿದ್ದರೂ ನನ್ನ ಅನುಭವನ್ನು ಹಂಚಿಕೊಳ್ಳುವೆ. ಇರಲಿ.

ಸಾಕಷ್ಟು ಜನ ಮುಂಗಡ ಪಾವತಿಸಿ ಕಾಯ್ದಿರಿಸಿದ್ದಾರೆ. ಹಾಗಾಗಿ ಈ ಪುಸ್ತಕದ ಮಾರಾಟಕ್ಕೆ ಯಾವುದೇ ಸಮಸ್ಯೆ ಬರಲಾರದು‌. ಈ ಕೊರೋನಾ ಸಂಕಷ್ಟ ಕಾಲದಲ್ಲೂ ತುಂಬಾ ಜನ ಮುಂಗಡ ಪಾವತಿಸಿದ್ದಾರೆ ಎಂಬುದು ಸಂತಸದ ವಿಚಾರ. ಹೆಸರು ಏನೇ ಇದ್ದರೂ ಜನರ ಬಾಯಿಯನ್ನು ಮುಚ್ಚಿಸಲು ಸಾಧ್ಯವಿಲ್ಲ‌‌. ಹಾಗಾಗಿ ಕರಾವಳಿಯ ಸಾವಿರದೊಂದು ದೈವಗಳು ಎಂಬ ಶೀರ್ಷಿಕೆಯೇ ಸೂಕ್ತವಾದ ಕಾರಣ ಅದನ್ನೇ ಗಟ್ಟಿ ಮಾಡಿರುವೆ. ಅದೇ ಹೆಸರಿನಲ್ಲಿ ಪ್ರಕಟವಾಗಲಿದೆ.

ಜನರಿಗೆ ಮಾಹಿತಿ ಬೇಕಾಗಿದೆಯೇ ಹೊರತು ಶೀರ್ಷಿಕೆಯಲ್ಲ‌. ಇನ್ನು ಈ ಬಗ್ಗೆ ತಕರಾರು ತೆಗೆದಷ್ಟೂ ನನಗೇ ಲಾಭ, ಇಂತಹದೊಂದು ಪುಸ್ತಕ ಪ್ರಕಟವಾಗುದು ಹೊರಜಗತ್ತಿಗೆ ತಿಳಿಯುತ್ತದೆ. ಹಾಗಾಗಿ ಈ ಬಗ್ಗೆ ನನಗೆ ಚಿಂತೆ ಇಲ್ಲ.

ಈ ಕೃತಿ ಬೇಕಾದವರು 94805 16684 ಗೆ ವಾಟ್ಸಪ್ ಮಾಡಿ

‍ಲೇಖಕರು Admin

June 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: