ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಪಾಟಿನ ಕಪಟ…

ರಾಘವೇಂದ್ರ ಭೀ ಎ ದ್ರಾಕ್ಷಿ

ಗೆಳೆಯನ ಮದುವೆಯಿತ್ತು
ಒಂದು ಪ್ಯಾಂಟು ತಂದೆ
ಅದು ಹೊಚ್ಚಹೊಸದು
ಹಾಕಿಕೊಂಡು ನೋಡಿದೆ
ಅಳತೆಗಿಂತ ಎಂಟಂಗುಲ ಉದ್ದವಿತ್ತು

ಮನೆಯಲ್ಲೇ ದರ್ಜೆ ಯಂತ್ರವಿತ್ತು
ದರ್ಜೆಯ ಕಾರ್ಯ ನಂಗೊತ್ತಿತ್ತು ಆದರೂ
ಹೆಂಡತಿಯ ಸಹಾಯ ಕೇಳಿದೆ
ಅಡುಗೆ ಮಾಡುವುದಿದೆ
ಸಮಯವಿಲ್ಲ ಏಂದಳು
ಮಗಳಬಳಿ ಹೋದರೆ

ಓದಿನಲ್ಲಿ ನಿರತಳು
ತಾಯಿಯಲ್ಲಿಗೆ ಬಂದೆ
ಸೀರಿಯಲ್ ನಲ್ಲಿ ಬ್ಯೂಜಿಯಾಗಿದ್ದಳು
ಕೊನೆಗೆ ನಾನೆ ಕಮ್ಮಿಮಾಡಿ
ಕಪಾಟಿನೋಳಗಿಟ್ಟೆ, ಮಲಗಿದೆ

ತಾಯಿಗೆ ಕನಿಕರ ಬಂತು
ಸೀರಿಯಲ್ ಬಿಟ್ಟು ಕಪಾಟಿನಲ್ಲಿಗೆ ಬಂದು
ಕೈಯಲ್ಲಿ ಪ್ಯಾಂಟಿಡಿದು ಎಂಟಂಗುಲ ಕತ್ತರಿಸಿಟ್ಟಳು
ಅಡುಗೆ ಮುಗಿದಮೇಲೆ ಕರುಣೆ ಉಕ್ಕಿ
ಹೆಂಡತಿ ಮತ್ತೆ ಎಂಟಂಗುಲ ಕತ್ತರಿಸಿ ಕಪಾಟಿನಲ್ಲಿಟ್ಟಳು
ಓದು ಮುಗಿಸಿದ ಮಗಳಿಗೆ
ಪ್ರವಾಹದಂತೆ ಬಂದ ಅಪ್ಪನ ಮೇಲಿನ ಮಮತೆ
ಕತ್ತರಿಸಿಕೊಂಡಿತು ಪ್ಯಾಂಟು ಮತ್ತೆ ಎಂಟಂಗುಲ

ಬೆಳಿಗ್ಗೆ ಎದ್ದು ನಿತ್ಯಕಾರ್ಯ ಮುಗಿಸಿ
ಪ್ಯಾಂಟು ದರಿಸಿದೆ ಮದುವೆಗೆ ಹೋಗಲು
ದಂಗಾದೆ, ಶಾಕಾದೆ, ಹೌಹಾರಿದೆ
ಪ್ಯಾಂಟಿನ ಸ್ಥಿತಿಯ ಕಂಡು
ಪ್ಯಾಂಟಿನ ಆಕಾರ ನಿಕ್ಕರಾಗಿತ್ತು

ಗುಣಪಾಠ ಹೀಗಿತ್ತು
ಸ್ವಯಂ ತಿಳಿದ ಕಾರ್ಯಕ್ಕೆ
ಇನ್ನೊಬ್ಬರ ಆಶ್ರಯ ಬೇಕೆ…..?

‍ಲೇಖಕರು Admin

18 August, 2022

1 Comment

  1. prathibha nandakumar

    ಇದನ್ನೊಂದು ಒಳ್ಳೇ ಕಿರುಚಿತ್ರ ಮಾಡಬಹುದು!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading