ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕನ್ನಡ ಕೃಷಿ ಪುಸ್ತಕ ಪ್ರಶಸ್ತಿಗೆ ಆಹ್ವಾನ…

ಕನ್ನಡದಲ್ಲಿ ಪ್ರಕಟವಾಗಿರುವ ಕೃಷಿ ಸಂಬಂಧಿತ ಪುಸ್ತಕಗಳಿಗೆ ಕನ್ನಡ ಕೃಷಿ ಪುಸ್ತಕ ಪ್ರಶಸ್ತಿ-2020 ನೀಡುವ ಸಲುವಾಗಿ ಲೇಖಕರಿಂದ 2020ರಲ್ಲಿ ಪ್ರಕಟವಾದ ಪುಸ್ತಕಗಳಿಗೆ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ತೀರ್ಪುಗಾರರು ಆಯ್ಕೆ ಮಾಡುವ ಒಂದು ಅತ್ಯುತ್ತಮ ಕೃತಿಗೆ ಪ್ರಶಸ್ತಿಯನ್ನು ನೀಡಲಾಗುವುದು ಹಾಗೂ ಪ್ರಶಸ್ತಿಯು ರೂ.10,000/- ಗಳ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.

2020ರ ಜನವರಿಯಿಂದ ಡಿಸೆಂಬರ್ 2020ರ ಒಳಗೆ ಪ್ರಕಟವಾಗಿರುವ ಕೃಷಿ ಹಾಗೂ ಸಂಬಂಧಿತ ವಿಷಯಗಳ ಪುಸ್ತಕಗಳ ತಲಾ ಮೂರು ಪ್ರತಿಗಳನ್ನು ಲೇಖಕರು ಲಗತ್ತಿಸಿರುವ ನಿಯಮ ಮತ್ತು ನಿಬಂಧನೆಗಳಿಗೊಳಪಟ್ಟು ಮುಖ್ಯಸ್ಥರು, ಕನ್ನಡ ಅಧ್ಯಯನ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಜೆಕೆವಿಕೆ, ಬೆಂಗಳೂರು-೫೬೦೦೬೫ ಇವರಿಗೆ ತಲುಪುವಂತೆ 2021ರ ಜುಲೈ, 31ರೊಳಗೆ ಕಳುಹಿಸಬೇಕು.

ಈ ಸುತ್ತೋಲೆ ಮತ್ತು ಅರ್ಜಿ ನಮೂನೆ ಹಾಗೂ ನಿಯಮ ನಿಬಂಧನೆಗಳನ್ನು http://uasbangalore.edu.in ವೆಬ್ ತಾಣದಿಂದಲೂ ಪಡೆಯಬಹುದು. ಹೆಚ್ಚಿನ ವಿವರಗಳಿಗೆ kannada.uas@gmail.com ಇ-ಮೇಲ್ ವಿಳಾಸ ಸಂಪರ್ಕಿಸಿ.

‍ಲೇಖಕರು Avadhi

15 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading