'ಕನ್ನಡಿ'ಯು ಬರಿ ಕನ್ನಡಿಯಷ್ಟೆ ಕಣ್ಣೊರೆಸುವುದಿಲ್ಲ!


 
 
 
 
ಭವ್ಯ ಗೌಡ 
 
 
 
 
 
ಏಕಾಂತವೆಂಬುದು
ಚರ್ಮಕ್ಕಂಟಿಕೊಂಡೇ ಹುಟ್ಟಿಬಿಡುತ್ತದೆ,
ಬಿಡದ ಕಾಯಿಲೆಯಂತೆ
ಕಾಡುವ ಖಯಾಲಿಯದಕ್ಕೆ
ಮೊದಲಿನಂತೆ ಎಲ್ಲ
ನೋವುಗಳನ್ನು
ಉಪಚರಿಸಿಕೊಳ್ಳುವ,
ಸಮಾಧಾನಿಸಿಕೊಳ್ಳುವ
ಕೆಲಸಕ್ಕೀಗ ನಾನಾಗಿಯೇ
ನಿವೃತ್ತಿ ಪಡೆದಿದ್ದೇನೆ
ಯಾರಿಗೂ ಸಿಗದಂತೆ
ಉಳಿಸಿಕೊಂಡ
ಸೋತ-ಸೋಲುವ ಪದ್ಯಗಳ
ಜರೂರತ್ತು ನನಗಿಲ್ಲ
ಹೀಗೆಂದುಕೊಂಡೇ
ಬರೆದ ಪದ್ಯಗಳ ಲೆಕ್ಕವಿಲ್ಲ
ಗೋಡೆಗಳ ಮಧ್ಯೆ ಕುಳಿತು
ಹೀಗೆ ಒಬ್ಬೊಬ್ಬಳೆ
ಹೇಳಿಕೊಳ್ಳುವಾಗ
ತನ್ನದೇ ಪದ್ಯ ಗುನುಗುತ್ತಾ
ತಿರುಗುತ್ತಿರುವ ಫ್ಯಾನಿಗೆ,
ಎದೆಗೊಂದಿಷ್ಟು ನಿಟ್ಟುಸಿರು
ಕೊಡುವ ತವಕ
ನನಗಾಗಲೇ ಗಂಟಲು
ಕಟ್ಟಿರುವ ದುಃಖ
ಆತ್ಮದ ಬಂಧುವೆಂದರೆ
ಕನ್ನಡಿಯಿದ್ದಂತೆ ಎಂದು
ಯಾರೋ ಹೇಳಿದ ನೆನಪು,
ಸಧ್ಯ ನಿಂತಿದ್ದೇನೆ
ಅದೇ ಕನ್ನಡಿಯ ಮುಂದೆ
ನನ್ನೆದುರಿನಲಿ
ನನ್ನೊಳಗಿನ ಬಂಧು
ಥೇಟ್ ಸೋತ ಪದ್ಯದಂತೆ
ನಗುವಿಗೊಂದು ನಗು
ಅಳುವಿಗೊಂದು ಮಿಡಿತ,
ಸಂತಸಕ್ಕೋ?
ಇಷ್ಟು ಸಹಿಸುತ್ತಿರುವ
ಸಮ್ಯಮಕ್ಕೊ?
ಕಣ್ತುಂಬಿದಾಗಲೇ ಅರಿವಾದದ್ದು
ಹೌದು…
ಯಾರ ನರಕದಲ್ಲಿ ಯಾರೂ
ಜೀವಿಸಲಾಗುವುದಿಲ್ಲ
“ಕನ್ನಡಿ”ಯು ಬರಿ ಕನ್ನಡಿಯಷ್ಟೆ
ಕಣ್ಣೊರೆಸುವುದಿಲ್ಲ!

‍ಲೇಖಕರು avadhi

October 9, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Vasudev nadig

    ನನ್ನದೆ ಪದ್ಯ ಅನಿಸಿತು ‌ಬಹಳ ಆಪ್ತ ಪದ್ಯ ಭವ್ಯ

    ಪ್ರತಿಕ್ರಿಯೆ
  2. Nutana

    ಓಹ್…ಎಷ್ಟು ಚಂದದ ಕವಿತೆ…ತಾನೇ ಬರೆದಂತೆ ಎಲ್ಲರಿಗೂ ಅನ್ನಿಸುವಂತಿದೆ.
    ಭವ್ಯ..

    ಪ್ರತಿಕ್ರಿಯೆ
  3. Mithunraj

    “ಕನ್ನಡಿ”ಯು ಬರಿ ಕನ್ನಡಿಯಷ್ಟೆ
    ಕಣ್ಣೊರೆಸುವುದಿಲ್ಲ
    Title itself makes a huge impression..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: