
ಕನಸಿನಲಿ ಗಾಂಧಿ ಬರುವುದು
ಅಚ್ಚರಿಯೇನಲ್ಲ
ಆದರೆ ನನ್ನೊಂದಿಗೆ ವಾಕಿಂಗ್ ಹೊರಟಿದ್ದು
ನನ್ನನೊಮ್ಮೆ ರೋಮಾಂಚನಗೊಳಿಸಿತ್ತು
ಬಡತನದ ಬಗ್ಗೆ ಕೇಳಬಹುದೆಂದು
ಉತ್ತರಕ್ಕಾಗಿ ತಡಕಾಡುತ್ತಿದ್ದೆ
ಗಾಂಧಿ ಮುನ್ನಡೆಯುತ್ತಲೇ ಇದ್ದರು
ಭ್ರಷ್ಟಾಚಾರದ ಕುರಿತು ಯೋಚಿಸಿದೆ,ಮಹಿಳಾ ಶೋಷಣೆ! ಬಾಪು ನಮ್ಮನ್ನು
ತರಾಟೆಗೆ
ತೆಗೆದುಕೊಳ್ಳಬಹುದೇ?,ಆತಂಕವಾಗಿತ್ತು
ಬಾಪು ಮಾತ್ರ ತುಟಿ ಬಿಚ್ಚಲಿಲ್ಲ
ವಾಕಿಂಗ್ ಸ್ಟಿಕ್ ನ ಧ್ವನಿ ಮಾರ್ಧನಿಸುತ್ತಿತ್ತು
ಗಾಂಧಿಗೆ ಮೌನವೃತವೇ?ಮಾತಿಗೂ ಬರವೇ?
ನನ್ನ ಮಾತುಗಳು ನಿಂತಾಗ
‘ಬಾ ಮಗು’ ಎಂಬ ದ್ವನಿಗೆ
ಮತ್ತೆ ನನ್ನ ಕಾಲಿಗೆ ವಿದ್ಯುತ್ ಸಂಚರಿಸಿತು
ದಿಕ್ಕು ತಪ್ಪಿದ ರಾಜಕಾರಣ,ಮಾತು ಸೋತ ಭಾರತ
ಗಂಗೆಗೆ ಅನುರೂಪವಾಗಿ ನಾವು ಕೊಳೆಯಾದದ್ದು
ಊಹುಂ, ಗಾಂಧಿ ಏನೂ ಕೇಳಲಿಲ್ಲ
ಛೇ,ಇದೂ ಒಂದು ವಾಕಿಂಗೆ?
ಸಪ್ಪೆ
ಬಾಪು ನಿಂತಲ್ಲೇ ಕಲ್ಲಿನಂತೆ ನಿಂತಿದ್ದಾರೆ
ಲಗುಬಗನೆ ನಡೆದು ಎದುರು ನಿಂತೆ
ಮೌನ ಮುರಿದು ನುಡಿದರು
‘ನನಗೆ ಗೊತ್ತು,ನಿನ್ನ ಬಳಿ ಉತ್ತರವಿಲ್ಲ
ಸತ್ಯಾಗ್ರಹ ಮುಗಿದಿಲ್ಲ….
ಛೇ ಕನಸೆ?,ಎದ್ದು ಗಾಂಧಿಜಯಂತಿಗೆ ಅಣಿಯಾಗಲು ಹೊರಟೆ….
ಕನಸಿನಲಿ ಗಾಂಧಿ ಬರುವುದು ಅಚ್ಚರಿಯೇನಲ್ಲ…
ನಿಮಗೆ ಇವೂ ಇಷ್ಟವಾಗಬಹುದು…





ಬಾಪು ನಿಂತಲ್ಲೇ ಕಲ್ಲಿನಂತೆ ನಿಂತಿದ್ದಾರೆ
ಲಗುಬಗನೆ ನಡೆದು ಎದುರು ನಿಂತೆ
ಮೌನ ಮುರಿದು ನುಡಿದರು
‘ನನಗೆ ಗೊತ್ತು,ನಿನ್ನ ಬಳಿ ಉತ್ತರವಿಲ್ಲ
ಸತ್ಯಾಗ್ರಹ ಮುಗಿದಿಲ್ಲ….
ಛೇ ಕನಸೆ?,ಎದ್ದು ಗಾಂಧಿಜಯಂತಿಗೆ ಅಣಿಯಾಗಲು ಹೊರಟೆ….heart touching,,,
Very good poem!