ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಕದ ಮುಚ್ಚಿದ ಮನೆಯೆದುರು ನಿಂತರೆ…' – ದೇವಯಾನಿ

ಮರಳಿ ಬಾ ಒಲವೆ

ದೇವಯಾನಿ


ಹೆಜ್ಜೆ ಮೂಡಿದ ಹಾದಿಗಳಲಿ
ತರಗೆಲೆಗಳ ಮೊರೆತ
ಬೀಸು ಗಾಳಿಯ ಸುಯ್ಯಲಿನಲ್ಲಿ
ಕೊರೆವ ನೆನಪುಗಳು
ಎಲ್ಲೋ ಅಲೆವ ಎದೆ
ಜಾರಿದೊಲವು ಎಷ್ಟು ದಣಿದಿದೆಯೋ
ಕದ ಮುಚ್ಚಿದ ಮನೆಯೆದುರು
ನಿಂತರೆ ತಾಣವಿದೆಯಾ ನಿನಗಲ್ಲಿ
ಒಲವೆ?
ಕಳೆದು ಹೋದ ದಿನ ,ಕ್ಷಣಗಳಲಿ
ಕಳೆದುಹೋಗುತ್ತಿದ್ದೇವೆ ಹೀಗೇ…
ಹಬೆಯಾಡುವ ವಾಸ್ತವದಲ್ಲಿ
ಕರಗಿ ನೀರಾಗುವ ಕನಸುಗಳಲಿ…
ಇಡಿಯಾದ ಬದುಕಲ್ಲಿ ಹಿಡಿ
ಯಷ್ಟು ಹೃದಯ
ಹುಡುಕುವುದು ಒಂದಷ್ಟು
ಒಲವು
ಅಲೆವ ಮನಕೆ ನಿಲ್ಲಲೆಡೆಯಿಲ್ಲ
ಕನ್ನಡಿಯೊಳಗಿನ ಪ್ರತಿಬಿಂಬ ಗುರು
ತಾಗುವುದೇ ಇಲ್ಲ
ಮರಳಿ ಬಾ ಒಲವೆ
ಎದೆಗುಡಿಗೆ
ಪ್ರೀತಿಯೊಂದೇ ಅಪರೂಪ
ದ ಸರಕು ಜಗದೊಳಗೆ
 

‍ಲೇಖಕರು G

12 June, 2015

4 Comments

  1. noorullathyamagondlu

    ಪ್ರೀತಿಯನ್ನು ಹೀಗೆ ಕರೆದು
    ಹೃದಯದಲ್ಲಿ ಕೂರಿಸುವುದು ಎಷ್ಟು ಹಿತ.ಚೆನ್ನಾಗಿದೆ.

  2. smitha

    Thumba chennagide

  3. ಸ್ವರ್ಣಾ

    ‘ಪ್ರೀತಿಯೊಂದೇ ಅಪರೂಪ
    ದ ಸರಕು ಜಗದೊಳಗೆ’… ಇಷ್ಟ ಆಯ್ತು.

  4. Anonymous

    Kvana tumba chennagide. Heege bareyuttiri.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading