ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕದಲಿಕೆ ನನ್ನದಾ?..

ಅರ್ಥ!

ಅನನ್ಯ ತುಷಿರಾ 

ನಿಚ್ಚಳ ಭಾವಗಳು,
ನಿಲುವು-ಗೊಂದಲ..
ಕದಲಿಕೆ ನನ್ನದಾ?
ಜಗತ್ತಿನದಾ?
ನನಗರ್ಥವಾಗಲೇ ಇಲ್ಲ!

flowerಜೀವದ ಕನಸುಗಳು-
ವಾಸ್ತವ ದೂರ
ತಪ್ಪು???
ನನ್ನದಾ?
ಅಪ್ಪಿ ಒಪ್ಪಿಕೊಳ್ಳುವ
ಮನಸುಗಳದಾ?
ನನಗರ್ಥವಾಗಲೇ ಇಲ್ಲ!

ಮೌನ ಭಾರ
ಮಾತೂ ಹಗುರವಲ್ಲ!
ನಡುವಿನ
ಹಸಿವು
ಹಿಂಗುವುದೆಲ್ಲಿ?
ನನಗರ್ಥವಾಗಲೇ ಇಲ್ಲ!

ಭರವಸೆಯ ಹೆಜ್ಜೆ
ದ್ವಂದ್ವದ ಹಾದಿ…
ಬದುಕೆಂದುಕೊಂಡದ್ದು
ಉಸಿರಾಡುವುದೆಲ್ಲಿ?
ಹೊಸ ಉಸಿರಿಗೆ ಗರ್ಭಗಟ್ಟುವುದೆಲ್ಲಿ
ನನಗರ್ಥವಾಗಲೇ ಇಲ್ಲ!

ನಡೆದ ಸುಸ್ತು,
ಮೀರದ ಮನಸ್ಸು…
ಹುಡುಕಾಟ
-ವೆಂಬುದಿಲ್ಲಿ-`ಬದುಕು’.
ಬದುಕುತ್ತೇನೆಯೇ ಅದನು?
ನೀನೇ ಉತ್ತರವಾಗಬೇಕು
ನನಗರ್ಥವಾಗುತ್ತಿಲ್ಲ…

*****

‍ಲೇಖಕರು Admin

10 June, 2016

1 Comment

  1. mmshaik

    very..very good..nice one..ananya keep it up…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading